Select Your Language

Notifications

webdunia
webdunia
webdunia
webdunia

ಗಂಗೂಲಿ ಕೈಬಿಡಲು ಧೋನಿ ಒತ್ತಾಯ-ಪ್ರಸೂನ್

ಗಂಗೂಲಿ ಕೈಬಿಡಲು ಧೋನಿ ಒತ್ತಾಯ-ಪ್ರಸೂನ್
ಕೊಲ್ಕತ್ತಾ , ಮಂಗಳವಾರ, 22 ಜನವರಿ 2008 (11:39 IST)
ಸೌರವ್‌ ಗಂಗೂಲಿಯನ್ನು ಆಸ್ಟ್ರೇಲಿಯಾ ವಿರುದ್ದದ ಏಕದಿನ ಸರಣಿಗೆ ಕೈಬಿಡಬೇಕೆಂದು ತಂಡದ ನಾಯಕ ಎಂ.ಎಸ್. ಧೋನಿ ಒತ್ತಡ ತಂದಿದ್ದರೆಂದು ಕೊಲ್ಕತ್ತಾ ಕ್ರಿಕೆಟ್ ‌ಬೋರ್ಡ್ ಅಧ್ಯಕ್ಷ ಪ್ರಸೂನ್ ಮುಖರ್ಜಿ ತಿಳಿಸಿದ್ದಾರೆ.

ಮಾಧ್ಯಮಗಳೊಂದಿಗೆ ಮಾತನಾಡಿದ ಮುಖರ್ಜಿ ಬಿಸಿಸಿಐ ಅಧ್ಯಕ್ಷ ಶರದ್‌ಪವಾರ್ ಅವರೊಂದಿಗೆ ಈ ಕುರಿತು ಚರ್ಚಿಸಿದ್ದು, ಕ್ರಿಕೆಟ್ ಅಡಳಿತ ಮಂಡಳಿ ಆಯ್ಕೆ ಸಮಿತಿಯ ವಿಷಯದಲ್ಲಿ ಹಸ್ತಕ್ಷೇಪ ಮಾಡುವುದಿಲ್ಲ. ನಿಮ್ಮ ಅನಿಸಿಕೆಗಳು ಹಾಗೂ ಸಂಬಂಧಿತರ ಅಭಿಪ್ರಾಯಗಳನ್ನು ತಂಡದ ನಾಯಕ ಧೋನಿಯವರೊಂದಿಗೆ ಮಾತನಾಡಿ ನಿಮಗಾಗಿರುವ ಆಘಾತ ಮತ್ತು ನಿರಾಶೆಯ ಬಗ್ಗೆ ಚರ್ಚಿಸಲಾಗುವುದು ಎಂದು ಹೇಳಿದ್ದಾರೆ ಎಂದು ಮುಖರ್ಜಿ ತಿಳಿಸಿದರು.

ಕಳೆದ ವರ್ಷ ಉತ್ತಮ ಪ್ರದರ್ಶನ ನೀಡಿದ ಸೌರವ್ ಗಂಗೂಲಿಯವರನ್ನು ತಂಡದಿಂದ ಕೈಬಿಟ್ಟಿರುವುದಕ್ಕೆ ಬಿಸಿಸಿಐ ಅಧ್ಯಕ್ಷ ಶರದ್ ಪವಾರ್ ಕೂಡಾ ಆಘಾತ ಮತ್ತು ನಿರಾಶೆ ವ್ಯಕ್ತಪಡಿಸಿದ್ದಾರೆ ಎಂದು ಹೇಳಿದರು.

ಪಾಕಿಸ್ತಾನದ ವಿರುದ್ದದ ಪಂದ್ಯಗಳಲ್ಲಿ ಪಂದ್ಯಪುರುಷೋತ್ತಮ ಗೌರವಕ್ಕೆ ಪಾತ್ರರಾದ ಸೌರವ್‌ ಗಂಗೂಲಿಯವರನ್ನು ತಂಡದಲ್ಲಿ ಆಯ್ಕೆ ಮಾಡದಿರುವುದಕ್ಕೆ ನಗರಾದ್ಯಂತ ಕ್ರಿಕೆಟ್ ಅಭಿಮಾನಿಗಳು ಪ್ರತಿಭಟನೆ ನಡೆಸುತ್ತಿದ್ದಾರೆ

ತಂಡವನ್ನು ಗೆಲುವಿನತ್ತ ಕೊಂಡೊಯ್ಯಲು ಉತ್ತಮ ಆಟಗಾರರನ್ನು ಆರಿಸುವುದು ನಾಯಕನ ಜವಾಬ್ದಾರಿ.ಆದರೆ ಗಂಗೂಲಿ ಕಳೆದ ವರ್ಷದಿಂದ ಉತ್ತಮ ಪ್ರದರ್ಶನ ನೀಡುತ್ತಿದ್ದಾರೆ. ಆದರೂ ಗಂಗೂಲಿಯವರನ್ನು ಕೈಬಿಡುವಂತೆ ಧೋನಿ ಒತ್ತಾಯಿಸಿರುವುದನ್ನು ನೋಡಿದರೆ ಹಿರಿಯ ಆಟಗಾರರೊಂದಿಗೆ ಧೋನಿ ಆಡಲು ಬಯಸುವುದಿಲ್ಲ ಎನ್ನುವುದು ಸ್ಪಷ್ಟವಾಗುತ್ತದೆ.

ಹಿರಿಯ ಆಟಗಾರರು ತಂಡದಲ್ಲಿದ್ದರೇ ಅವರನ್ನು ನಿಯಂತ್ರಿಸುವುದು ಕಷ್ಟವಾಗುತ್ತದೆ.ತನ್ನದೇ ಆದ ತಂಡವನ್ನು ರೂಪಿಸಿದಲ್ಲಿ ತಂಡದ ಮೇಲೆ ತಮ್ಮ ಪ್ರಬಾವ ಬೀರಬಹುದು. ಆದರೆ ಸೌರವ್ ತಂಡದಲ್ಲಿ ಸೇರ್ಪಡೆಯಾಗಿದ್ದಲ್ಲಿ ತಂಡಕ್ಕೆ ಸಹಾಯಕವಾಗುತ್ತಿತ್ತು ಎಂದು ಮುಖರ್ಜಿ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.



Share this Story:

Follow Webdunia kannada