Select Your Language

Notifications

webdunia
webdunia
webdunia
webdunia

ಐಪಿಎಲ್ ಪಂದ್ಯಾವಳಿಗೆ ಬಿರುಸಿನ ಗತಿಯಲ್ಲಿ ಟಿಕೆಟ್ ಮಾರಾಟ

ಐಪಿಎಲ್ ಪಂದ್ಯಾವಳಿಗೆ ಬಿರುಸಿನ ಗತಿಯಲ್ಲಿ ಟಿಕೆಟ್ ಮಾರಾಟ
, ಗುರುವಾರ, 10 ಏಪ್ರಿಲ್ 2014 (14:55 IST)
PR
PR
ದುಬೈ:ಐಪಿಎಲ್ 7 ಪಂದ್ಯಾವಳಿಗೆ ಕೇವಲ 8 ದಿನಗಳು ಬಾಕಿವುಳಿದಿರುವಂತೆ ಟಿಕೆಟ್‌ಗಳು ಬಿರುಸಿನ ಗತಿಯಲ್ಲಿ ಮಾರಾಟವಾಗುತ್ತಿದೆ. ಮಂಗಳವಾರ ಒಂದು ಲಕ್ಷ ಟಿಕೆಟ್‌ಗಳು ಮಾರಾಟವಾಗಿವೆ. ಆನ್‌ಲೈನ್ ಮಾರಾಟ ಆರಂಭವಾಗಿ ಆರುದಿನಗಳಾಗಿದ್ದು, ನಿನ್ನೆ 12,500 ಟಿಕೆಟ್‌ಗಳು ಮಾರಾಟವಾಗಿತ್ತು.ದುಬೈನಲ್ಲಿ ಏಪ್ರಿಲ್ 19 ಮತ್ತು ಏಪ್ರಿಲ್ 25ರಂದು ನಡೆಯುವ ಪಂದ್ಯಗಳಿಗೆ ಟಿಕೆಟ್‌ಗಳು ಬಿರುಸಿನಿಂದ ಖರೀದಿಯಾಗಿದೆ ಎಂದು ಬಿಸಿಸಿಐ ತಿಳಿಸಿದೆ. ಅಭಿಮಾನಿಗಳಿಗೆ ನಿರಾಶೆಯಾಗದಂತೆ ಟಿಕೆಟ್‌ಗಳನ್ನು ಬೇಗ ಖರೀದಿಸಲು ಸಲಹೆ ಮಾಡಲಾಗಿದೆ.

ವಿವಿಧ ಮುಖಬೆಲೆಗಳಲ್ಲಿ ಟಿಕೆಟ್‌ಗಳು ಲಭ್ಯವಿದ್ದು, ಅಬುದಾಬಿ ಪಂದ್ಯಗಳಿಗೆ ಕನಿಷ್ಠ ದರ ಒಂದು ಪಂದ್ಯಕ್ಕೆ ಎಇಡಿ (ಎಮೈರಟಿ ದಿರ್ಹಾಮ್) 20 ರಷ್ಟಾಗಿದ್ದು, ಎರಡು ಪಂದ್ಯಗಳಿಗೆ ಎಇಡಿ 30ರಷ್ಟಾಗಿರುತ್ತದೆ. ದುಬೈನಲ್ಲಿ ಒಂದು ಪಂದ್ಯಕ್ಕೆ ಟಿಕೆಟ್ ದರ ಎಇಡಿ30ರಿಂದ ಆರಂಭವಾದರೆ, ಎರಡು ಪಂದ್ಯಗಳಿಗೆ ಎಇಡಿ 50ರಷ್ಟಾಗಿದೆ. ಶಾರ್ಜಾದಲ್ಲಿ ಟಿಕೆಟ್ ದರ ಒಂದು ಪಂದ್ಯಕ್ಕೆ ಯುಇಡಿ30, ಎರಡು ಪಂದ್ಯಗಳಿಗೆ ಎಇಡಿ40ರಷ್ಟಾಗಿದೆ.

Share this Story:

Follow Webdunia kannada