Webdunia - Bharat's app for daily news and videos

Install App

ಏಕದಿನ ಸರಣಿ: ವರ್ನಾಪುರ ಲಂಕಾ ತಂಡದೊಳಕ್ಕೆ

Webdunia
ಗುರುವಾರ, 14 ಆಗಸ್ಟ್ 2008 (13:13 IST)
ಶ್ರೀಲಂಕಾದ ದಾಮ್‌ಬುಲ್ಲನಲ್ಲಿ ಮುಂದಿನ ವಾರ ಆರಂಭವಾಗಲಿರುವ ಭಾರತದ ವಿರುದ್ಧದ 5 ಏಕದಿನ ಪಂದ್ಯಗಳ ಸರಣಿಗೆ ಶ್ರೀಲಂಕಾ ತಂಡಕ್ಕೆ ಆರಂಭಿಕ ಆಟಗಾರ ಮಲಿಂದಾ ವರ್ನಾಪುರರನ್ನು ಸೇರಿಸಲಾಗಿದೆ

ಭಾರತದ ವಿರುದ್ಧದ ಟೆಸ್ಟ್ ಸರಣಿಯಲ್ಲಿ 60.75ರ ಸರಾಸರಿಯಲ್ಲಿ 243ರನ್ನು ಗಳಿಸಿ ಸ್ಥಿರ ಪ್ರದರ್ಶನ ನೀಡಿದ್ದ ಮಲಿಂದಾ ಅವರನ್ನು ಆಯ್ಕೆಗಾರರು ಏಕದಿನ ತಂಡಕ್ಕೆ ಸೇರಿಸಿ ಪುರಸ್ಕರಿಸಿದ್ದಾರೆ.

ತಂಡದಲ್ಲಿರುವ ಸನತ್ ಜಯಸೂರ್ಯ ಮತ್ತು ಮಹೇಲಾ ಉದವಟ್ಟಾ ಅವರ ಜೊತೆ, ಮಲಿಂದಾ ಮೂರನೇ ಆರಂಭಿಕ ಆಟಗಾರರಾಗಿ ಸೇರಿಕೊಂಡಿದ್ದಾರೆ.

ಏಶ್ಯಾ ಕಪ್‌ನಲ್ಲಿ ಪಂದ್ಯ ಆರಂಭಿಸಿದ್ದ ಕುಮಾರ ಸಂಗಕ್ಕಾರ ಮತ್ತು ಜಯಸೂರ್ಯ ಜೋಡಿ ಯಶಸ್ವಿ ಎನಿಸಿತ್ತಾದರೂ, ಆಯ್ಕೆ ಸಮಿತಿ ಸ್ಪೆಷಲಿಸ್ಟ್ ಒಪನರ್‌ಗಳನ್ನು ಒಳಗೊಂಡು ತಂಡದಲ್ಲಿರುವ ಏಕೈಕ ಪರಿಣತ ವಿಕೆಟ್ ಕೀಪರ್ ಸಂಗಕ್ಕಾರ ಮೇಲಿನ ಹೆಚ್ಚುವರಿ ಹೊರೆಯನ್ನು ಸಡಿಲಿಸಬಯಸಿದೆ.

" ಈಗಷ್ಟೇ ಕೊನೆಗೊಂಡಿರುವ ಟೆಸ್ಟ್ ಸರಣಿಯಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿದ್ದ ಮಲಿಂದಾ ತಂಡದಲ್ಲಿ ಜಾಗ ಪಡೆಯಲು ಅರ್ಹರಾಗಿದ್ದಾರೆ" ಎಂದು ಆಯ್ಕೆ ಸಮಿತಿಯ ಮುಖ್ಯಸ್ಥ ಅಸಂತಾ ದೆ ಮೆಲ್ ಸುದ್ದಿಗಾರರಿಗೆ ತಿಳಿಸಿದ್ದಾರೆ.

ಗಾಯದ ಕಾರಣದಿಂದ ಟೆಸ್ಟ್ ಸರಣಿಯಿಂದ ಕೈಬಿಡಲಾಗಿದ್ದ ವೇಗದ ಬೌಲರ್ ದಿಲ್ಹಾರ ಫೆರ್ನಾಂಡೊ ಅವರನ್ನು ಸಹ ತಂಡಕ್ಕೆ ಸೇರಿಸಲಾಗಿದೆ.

ಶ್ರೀಲಂಕಾ ತಂಡ:
ಮಹೇಲ ಜಯವರ್ಧನೆ, ಕುಮಾರ ಸಂಗಕ್ಕಾರ, ಸನತ್ ಜಯಸೂರ್ಯ, ಮಹೇಲಾ ಉದವಟ್ಟಾ, ಚಾಮರ ಕಪುಗೆದರಾ, ನುವಾನ್ ಕುಲಸೇಕರ, ಚಾಮರ ಸಿಲ್ವ, ತಿಲಾನ್ ತುಷಾರ, ತಿಲಕರತ್ನ ದಿಲ್ಶಾನ್, ಚಮಿಂಡಾ ವಾಸ್, ದಿಲ್ಹಾರ ಫೆರ್ನಾಂಡೊ, ಅಜಂತಾ ಮೆಂಡಿಸ್, ಮುತ್ತಯ್ಯ ಮುರಳೀಧರನ್, ಜಿಹಾನ್ ಮುಬಾರಕ್ ಮತ್ತು ಮಲಿಂದಾ ವರ್ನಾಪುರಾ.

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಸ್ಟ್ರಾಂಗ್ ಪ್ಲೇಯರ್ ಕೊಹ್ಲಿ ಇರುವಾಗ ವೀಕ್ ಪ್ಲೇಯರ್ ರೋಹಿತ್ ಯಾಕೆ ಕ್ಯಾಪ್ಟನ್ ಆಗಿದ್ದಾರೆ?

ಪ್ರಾಕ್ಟೀಸ್ ಸೆಷನ್ ಗೆ ವಿರಾಟ್ ಕೊಹ್ಲಿ-ಬುಮ್ರಾ ಚಕ್ಕರ್

ಮಗಳ ಬರ್ತ್ ಡೇ ಪಾರ್ಟಿಯಲ್ಲಿ ಟಾಯ್ ಟ್ರೈನ್ ನಲ್ಲಿ ಮಸ್ತ್ ಮಜಾ ಮಾಡಿದ ರೋಹಿತ್ ಶರ್ಮಾ

INDWvsAusw ODI: ಭಾರತ ಮಹಿಳಾ ಕ್ರಿಕೆಟ್ ಆಟಗಾರ್ತಿ ಸ್ನೇಹಾ ರಾಣಾ ತಲೆಗೆ ಗಂಭೀರ ಗಾಯ

INDvsSA test: ಎರಡನೇ ಟೆಸ್ಟ್ ಗೆ ಟೀಂ ಇಂಡಿಯಾದಲ್ಲಿ ಈ ಬದಲಾವಣೆ ಖಚಿತ

Show comments