Select Your Language

Notifications

webdunia
webdunia
webdunia
webdunia

ಟೆಸ್ಟ್ ನಾಯಕತ್ವ ಉಳಿಸಲು ಧೋನಿ ನಿರ್ವಹಣೆ ನೀಡಲೇ ಬೇಕು: ಗಂಗೂಲಿ

ಟೆಸ್ಟ್ ನಾಯಕತ್ವ ಉಳಿಸಲು ಧೋನಿ ನಿರ್ವಹಣೆ ನೀಡಲೇ ಬೇಕು: ಗಂಗೂಲಿ
ನವದೆಹಲಿ , ಬುಧವಾರ, 29 ಫೆಬ್ರವರಿ 2012 (12:02 IST)
WD
ವಿದೇಶದಲ್ಲಿ ಸತತ ಎರಡು ಟೆಸ್ಟ್ ಸರಣಿ ಸೋಲಿನ ನಂತರ ತೀವ್ರ ಮುಖಭಂಗಕ್ಕೊಳಗಾಗಿರುವ ಭಾರತೀಯ ತಂಡದ ಟೆಸ್ಟ್ ನಾಯಕತ್ವ ಉಳಿಸಿಕೊಳ್ಳುವ ನಿಟ್ಟಿನಲ್ಲಿ ಮಹೇಂದ್ರ ಸಿಂಗ್ ಧೋನಿ ಉತ್ತಮ ಪ್ರದರ್ಶನ ನೀಡಲೇ ಬೇಕಾದ ಅಗತ್ಯವಿದೆ ಎಂದು ಮಾಜಿ ನಾಯಕ ಸೌರವ್ ಗಂಗೂಲಿ ಅಭಿಪ್ರಾಯಪಟ್ಟಿದ್ದಾರೆ.

ನಾಯಕತ್ವದಲ್ಲಿ ಧೋನಿ ಮುಂದುವರಿಯಬೇಕಾದ್ದಲ್ಲಿ ಬ್ಯಾಟ್‌ನಲ್ಲೂ ಮಿಂಚಬೇಕಾದ ಅಗತ್ಯವಿದೆ. ನೀವೀಗ ಅವರ ಪ್ರದರ್ಶನವನ್ನೇ ಗಮನಿಸಿ, ಟೆಸ್ಟ್ ತಂಡಕ್ಕೆ ಆರಿಸುವುದು ಅಸಾಧ್ಯ ಎಂದು ಗಂಗೂಲಿ ವಿವರಿಸಿದರು.

ವಿದೇಶದಲ್ಲಿ ಭಾರತದ ನಿರ್ವಹಣೆಯನ್ನೇ ಪರೀಕ್ಷಿಸಿ. ಸತತ ಎಂಟು ಪಂದ್ಯಗಳಲ್ಲಿ ಸೋಲನ್ನು ಕಂಡಿವೆ. ಇದುವೇ ತಂಡದಲ್ಲಿ ಬದಲಾವಣೆ ತರಲು ಹೇರಳವಾಗಿದೆ ಎಂದರು.

ಅದೇ ಹೊತ್ತಿಗೆ ವೀರೇಂದ್ರ ಸೆಹ್ವಾಗ್ ಅವರನ್ನು ಶ್ರೇಷ್ಠ ಟೆಸ್ಟ್ ಬ್ಯಾಟ್ಸ್‌ಮನ್ ಎಂದು ಗಂಗೂಲಿ ಬಣ್ಣಿಸಿದ್ದಾರೆ. ಆಡಿಲೇಡ್ ಟೆಸ್ಟ್‌ಗೂ ಮೊದಲು ವೀರು ತಂಡವನ್ನು ಮುನ್ನಡೆಸಿದ ಎಲ್ಲ ಪಂದ್ಯಗಳಲ್ಲೂ ಭಾರತ ಜಯಭೇರಿ ಮೊಳಗಿಸಿದೆ. ಹಾಗಾಗಿ ಅವರನ್ನು ಕೈಬಿಡುವ ಸಾಧ್ಯತೆಗಳಿಲ್ಲ ಎಂದಿದ್ದಾರೆ.

ಆದರೆ ಗಂಗೂಲಿ ಹೇಳಿಕೆಯನ್ನು ನಿರಾಕರಿಸಿದ ಚೊಚ್ಚಲ ವಿಶ್ವಕಪ್ ವಿಜೇತ ನಾಯಕ ಕಪಿಲ್ ದೇವ್, ಧೋನಿ ತಂಡದಲ್ಲಿದ್ದರೆ ಅದುವೇ ಆಟಗಾರರಿಗೆ ದೊಡ್ಡ ಪ್ರೇರಣೆಯಾಗುತ್ತದೆ. ಆದರೆ ಸೆಹ್ವಾಗ್ ವಿಚಾರದಲ್ಲಿ ಹಾಗಾಗುತ್ತಿಲ್ಲ. ಆದ್ದರಿಂದ ನಾಯಕತ್ವ ಬದಲಾವಣೆ ಸರಿಯದ ಕ್ರಮವಲ್ಲ ಎಂದರು.

ಸರಣಿ ಸೋಲಿಗೆ ಕೇವಲ ಧೋನಿ ಒಬ್ಬರನ್ನೇ ದೂಷಿಸುವುದು ಸರಿಯಲ್ಲ. ಕ್ರಿಕೆಟ್ ತುಂಬಾನೇ ಬದಲಾಗಿದೆ. ಹಿರಿಯ ಆಟಗಾರರು ಸಹ ವೈಫಲ್ಯ ಅನುಭವಿಸಿದ್ದಾರೆ. ಆದರೆ ಅವರ ಬಗ್ಗೆ ಯಾರೂ ಮಾತನಾಡುತ್ತಿಲ್ಲ ಎಂದರು.

Share this Story:

Follow Webdunia kannada