Webdunia - Bharat's app for daily news and videos

Install App

ಐಪಿಎಲ್: ರಾಯಲ್ಸ್- ಸನ್‌ರೈಸರ್ಸ್ ಹಣಾಹಣಿ

Webdunia
ಬುಧವಾರ, 22 ಮೇ 2013 (13:17 IST)
PTI
ಸ್ಪಾಟ್ ಫಿಕ್ಸಿಂಗ್ ಪ್ರಕರಣದಿಂದ ಕಂಗೆಟ್ಟರುವ ರಾಜಸ್ಥಾನ ರಾಯಲ್ಸ್ ತಂಡಕ್ಕೆ ಸನ್‌ರೈಸರ್ಸ್ ಹೈದರಾಬಾದ್ ತಂಡ ಬುಧವಾರ ಎಲಿಮಿನೇಟರ್‌ನಲ್ಲಿ ಸವಾಲು ನೀಡಲಿದೆ. ಹೀಗಾಗಿ, ರಾಜಸ್ಥಾನ ತಂಡ ಹೇಗೆ ಈ ಸವಾಲನ್ನು ಎದುರಿಸಲಿದೆ ಎಂಬುದು ಕುತೂಹಲ ಕೆರಳಿಸಿದೆ.

ಸ್ಪಾಟ್ ಫಿಕ್ಸಿಂಗ್ ಆರೋಪದ ಹಿನ್ನೆಲೆಯಲ್ಲಿ ರಾಜಸ್ಥಾನ ತಂಡದ ಮೂವರು ಆಟಗಾರರನ್ನು ಪೊಲೀಸರು ಬಂಧಿಸಿದ ನಂತರ ರಾಜಸ್ಥಾನ ತಂಡದಲ್ಲಿ ಗೊಂದಲಗಳು ಮೂಡಿದ್ದು, ಇತರೆ ಆಟಗಾರರು ಮಾನಸಿಕವಾಗಿ ಕುಗ್ಗಿರುವಂತೆ ಕಾಣುತ್ತಿದ್ದಾರೆ.

ಒಟ್ಟಾರೆಯಾಗಿ ರಾಜಸ್ಥಾನ ತಂಡ ಹೆಚ್ಚು ಒತ್ತಡಕ್ಕೆ ಸಿಲುಕಿದ್ದು, ನಾಯಕ ರಾಹುಲ್ ದ್ರಾವಿಡ್ ತಂಡವನ್ನು ಹೇಗೆ ಮುನ್ನಡೆಸಲಿದ್ದಾರೆ ಎಂಬುದನ್ನು ಕಾದು ನೋಡಬೇಕು.

ಈ ಹಿಂದಿನಂತೆ ದ್ರಾವಿಡ್ ಆತ್ಮವಿಶ್ವಾಸ ಹೊಂದಿದ್ದಾರೆಯೇ? ಅಲ್ಲದೆ ಅವರು ಯಾವ ರೀತಿಯ ಬೌಲಿಂಗ್ ಕ್ರಮಾಂಕ ಹಾಗೂ ಬ್ಯಾಟಿಂಗ್ ಕ್ರಮಾಂಕದೊಂದಿಗೆ ಕಣಕ್ಕಿಳಿಯಲಿದ್ದಾರೆ ಎಂಬುದು ಪಂದ್ಯದ ವೇಳೆಯೇ ತಿಳಿಯಲಿದೆ.

ಇನ್ನು ತಂಡಗಳ ಬಲಾಬಲವನ್ನು ನೋಡುವುದಾದರೆ, ರಾಜಸ್ಥಾನ ತಂಡ ಸನ್‌ರೈಸರ್ಸ್ ತಂಡಕ್ಕಿಂತ ಎಲ್ಲಾ ವಿಭಾಗಗಳಲ್ಲೂ ಹೆಚ್ಚು ಸಮತೋಲನದಿಂದ ಕೂಡಿದೆ.

ಸನ್‌ರೈಸರ್ಸ್ ತಂಡ ತನ್ನ ಬೌಲಿಂಗ್ ವಿಭಾಗದ ಮೇಲೆ ಹೆಚ್ಚು ಅವಲಂಬಿತವಾಗಿದ್ದು, ಬ್ಯಾಟಿಂಗ್ ವಿಭಾಗ ಹೆಚ್ಚು ಪರಿಣಾಮಕಾರಿ ಪ್ರದರ್ಶನ ತೋರಿಲ್ಲ.

ರೈಸರ್ಸ್ ಬೌಲಿಂಗ್ ವಿಭಾಗದಲ್ಲಿ ಡೇಲ್ ಸ್ಟೇಯ್ನ್(18 ವಿಕೆಟ್), ಅಮಿತ್ ಮಿಶ್ರಾ (20) ಮತ್ತು ಆಲ್ರೌಂಡರ್ ತಿಸಾರ ಪೆರೇರಾ (19) ವಿಕೆಟ್ ಕಬಳಿಸಿದ್ದಾರೆ. ಇನ್ನು ಸ್ಪಿನ್ ವಿಭಾಗದಲ್ಲಿ ಅಮಿತ್ ಮಿಶ್ರಾಗೆ ಯುವ ಲೆಗ್ ಸ್ಪಿನ್ನರ್ ಕರಣ್ ಶರ್ಮಾ ಉತ್ತಮ ಸಾಥ್ ನೀಡುತ್ತಿದ್ದು, ಬೌಲಿಂಗ್ ವಿಭಾಗ ಹೆಚ್ಚು ಪರಿಣಾಮಕಾರಿಯಾಗಿದೆ.

ಬ್ಯಾಟಿಂಗ್ ವಿಭಾಗವನ್ನು ನೋಡುವುದಾದರೆ, ತಂಡದ ಯಾವುದೇ ಬ್ಯಾಟ್ಸ್‌ಮನ್ ಲೀಗ್ ಹಂತದಲ್ಲಿ 300 ರನ್ ಗಡಿ ದಾಟದಿರುವುದು ಬ್ಯಾಟಿಂಗ್ ವಿಭಾಗದ ಸಾಮರ್ಥ್ಯವನ್ನು ತೋರಿಸುತ್ತದೆ. ಆರಂಭಿಕ ಪಾರ್ಥೀವ್ ಪಟೇಲ್ (293) ಕೇವಲ 1 ಅರ್ಧ ಶತಕ ಗಳಿಸಿದ್ದು, ತಂಡದಲ್ಲಿ ಅತಿ ಹೆಚ್ಚು ರನ್‌ಗಳಿಸಿದ ಬ್ಯಾಟ್ಸ್‌ಮನ್ ಆಗಿದ್ದಾರೆ. ಗಾಯದ ಸಮಸ್ಯೆಯಿಂದ ಹೊರ ಬಂದ ನಂತರ ಶಿಖರ್ ಧವನ್, ತಕ್ಕ ಮಟ್ಟಿನ ಪ್ರದರ್ಶನ ತೋರಿದ್ದು 3 ಅರ್ಧ ಶತಕ ಸೇರಿದಂತೆ 278 ರನ್‌ಗಳಿಸಿದ್ದಾರೆ. ಅಲ್ಲದೆ ಈ ಪಂದ್ಯವನ್ನು ಧವನ್ ತವರಿನ ಅಂಗಳದಲ್ಲಿ ಆಡುತ್ತಿದ್ದು, ತಂಡ ಉತ್ತಮ ಪ್ರದರ್ಶನದ ನಿರೀಕ್ಷೆಯಲ್ಲಿದೆ.

ಇನ್ನು ತಂಡದ ತಿಸಾರ ಪೆರೇರಾ ಹಾಗೂ ಡರೆನ್ ಸಾಮಿ ಅಂತಿಮ ಓವರ್‌ಗಳಲ್ಲಿ ಉತ್ತಮ ರನ್ ಕಲೆಹಾಕುತ್ತಿರುವುದು ತಂಡಕ್ಕೆ ನೆಮ್ಮದಿಯನ್ನು ತಂದಿದೆ.

ಇನ್ನು ರಾಜಸ್ಥಾನ ತಂಡದದಲ್ಲಿ ಶೇನ್ ವ್ಯಾಟ್ಸನ್ ಉತ್ತಮ ಆಲ್ರೌಂಡ್ ಪ್ರದರ್ಶನ ನೀಡಿದ್ದು, ಲೀಗ್ ಹಂತದಲ್ಲಿ 513 ರನ್‌ಗಳಿಸಿ 11 ವಿಕೆಟ್ ಪಡೆದಿದ್ದಾರೆ. ಇವರ ಜತೆಗೆ ಬ್ಯಾಟಿಂಗ್ ವಿಭಾಗದಲ್ಲಿ ದ್ರಾವಿಡ್ ಲೀಗ್ ಹಂತದಲ್ಲಿ 4 ಅರ್ಧಶತಕ ಸೇರಿದಂತೆ 416 ರನ್ ಕಲೆಹಾಕಿದ್ದು, ಅಜಿಂಕ್ಯ ರಹಾನೆ 449 ರನ್ ಕಲೆಹಾಕಿದ್ದಾರೆ. ಅಂತಿಮ ಓವರ್‌ಗಳಲ್ಲಿ ಬಿನ್ನಿ ಹಾಗೂ ಹಾಡ್ಜ್ ಉತ್ತಮವಾಗಿ ರನ್ ಕಲೆಹಾಕುತ್ತಿದ್ದಾರೆ.

ರಾಯಲ್ಸ್‌ನ ಬೌಲಿಂಗ್ ವಿಭಾಗದಲ್ಲಿ ಜೇಮ್ಸ್ ಫಾಕ್ನರ್ 26 ವಿಕೆಟ್ ಕಬಳಿಸುವುದರೊಂದಿಗೆ ಪರ್ಪಲ್ ಕ್ಯಾಪ್ ಪಡೆದಿದ್ದಾರೆ. ಅಲ್ಲದೆ ಸನ್‌ರೈಸರ್ಸ್ ವಿರುದ್ಧ ಆಡಿದ ಎರಡೂ ಪಂದ್ಯಗಳಲ್ಲಿ ಫಾಕ್ನರ್ 5 ವಿಕೆಟ್ ಪಡೆದಿದ್ದಾರೆ. ಉಳಿದಂತೆ ಕೂಪರ್ 17 ವಿಕೆಟ್ ಪಡೆದಿದ್ದು, ಇವರಿಗೆ ಬಿನ್ನಿ, ತಂಬೆ ಹಾಗೂ ತ್ರಿವೇದಿ ಉತ್ತಮ ಸಾಥ್ ನೀಡುತ್ತಿದ್ದಾರೆ.

ಒಟ್ಟಿನಲ್ಲಿ ಈ ಪಂದ್ಯದಲ್ಲಿ ಗೆಲ್ಲುವ ತಂಡ ಕ್ವಾಲಿಫೈಯರ್2 ಪಂದ್ಯದಲ್ಲಿ ಆಡುವ ಅವಕಾಶ ಪಡೆದರೆ, ಸೋತ ತಂಡ ಮನೆ ಕಡೆಗೆ ಮುಖ ಮಾಡುವುದು.

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಸ್ಟ್ರಾಂಗ್ ಪ್ಲೇಯರ್ ಕೊಹ್ಲಿ ಇರುವಾಗ ವೀಕ್ ಪ್ಲೇಯರ್ ರೋಹಿತ್ ಯಾಕೆ ಕ್ಯಾಪ್ಟನ್ ಆಗಿದ್ದಾರೆ?

ಪ್ರಾಕ್ಟೀಸ್ ಸೆಷನ್ ಗೆ ವಿರಾಟ್ ಕೊಹ್ಲಿ-ಬುಮ್ರಾ ಚಕ್ಕರ್

ಮಗಳ ಬರ್ತ್ ಡೇ ಪಾರ್ಟಿಯಲ್ಲಿ ಟಾಯ್ ಟ್ರೈನ್ ನಲ್ಲಿ ಮಸ್ತ್ ಮಜಾ ಮಾಡಿದ ರೋಹಿತ್ ಶರ್ಮಾ

INDWvsAusw ODI: ಭಾರತ ಮಹಿಳಾ ಕ್ರಿಕೆಟ್ ಆಟಗಾರ್ತಿ ಸ್ನೇಹಾ ರಾಣಾ ತಲೆಗೆ ಗಂಭೀರ ಗಾಯ

INDvsSA test: ಎರಡನೇ ಟೆಸ್ಟ್ ಗೆ ಟೀಂ ಇಂಡಿಯಾದಲ್ಲಿ ಈ ಬದಲಾವಣೆ ಖಚಿತ

Show comments