Select Your Language

Notifications

webdunia
webdunia
webdunia
webdunia

ಟೆಸ್ಟ್ ಪಂದ್ಯಗಳಲ್ಲಿ ಉತ್ತಮ ಪ್ರದರ್ಶನ-ಆಶ್ರಫ್

ಟೆಸ್ಟ್ ಪಂದ್ಯಗಳಲ್ಲಿ ಉತ್ತಮ ಪ್ರದರ್ಶನ-ಆಶ್ರಫ್
ನವದೆಹಲಿ , ಬುಧವಾರ, 21 ನವೆಂಬರ್ 2007 (15:21 IST)
ಪಾಕಿಸ್ತಾನ ಕ್ರಿಕೆಟ್ ತಂಡ ಶೋಯಬ್ ಮಲ್ಲಿಕ್ ನೇತ್ರತ್ವದಲ್ಲಿ ಮುಂಬರುವ ಟೆಸ್ಟ್ ಸರಣಿಯಲ್ಲಿ ಉತ್ತಮ ಪ್ರದರ್ಶನ ನೀಡಿ ಗೆಲುವು ಸಾಧಿಸಲಿದೆ ಎಂದು ಪಾಕ್ ಕ್ರಿಕೆಟ್ ಬೋರ್ಡ್ ಅಧ್ಯಕ್ಷ ನಸೀಮ್ ಅಶ್ರಫ್ ಭರವಸೆ ವ್ಯಕ್ತಪಡಿಸಿದ್ದಾರೆ.

ನಾಯಕ ಶೋಯಬ್ ಮಲ್ಲಿಕ್ ತಾಳ್ಮೆಯಿಂದ ಆಟವಾಡುವುದಿಲ್ಲ ಎಂದು ಜನತೆ ಟೀಕಿಸುತ್ತಿದ್ದರೂ ಯಶಸ್ವಿ ನಾಯಕನಾಗುವ ಭರವಸೆ ನನಗೆ ಇದೆ ಎಂದು ತಿಳಿಸಿದ್ದಾರೆ.

ಭಾರತದ ವಿರುದ್ದದ ಏಕದಿನ ಪಂದ್ಯದಲ್ಲಿ ಸರಣಿಯನ್ನು ಸೋಲುವುದರೊಂದಿಗೆ ನಾಯಕ ಶೋಯಬ್ ಮಲ್ಲಿಕ್ ಜಯಪುರ್‌ದಲ್ಲಿ 89 ರನ್‌ಗಳನ್ನು ಹೊರತುಪಡಿಸಿ ಉಳಿದ ಪಂದ್ಯಗಳಲ್ಲಿ ವಿಫಲವಾಗಿದ್ದರಿಂದ ಟೀಕೆಗಳ ಮಹಾಪೂರವನ್ನು ಎದುರಿಸುತ್ತಿದ್ದಾರೆ.

ಪಾಕ್ ತಂಡದ ಆಟಗಾರರೊಂದಿಗೆ ಮಾತನಾಡಿ ಸಲಹೆ ನೀಡಿದ ಆಶ್ರಫ್ ಉತ್ತಮವಾಗಿ ಆಡುವಂತೆ ಸಲಹೆ ನೀಡಿದ ಅವರು ಆಟಗಾರರು ತಮ್ಮ ತಪ್ಪನ್ನು ಅರ್ಥಮಾಡಿಕೊಂಡಿದ್ದು ಮುಂಬರುವ ಟೆಸ್ಟ್ ಪಂದ್ಯಗಳಲ್ಲಿ ಉತ್ತಮವಾಗಿ ಆಡುವ ನಿರೀಕ್ಷೆ ಇದೆ ಎಂದು ಆಶಾಭಾವನೆ ವ್ಯಕ್ತಪಡಿಸಿದರು.

Share this Story:

Follow Webdunia kannada