Select Your Language

Notifications

webdunia
webdunia
webdunia
webdunia

ಕ್ರಿಕೆಟ್: ಪಾಕಿಸ್ತಾನ ತಂಡ ವೆಸ್ಟ್ ಇಂಡೀಸ್ ಪ್ರವಾಸ

ಕ್ರಿಕೆಟ್: ಪಾಕಿಸ್ತಾನ ತಂಡ ವೆಸ್ಟ್ ಇಂಡೀಸ್ ಪ್ರವಾಸ
ಸೇಂಟ್‌ ಜಾನ್ಸ್‌ (ಆಂಟಿಗಾ) , ಶನಿವಾರ, 29 ಜೂನ್ 2013 (13:57 IST)
PTI
ವೆಸ್ಟ್‌ ಇಂಡೀಸ್‌ ಕ್ರಿಕೆಟ್‌ ಮಂಡಳಿ ಮುಂಬರುವ ಪ್ರವಾಸಿ ಪಾಕಿಸ್ಥಾನ ವಿರುದ್ಧದ ಸರಣಿಯ ವೇಳಾಪಟ್ಟಿಯನ್ನು ಬಿಡುಗಡೆ ಮಾಡಿದೆ. ಈ ಸರಣಿಯಲ್ಲಿ 5 ಏಕದಿನ ಹಾಗೂ 2 ಟಿ-20 ಪಂದ್ಯಗಳಿದ್ದು, ಜು. 14ರಿಂದ ಮುಖಾಮುಖೀ ಮೊದಲ್ಗೊಳ್ಳಲಿದೆ.

ಒಂದು ವರ್ಷದ ವಿರಾಮದ ಬಳಿಕ ಗಯಾನಾಕ್ಕೆ ಅಂತಾರಾಷ್ಟ್ರೀಯ ಪಂದ್ಯದ ಆತಿಥ್ಯ ಲಭಿಸುತ್ತಿರುವುದು ಈ ವೇಳಾಪಟ್ಟಿಯ ವಿಶೇಷ. ಇಲ್ಲಿ ಸರಣಿಯ ಮೊದಲೆರಡು ಏಕದಿನ ಪಂದ್ಯಗಳು ಸಾಗಲಿವೆ (ಜು. 14 ಮತ್ತು 16). ಉಳಿದ 3 ಏಕದಿನ ಮುಖಾಮುಖೀಗಳ ತಾಣ ಸೇಂಟ್‌ ಲೂಸಿಯಾ (ಜು. 19, 21 ಮತ್ತು 24). ಎರಡು ಟಿ-20 ಪಂದ್ಯಗಳು ಸೇಂಟ್‌ ವಿನ್ಸೆಂಟ್‌ನಲ್ಲಿ ನಡೆಯುತ್ತವೆ (ಜು. 27 ಮತ್ತು 28).

Share this Story:

Follow Webdunia kannada