Select Your Language

Notifications

webdunia
webdunia
webdunia
webdunia

ಗಾಯಾಳು ಖರ್ಚು ಫ್ರಾಂಚೈಸಿಗಳ ಹೊಣೆ: ಎನ್‌ಸಿಎ ತೀರ್ಮಾನ

ಗಾಯಾಳು ಖರ್ಚು ಫ್ರಾಂಚೈಸಿಗಳ ಹೊಣೆ: ಎನ್‌ಸಿಎ ತೀರ್ಮಾನ
ಚೆನ್ನೈ , ಮಂಗಳವಾರ, 23 ಏಪ್ರಿಲ್ 2013 (15:27 IST)
PR
PR
ಇಂಡಿಯನ್ ಪ್ರೀಮಿಯರ್ ಲೀಗ್‌ನಲ್ಲಿ ಭಾಗವಹಿಸಿರುವ ಭಾರತ ತಂಡದ ಆಟಗಾರರು ಗಾಯಗೊಂಡಲ್ಲಿ, ರಾಷ್ಟ್ರೀಯ ಕ್ರಿಕೆಟ್ ಆಕಾಡೆಮಿಯಲ್ಲಿ ಗಾಯಾಳು ಆಟಗಾರರ ಪುನಃಶ್ಚೈತನ್ಯಕ್ಕೆ ಬೇಕಾದ ಖರ್ಚನ್ನು, ಗಾಯಗೊಂಡ ಆಟಗಾರರು ಪ್ರತಿನಿಧಿಸಿರುವ ಫ್ರಾಂಚೈಸಿಗಳೇ ಭರಿಸಬೇಕಂತೆ.

ಚೆನ್ನೈನಲ್ಲಿ ಸೋಮವಾರ ನಡೆದ ಎನ್‌ಸಿಎ ಸಮಿತಿಯ ಸಭೆಯಲ್ಲಿ ಈ ತೀರ್ಮಾನ ತೆಗೆದುಕೊಳ್ಳಲಾಗಿದೆ. ಅಲ್ಲದೆ ಸಭೆಯಲ್ಲಿ ಭಾಗವಹಿಸಿದ್ದ ಹೆಚ್ಚಿನ ಸದಸ್ಯರು ಈ ಕುರಿತು ಒಪ್ಪಿಗೆ ನೀಡಿದ್ದಾರೆ. ಹೀಗಾಗಿ ಐಪಿಎಲ್‌ನಲ್ಲಿ ಗಾಯಗೊಂಡು ಎನ್‌ಸಿಎನಲ್ಲಿ ಪುನಶ್ಚೈತನ್ಯ ಪಡೆಯುವ ಆಟಗಾರರ ಖರ್ಚು ಭರಿಸುವ ಬಗ್ಗೆ ಇದ್ದ ಸಮಸ್ಯೆ ಅಂತ್ಯಗೊಂಡಿದೆ.

'ಐಪಿಎಲ್‌ನಲ್ಲಿ ಗಾಯಗೊಳ್ಳುವ ಆಟಗಾರನಿಗೆ ಎನ್‌ಸಿಎನಲ್ಲಿ ನೀಡಲಾಗುವ ಪುನಶ್ಚೈತನ್ಯ ಹಾಗೂ ಚಿಕಿತ್ಸೆಯ ಖರ್ಚನ್ನು ಆಟಗಾರ ಪ್ರತಿನಿಧಿಸುವ ಫ್ರಾಂಚೈಸಿ ಭರಿಸಬೇಕು' ಎಂದು ಎನ್‌ಸಿಎ ಅಧಿಕಾರಿಗಳು ತಿಳಿಸಿದ್ದಾರೆ.

Share this Story:

Follow Webdunia kannada