Webdunia - Bharat's app for daily news and videos

Install App

ಗಿಲ್ಲಿ ಮಾನಸಿಕ ಸ್ಥಿಮಿತ ಕಳೆದುಕೊಂಡಿದ್ದಾರೆ: ಭಜ್ಜಿ

Webdunia
ಸೋಮವಾರ, 3 ನವೆಂಬರ್ 2008 (12:29 IST)
PTI
ಪಿಚ್‌ ಅನ್ನು ಗಮನಿಸಿ ಪಂದ್ಯದಿಂದ ನುಣುಚಿಕೊಳ್ಳುತ್ತಿದ್ದುದಾಗಿ ಹರಭಜನ್ ಸಿಂಗ್‌ರನ್ನು ಟೀಕಿಸಿರುವ ಆಡಂ ಗಿಲ್‌ಕ್ರಿಸ್ಟ್‌ರಿಗೆ ಕಟುವಾದ ಪ್ರತ್ಯುತ್ತರ ನೀಡಿರುವ ಹರಭಜನ್ ಸಿಂಗ್, ಮಾಜಿ ಆಸ್ಟ್ರೇಲಿಯನ್ ಕ್ರಿಕೆಟಿಗ ತಮ್ಮ ಮಾನಸಿಕ ಸಂತುಲನ ಕಳೆದುಕೊಂಡಿದ್ದಾರೆ ಎಂದಿದ್ದಾರೆ.

" ನಿಜ ಹೇಳಬೇಕೆಂದರೆ ಅವರು ತಮ್ಮ ಮಾನಸಿಕ ಸಂತುಲನ ಕಳೆದುಕೊಂಡಿದ್ದಾರೆ. ಇದು ನನ್ನ ಬಗ್ಗೆ ಪ್ರಾಮಾಣಿಕ ಟೀಕೆಯೇ? ನಾನು ಪಂದ್ಯಗಳಿಂದ ನುಣುಚಿಕೊಳ್ಳುತ್ತೇನೆ ಎಂದು ನನ್ನ ಟೀಕಾಕಾರರೂ ಸಹ ಹೇಳಿಲ್ಲ" ಎಂದು ಹರಭಜನ್ ಹೇಳಿದ್ದಾರೆ.

ಹಸಿರು ಹಾಸಿನ ಪಿಚ್‌ ಅನ್ನು ಗಮನಿಸಿ ಹರಭಜನ್ 2004-05ನೇ ಸಾಲಿನ ನಾಗಪುರ ಟೆಸ್ಟ್‌ನಿಂದ ತಪ್ಪಿಸಿಕೊಂಡಿದ್ದರು ಎಂದು ತಮ್ಮ ಜೀವನ ಚರಿತ್ರೆ 'ಟ್ರೂ ಕಲರ್ಸ್‌'ನಲ್ಲಿ ಗಿಲ್‌ಕ್ರಿಸ್ಟ್ ಬರೆದಿದ್ದಾರೆ.

" ಅವರಿಗೆ ಹೀಗೆ ಅನಿಸುವುದಾದರೆ, ಅವರ ಪುಸ್ತಕವನ್ನು ಮಾರಾಟ ಮಾಡಲು ಇದೊಂದೇ ತಂತ್ರವಾದರೆ, ಅವರಿಗೆ ಶುಭವಾಗಲಿ" ಎಂದು ಹರಭಜನ್ ಹೇಳಿದರು.

" ತಮ್ಮ ಪುಸ್ತಕವನ್ನು ಮಾರಾಟ ಮಾಡುವುದೊಂದೇ ಅವರ ಪರಮೋದ್ದೇಶವಾದರೆ ತಮ್ಮ ತಂಡದ ಸಹವರ್ತಿಗಳನ್ನೇ ಇದಕ್ಕಾಗಿ ಬಳಸಿಕೊಳ್ಳಬಹುದೆಂಬ ಸಲಹೆಯನ್ನು ನಾನು ಗಿಲ್‌ಕ್ರಿಸ್ಟ್‌ರಿಗೆ ನೀಡಲು ಬಯಸುತ್ತೇನೆ. ಇದರಿಂದ ಅವರಿಗೆ ಬಹಳಷ್ಟು ವಿಷಯಗಳು ದೊರಕುತ್ತವೆ ಮತ್ತು ಅವು ಸತ್ಯ ಸಂಗತಿಗಳೇ ಆಗಿರುವುದರಿಂದ, ಸುಳ್ಳುಗಳನ್ನು ಸೃಷ್ಟಿಸುವ ಅಗತ್ಯ ಬೀಳುವುದಿಲ್ಲ" ಎಂದು ಹರಭಜನ್ ವ್ಯಂಗ್ಯಾವಾಡಿದ್ದಾರೆ.

ನ್ಯೂಜಿಲ್ಯಾಂಡ್‌ನಲ್ಲಿರಲಿ ಅಥವಾ ಇಂಗ್ಲೆಂಡ್ ಅಥವಾ ದಕ್ಷಿಣ ಆಫ್ರಿಕಾದಲ್ಲಿರಲಿ, ತಮ್ಮ ಕೆರಿಯರ್‌ನಲ್ಲಿ ಹಲವಾರು ಬಾರಿ ಹಸಿರು ಹಾಸಿನ ಪಿಚ್‌ನಲ್ಲಿ ಬೌಲಿಂಗ್‌ ನಡೆಸಿ ಯಶಸ್ವಿಯೆನಿಸಿರುವ ಹಲವಾರು ದೃಷ್ಟಾಂತಗಳನ್ನು ಹರಭಜನ್ ನೀಡಿದರು.

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಸ್ಟ್ರಾಂಗ್ ಪ್ಲೇಯರ್ ಕೊಹ್ಲಿ ಇರುವಾಗ ವೀಕ್ ಪ್ಲೇಯರ್ ರೋಹಿತ್ ಯಾಕೆ ಕ್ಯಾಪ್ಟನ್ ಆಗಿದ್ದಾರೆ?

ಪ್ರಾಕ್ಟೀಸ್ ಸೆಷನ್ ಗೆ ವಿರಾಟ್ ಕೊಹ್ಲಿ-ಬುಮ್ರಾ ಚಕ್ಕರ್

ಮಗಳ ಬರ್ತ್ ಡೇ ಪಾರ್ಟಿಯಲ್ಲಿ ಟಾಯ್ ಟ್ರೈನ್ ನಲ್ಲಿ ಮಸ್ತ್ ಮಜಾ ಮಾಡಿದ ರೋಹಿತ್ ಶರ್ಮಾ

INDWvsAusw ODI: ಭಾರತ ಮಹಿಳಾ ಕ್ರಿಕೆಟ್ ಆಟಗಾರ್ತಿ ಸ್ನೇಹಾ ರಾಣಾ ತಲೆಗೆ ಗಂಭೀರ ಗಾಯ

INDvsSA test: ಎರಡನೇ ಟೆಸ್ಟ್ ಗೆ ಟೀಂ ಇಂಡಿಯಾದಲ್ಲಿ ಈ ಬದಲಾವಣೆ ಖಚಿತ

Show comments