Webdunia - Bharat's app for daily news and videos

Install App

ಗೆಲುವಿಗೆ ತಂಡವೇ ಕಾರಣ: ಜಂಬೋ

Webdunia
ಸೋಮವಾರ, 26 ನವೆಂಬರ್ 2007 (16:09 IST)
PTI
ಬದ್ಧ ವೈರಿ ಪಾಕಿಸ್ತಾನ ವಿರುದ್ಧ ಸ್ಮರಣೀಯ ಗೆಲುವು ಸಾಧಿಸುವಂತೆ ತಂಡವನ್ನು ಮುನ್ನಡೆಸಿದ ತಂಡದ ನಾಯಕ ಅನಿಲ್ ಕುಂಬ್ಳೆ ಅವರು ಇಂದಿನ ಈ ಸ್ಮರಣೀಯ ಗೆಲುವಿಗೆ ತಂಡದ ಒಟ್ಟಾರೆ ಪ್ರದರ್ಶನ ಕಾರಣ ಎಂದು ಹೇಳಿದ್ದಾರೆ.

ಪರಿಸ್ಥಿತಿಗೆ ಅನುಗುಣವಾಗಿ ಬ್ಯಾಟಿಂಗ್, ಬೌಲಿಂಗ್ ಮತ್ತು ಇತರ ವಿಭಾಗಗಳಲ್ಲಿ ಆಟವನ್ನು ಪ್ರದರ್ಶಿಸಿದ್ದು ಗೆಲುವಿಗೆ ಕಾರಣವಾಯಿತು. ಮೊದಲ ಬಾರಿಗೆ ಟೆಸ್ಟ್ ತಂಡದ ನಾಯಕನಾಗಿ ಗೆಲುವನ್ನೆ ದಕ್ಕಿಸಿಕೊಂಡ ಅಪರೂಪದ ನಾಯಕ ಎಂದು ಕುಂಬ್ಳೆ ಹೆಸರು ಪಡೆಯುವಂತಾಯಿತು.

ನನ್ನ ಮಟ್ಟಿಗೆ ಇದೊಂದು ನೆನಪಿನಲ್ಲಿ ಉಳಿಯಬಹುದಾದಂತಹ ಐತಿಹಾಸಿಕ ಗೆಲುವು. ಫಿರೋಜ್ ಷಾ ಕೋಟ್ಲಾ ಮೈದಾನದೊಂದಿಗೆ ನನ್ನದೇ ಆದ ಅಪರೂಪದ ನೆನಪುಗಳು ಸಾದನೆಗಳು ಮೇಳೈಸಿವೆ. ಬೌಲರುಗಳ ಕುರಿತು ವಿಶೇಷವಾಗಿ ಮಾತನಾಡಿದ ಕುಂಬ್ಳೆ ಎರಡು ಇನ್ನಿಂಗ್ಸ್‌ಗಳಲ್ಲಿ ಪಾಕ್ ತಂಡವನ್ನು 250ರನ್‌ಗಳ ಒಳಗೆ ಕಟ್ಟಿ ಹಾಕಿದ್ದು, ಬ್ಯಾಟ್ಸಮನ್‌ಗಳಿಗೆ ಸೂಕ್ತ ವೇದಿಕೆ ಒದಗಿಸಿತು.

ಬೌಲಿಂಗ್ ನಂತರ ಬ್ಯಾಟಿಂಗ್ ಕೂಡ ಅಷ್ಟೇ ಪರಿಣಾಮಕಾರಿಯಾಗಿ ತನ್ನ ಆಟವನ್ನು ಪ್ರದರ್ಶಿಸಿತು. ಲಕ್ಷ್ಮಣ-ಧೋನಿಯ ನಡುವಿನ ಮೊದಲ ಇನ್ನಿಂಗ್ಸ್ ಜೊತೆಯಾಟ, ಎರಡನೆ ಇನ್ನಿಂಗ್ಸ್‌ನಲ್ಲಿ ಜಾಫರ್-ದ್ರಾವಿಡ್, ಸಚಿನ್ ಸೌರವ್ ನಡುವಿನ ಜೊತೆಯಾಟಗಳು ತಂಡವನ್ನು ಅಕ್ಷರಶಃ ಗೆಲುವಿನ ಅಂಚಿಗೆ ಸರಿಸಿತು.

ಪಂದ್ಯ ಪುರುಷೋತ್ತಮ ಪ್ರಶಸ್ತಿ ಸ್ವೀಕರಿಸಿ ಮಾತನಾಡುತ್ತಿದ್ದ ಅವರು, ಈ ವಯಸ್ಸಿನಲ್ಲಿ, ಅದೂ ಮೂರೇ ತಿಂಗಳ ವಿಶ್ರಾಂತಿಯ ನಂತರ ಪಂದ್ಯವೋಂದರಲ್ಲಿ ಏಳು ವಿಕೆಟ್ ತೆಗೆದದ್ದು ಉತ್ತಮ ಸಂಗತಿ ಎಂದು ಹೇಳಿದರು.

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಸ್ಟ್ರಾಂಗ್ ಪ್ಲೇಯರ್ ಕೊಹ್ಲಿ ಇರುವಾಗ ವೀಕ್ ಪ್ಲೇಯರ್ ರೋಹಿತ್ ಯಾಕೆ ಕ್ಯಾಪ್ಟನ್ ಆಗಿದ್ದಾರೆ?

ಪ್ರಾಕ್ಟೀಸ್ ಸೆಷನ್ ಗೆ ವಿರಾಟ್ ಕೊಹ್ಲಿ-ಬುಮ್ರಾ ಚಕ್ಕರ್

ಮಗಳ ಬರ್ತ್ ಡೇ ಪಾರ್ಟಿಯಲ್ಲಿ ಟಾಯ್ ಟ್ರೈನ್ ನಲ್ಲಿ ಮಸ್ತ್ ಮಜಾ ಮಾಡಿದ ರೋಹಿತ್ ಶರ್ಮಾ

INDWvsAusw ODI: ಭಾರತ ಮಹಿಳಾ ಕ್ರಿಕೆಟ್ ಆಟಗಾರ್ತಿ ಸ್ನೇಹಾ ರಾಣಾ ತಲೆಗೆ ಗಂಭೀರ ಗಾಯ

INDvsSA test: ಎರಡನೇ ಟೆಸ್ಟ್ ಗೆ ಟೀಂ ಇಂಡಿಯಾದಲ್ಲಿ ಈ ಬದಲಾವಣೆ ಖಚಿತ

Show comments