Select Your Language

Notifications

webdunia
webdunia
webdunia
webdunia

ಕ್ರಿಕೆಟ್‌ ಬೆಟ್ಟಿಂಗ್‌‌: ಮತ್ತೊಬ್ಬ ಬುಕ್ಕಿಯ ಬಂಧನ

ಕ್ರಿಕೆಟ್‌ ಬೆಟ್ಟಿಂಗ್‌‌: ಮತ್ತೊಬ್ಬ ಬುಕ್ಕಿಯ ಬಂಧನ
ಹೈದರಾಬಾದ್‌ , ಶುಕ್ರವಾರ, 24 ಮೇ 2013 (15:03 IST)
PR
PR
ದೆಹಲಿ ಪೊಲೀಸ್‌ ತಂಡ ಇಂದು ಬೆಳಿಗ್ಗೆ ಇಲ್ಲಿನ ರಾಜೀವ್‌ ಗಾಂಧಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ದುಬೈಗೆ ಪ್ರಯಾಣ ಬೆಳೆಸಲಿದ್ದ, ಐಪಿಎಲ್‌ ಕ್ರಿಕೆಟ್‌ ಬೆಟ್ಟಿಂಗ್‌ ಜಾಲದ ಶಂಕಿತ ಬುಕ್ಕಿ ಯಾಹ್ಯಾ ಮೊಹಮ್ಮದ್‌ ಎಂಬಾತನನ್ನು ಸೆರೆ ಹಿಡಿದಿದ್ದಾರೆ.

ಐಪಿಎಲ್‌ ಬೆಟ್ಟಿಂಗ್‌ ಜಾಲ, ಸ್ಪಾಟ್‌ ಫಿಕ್ಸಿಂಗ್‌ ಇತ್ಯಾದಿ ಹಗರಣಗಳು ದಿನ ನಿತ್ಯವೆಂಬಂತೆ ಹೊಸ ಹೊಸ ತಿರುವುಗಳನ್ನು ಪಡೆದುಕೊಳ್ಳುತ್ತಿದೆ. ಈ ತನಕ 18 ಮಂದಿಯನ್ನು ಐಪಿಎಲ್‌ ಫಿಕ್ಸಿಂಗ್‌ ಹಗರಣಕ್ಕೆ ಸಂಬಂಧಿಸಿ ಬಂಧಿಸಲಾಗಿದೆ.ಇವರಲ್ಲಿ ಮೂವರು ಐಪಿಎಲ್‌ ಆಟಗಾರರು, ನಾಲ್ವರು ಮಾಜಿ ಕ್ರಿಕೆಟಿಗರು ಮತ್ತು 11 ಬುಕ್ಕಿಗಳು ಸೇರಿದ್ದಾರೆ.

ರಾಜಸ್ಥಾನ್‌ ರಾಯಲ್ಸ್‌ ತಂಡದ ಚಾಂಡಿಲಾ, ಶ್ರೀಶಾಂತ್‌ ಹಾಗೂ ಅಂಕಿತ್‌ ಚವಾಣ್‌ ಬಂಧಿತ ಆಟಗಾರರಲ್ಲಿ ಪ್ರಮುಖರಾಗಿದ್ದಾರೆ. ಈ ನಡುವೆ ಚೆನ್ನೈ ಸೂಪರ್ ಕಿಂಗ್‌ ತಂಡ ಮೂವರು ಆಟಗಾರರು ಫಿಕ್ಸಿಂಗ್‌ನಲ್ಲಿ ಭಾಗಿಯಾಗಿದ್ದಾರೆಂದು ಬಂಧಿತ ಬುಕ್ಕಿ, ಬಾಲಿವುಡ್‌ ನಟ ವಿಂದೂ ದಾರಾಸಿಂಗ್‌ ಬಾಯಿಬಿಟ್ಟಿರುವ ಹಿನ್ನೆಲೆಯಲ್ಲಿ ಮಹೇಂದ್ರ ಸಿಂಗ್‌ ಧೋನಿ ನೇತೃತ್ವದ ಚೆನ್ನೈ ತಂಡಕ್ಕೂ ಫಿಕ್ಕಿಂಗ್‌ ಉರುಳು ಸುತ್ತಿಕೊಂಡಿದೆ.

Share this Story:

Follow Webdunia kannada