Select Your Language

Notifications

webdunia
webdunia
webdunia
webdunia

ಕರ್ನಾಟಕದ ಮುಡಿಗೇರಿದ 'ವಿಜಯ್' ಹಜಾರೆ ಟ್ರೋಫಿ

ಕರ್ನಾಟಕದ ಮುಡಿಗೇರಿದ 'ವಿಜಯ್' ಹಜಾರೆ ಟ್ರೋಫಿ
ಕೋಲ್ಕಾತಾ , ಸೋಮವಾರ, 17 ಮಾರ್ಚ್ 2014 (18:13 IST)
PTI
ಅಂತಿಮ ಹಣಾಹಣಿಯಲ್ಲಿ ರೇಲ್ವೇಸ್ ತಂಡವನ್ನು ಸೋಲಿಸುವುದರ ಮೂಲಕ ವಿಜಯ್ ಹಜಾರೆ ಟ್ರೋಫಿಯನ್ನು ಮುಡಿಗೇರಿಸಿಕೊಂಡಿರುವ ಕರ್ನಾಟಕ ತಂಡ ಹ್ಯಾಟ್ರಿಕ್ ಸಾಧನೆ ಮಾಡುವುದರೊಂದಿಗೆ ಕ್ರಿಕೆಟ್ ಸಾಮ್ರಾಜ್ಯದಲ್ಲಿ ತನ್ನ ಸಾಮರ್ಥ್ಯವನ್ನು ಮತ್ತೊಮ್ಮೆ ಜಗತ್ತಿಗೆ ತೋರಿಸಿಕೊಟ್ಟಿತು. ಈಗಾಗಲೇ, ದೇಶಿಯ ಕ್ರಿಕೆಟ್ ನ ಅತ್ಯುನ್ನತ ಪಂದ್ಯಾವಳಿಗಳಾದ ಇರಾನಿ ಟ್ರೋಫಿ, ರಣಜಿ ಟ್ರೋಫಿ ಎತ್ತಿ ಹಿಡಿದಿರುವ ವಿನಯ್ ಬಳಗ ಈಗ ವಿಜಯ್ ಹಜಾರೆ ಟ್ರೋಫಿ ಗೆದ್ದಿದ್ದು ದೇಶದ ಕ್ರಿಕೆಟ್ ಇತಿಹಾಸದಲ್ಲಿಯೇ ಹೊಸ ಅಧ್ಯಾಯ ಬರೆದಿದೆ. ಈ ಮೂಲಕ ಇತಿಹಾಸ ನಿರ್ಮಿಸಿ ಕರ್ನಾಟಕದ ಜನತೆಗೆ ಹೋಳಿ ಸಂಭ್ರಮ ನೀಡಿದೆ.

ಕರುಣ್ ನಾಯರ ಮತ್ತು ಅಭಿಮನ್ಯು ಮಿಥುನ್ ಅವರ ಅಮೋಘ ಪ್ರದರ್ಶನದಿಂದ ಕರ್ನಾಟಕ ತಂಡ ವಿಜಯ್ ಹಜಾರೆ ಏಕದಿನ ಕ್ರಿಕೆಟ್ ಟೂರ್ನಿಯ ಅಂತಿಮ ಪಂದ್ಯದಲ್ಲಿ ರೇಲ್ವೇಸ್ ತಂಡವನ್ನು ನಾಲ್ಕು ವಿಕೆಟ್ ಗಳಿಂದ ಮಣಿಸಿ ಪ್ರಥಮ ಬಾರಿ ವಿಜಯ್ ಹಜಾರೆ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿತು. ಪ್ರಸ್ತುತ ಋತುವಿನಲ್ಲಿ ಕರ್ನಾಟಕಕ್ಕೆ ಇದು ಸತತ ಮೂರನೇ ಚಾಂಪಿಯನ್ ಪಟ್ಟವಾಗಿದೆ. ಇದಕ್ಕೂ ಮುನ್ನ ರಣಜಿ, ಇರಾನಿ ಟ್ರೋಫಿಯು ಸಹ ಕನ್ನಡಿಗರ ಪಾಲಾಗಿದೆ.

ಮೊದಲು ಬ್ಯಾಟಿಂಗ್ ಮಾಡಿದ ರೇಲ್ವೇಸ್ ತಂಡ ಕರ್ನಾಟಕದ ಬೌಲರ್ ಗಳ ಶಿಸ್ತು ಬದ್ಧ ದಾಳಿಯಿಂದಾಗಿ 47.4 ಓವರ್ಗಳಲ್ಲಿ 157 ರನ್ ಗಳಿಗೆ ತನ್ನೆಲ್ಲ ವಿಕೆಟ್ಗಳನ್ನು ಕಳೆದುಕೊಂಡು ಸರ್ವಪತನವಾಯಿತು. ಪ್ರತಿಯಾಗಿ ಬ್ಯಾಟಿಂಗ್ ಗೆ ಇಳಿದ ವಿನಯ್ ಪಡೆ ಆರಂಭದಲ್ಲಿ ತುಸು ಆಘಾತ ಕಂಡರೂ ಅಂತಿಮವಾಗಿ 6 ವಿಕೆಟ್ ಕಳೆದುಕೊಂಡು 158 ರನ್ ಸೇರಿಸಿ ಗೆಲುವಿನ ನಗೆ ಬೀರಿತು.

47 ರನ್ ಗಳಿಗೆ 5 ವಿಕೆಟ್ ಕಳೆದುಕೊಂಡು ಸಂಕಷ್ಟದ ಸ್ಥಿತಿಯಲ್ಲಿದ್ದ ಸಂದರ್ಭದಲ್ಲಿ ರಾಹುಲ್(72 ಎಸೆತ, 38 ರನ್) ಹಾಗೂ ಕರುಣ್ ನಾಯರ್ ಜೋಡಿ ಗಟ್ಟಿಯಾಗಿ ನೆಲೆಯೂರಿ ತಂಡಕ್ಕೆ ಆಸರೆಯಾದರು. ಈ ಜೋಡಿಯ ಜೊತೆಯಾಟದಲ್ಲಿ 66ರನ್ ಗಳು ಹರಿದು ಬಂದವು. ಈ ಹಂತದಲ್ಲಿ ರಾಹುಲ್ ಸೈನಿ ಎಸೆದ ಬೌಲಿಗೆ, ಅವರಿಗೇ ಕ್ಯಾಚ್ ನೀಡಿ ಪೆವಲಿಯನ್ ಗೆ ವಾಪಸ್ಸಾದರು.

ರಾಹುಲ್ ಸ್ಥಾನಕ್ಕೆ ಬಂದ ಕರುಣ್ ನಾಯರ ಅವರಿಗೆ ಜೊತೆಯಾದ ಕುನಾಲ್ ಕಪೂರ್(24*) ಏಳನೇ ವಿಕೆಟ್ ಗೆ 47ರನ್ ಗಳನ್ನು ಸೇರಿಸಿ ತಂಡವನ್ನು ಗೆಲುವಿನ ದಡಕ್ಕೆ ತಲುಪಿಸಿದರು. ಒಟ್ಟಾರೆ ಕರ್ನಾಟಕ ಗೆಲ್ಲಲು ಬೇಕಾದ 158 ರನ್ ಗಳನ್ನು 43 ಓವರ್ ಗಳಲ್ಲಿ ಸೇರಿಸಿತು.

Share this Story:

Follow Webdunia kannada