Webdunia - Bharat's app for daily news and videos

Install App

ಏಕದಿನ ವಿಶ್ವಕಪ್‌; 50 ದಿನಗಳ ಕೌಂಟ್‌ಡೌನ್ ಆರಂಭ

Webdunia
ಶುಕ್ರವಾರ, 31 ಡಿಸೆಂಬರ್ 2010 (18:42 IST)
PTI
ಏಷ್ಯಾ ಉಪಖಂಡದಲ್ಲಿ ನಡೆಯಲಿರುವ ಬಹುನಿರೀಕ್ಷಿತ ಐಸಿಸಿ ಏಕದಿನ ವಿಶ್ವಕಪ್‌ಗಿನ್ನು ಕೇವಲ 50 ದಿನಗಳಷ್ಟೇ ಬಾಕಿ ಉಳಿದಿವೆ. ಈ ಹಿನ್ನೆಲೆಯಲ್ಲಿ ಕೇಪ್‌ಟೌನ್‌ನಲ್ಲಿ ಇದೀಗಲೇ 50 ದಿನಗಳ ಕ್ಷಣಗಣನೆ ಆರಂಭವಾಗಿದೆ. ಈ ಮಹತ್ವದ ಕೂಟಕ್ಕೆ ಭಾರತ ಸಹಿತ ಏಷ್ಯಾದ ಕ್ರಿಕೆಟ್ ಆಡುವ ಪ್ರಮುಖ ರಾಷ್ಟ್ರಗಳಾದ ಶ್ರೀಲಂಕಾ ಮತ್ತು ಬಾಂಗ್ಲಾದೇಶ ಜಂಟಿಯಾಗಿ ಆತಿಥ್ಯ ವಹಿಸುತ್ತಿದೆ.

2011 ಫೆಬ್ರವರಿ 19ರಂದು ಢಾಕಾದಲ್ಲಿ ವಿಶ್ವಕಪ್‌ಗೆ ಚಾಲನೆ ದೊರಕಲಿದೆ. ಒಟ್ಟು 14 ತಂಡಗಳು ಪ್ರಶಸ್ತಿಗಾಗಿ ಪೈಪೋಟಿ ನಡೆಸಲಿದ್ದು, ಆತಿಥೇಯ ಭಾರತ ಫೆವರೀಟ್ ಎನಿಸಿಕೊಂಡಿದೆ. ಉದ್ಘಾಟನಾ ಪಂದ್ಯದಲ್ಲಿ ಆತಿಥೇಯ ರಾಷ್ಟ್ರಗಳಾದ ಭಾರತ ಮತ್ತು ಬಾಂಗ್ಲಾದೇಶ ತಂಡಗಳು ಸೆಣಸಾಟ ನಡೆಸಲಿದೆ.

ಈ ಹಿಂದೆ ಭದ್ರತಾ ಕಾರಣಗಳಿಂದಾಗಿ ಪಾಕಿಸ್ತಾನದಲ್ಲಿ ನಡೆಯಬೇಕಾಗಿದ್ದ ಪಂದ್ಯಗಳನ್ನು ಇತರ ಆತಿಥ್ಯ ರಾಷ್ಟ್ರಗಳಿಗೆ ಸ್ಥಳಂತಾರಿಸಲಾಗಿತ್ತು.

ಈ ಮಹಾಕೂಟದಲ್ಲಿ ಒಟ್ಟು 49 ಪಂದ್ಯಾಟಗಳು ನಡೆಯಲಿದೆ. ಈ ಎಲ್ಲ ಪಂದ್ಯಾಟಗಳಿಗೆ ಮುಂಬೈ, ಕೋಲ್ಕತ್ತಾ, ಕೊಲಂಬೊ, ನವದೆಹಲಿ, ಕಾಂಡಿ, ಅಹಮದಾಬಾದ್, ಚಿತ್ತಗಾಂಗ್, ಚೈನ್ನೈ, ಢಾಕಾ, ಹ್ಯಾಮ್‌ಬನ್‌ಟಾಟಾ, ಮೊಹಾಲಿ, ನಾಗ್ಪುರ ಮತ್ತು ಬೆಂಗಳೂರು ತಾಣಗಳು ಆತಿಥ್ಯ ವಹಿಸಲಿದೆ.

14 ತಂಡಗಳನ್ನು ಗ್ರೂಪ್ 'ಎ' ಮತ್ತು ಗ್ರೂಪ್ 'ಬಿ' ಎಂದು ವಿಂಗಡಿಸಲಾಗಿದೆ. ಆಸ್ಟ್ರೇಲಿಯಾ, ಕೆನೆಡಾ, ಕೀನ್ಯಾ, ನ್ಯೂಜಿಲೆಂಡ್, ಪಾಕಿಸ್ತಾನ, ಶ್ರೀಲಂಕಾ ಮತ್ತು ಜಿಂಬಾಬ್ವೆ ತಂಡಗಳು ಗ್ರೂಪ್ 'ಎ'ನಲ್ಲಿ ಹಾಗೂ ಭಾರತ, ಬಾಂಗ್ಲಾದೇಶ, ಇಂಗ್ಲೆಂಡ್, ಐರ್ಲೆಂಡ್, ಹಾಲೆಂಡ್, ದಕ್ಷಿಣ ಆಫ್ರಿಕಾ ಮತ್ತು ವೆಸ್ಟ್ಇಂಡೀಸ್ ತಂಡಗಳು ಗ್ರೂಪ್ 'ಬಿ'ನಲ್ಲಿ ಸ್ಥಾನ ಪಡೆದಿವೆ.

ಮಾರ್ಚ್ 23ರಿಂದ 26ರ ವರೆಗೆ ಕ್ವಾರ್ಟರ್ ಹಾಗೂ ಮಾರ್ಚ್ 29 ಮತ್ತು 30ರಂದು ಸೆಮಿಫೈನಲ್ ನಡೆಯಲಿದೆ. ನಂತರ ಮುಂಬೈನ ವಾಂಖೆಡೆ ಮೈದಾನದಲ್ಲಿ ಎಪ್ರಿಲ್ 2ರಂದು ಪ್ರಶಸ್ತಿಗಾಗಿನ ಹೋರಾಟ ನಡೆಯಲಿದೆ.

ಕ್ಷಣ ಕ್ಷಣದ ತಾಜಾ ಸುದ್ದಿಗಳಿಗೆ, ವಿಶೇಷ ಸುದ್ದಿಗಳಿಗೆ ನಿಮ್ಮ ವೆಬ್‌ದುನಿಯಾಕ್ಕೆ ಭೇಟಿ ಕೊಡಿ

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಸ್ಟ್ರಾಂಗ್ ಪ್ಲೇಯರ್ ಕೊಹ್ಲಿ ಇರುವಾಗ ವೀಕ್ ಪ್ಲೇಯರ್ ರೋಹಿತ್ ಯಾಕೆ ಕ್ಯಾಪ್ಟನ್ ಆಗಿದ್ದಾರೆ?

ಪ್ರಾಕ್ಟೀಸ್ ಸೆಷನ್ ಗೆ ವಿರಾಟ್ ಕೊಹ್ಲಿ-ಬುಮ್ರಾ ಚಕ್ಕರ್

ಮಗಳ ಬರ್ತ್ ಡೇ ಪಾರ್ಟಿಯಲ್ಲಿ ಟಾಯ್ ಟ್ರೈನ್ ನಲ್ಲಿ ಮಸ್ತ್ ಮಜಾ ಮಾಡಿದ ರೋಹಿತ್ ಶರ್ಮಾ

INDWvsAusw ODI: ಭಾರತ ಮಹಿಳಾ ಕ್ರಿಕೆಟ್ ಆಟಗಾರ್ತಿ ಸ್ನೇಹಾ ರಾಣಾ ತಲೆಗೆ ಗಂಭೀರ ಗಾಯ

INDvsSA test: ಎರಡನೇ ಟೆಸ್ಟ್ ಗೆ ಟೀಂ ಇಂಡಿಯಾದಲ್ಲಿ ಈ ಬದಲಾವಣೆ ಖಚಿತ

Show comments