Webdunia - Bharat's app for daily news and videos

Install App

ಇದುವರೆಗಿನ ಅತ್ಯುತ್ತಮ ಹುಟ್ಟುಹಬ್ಬವಿದು: ಯುವರಾಜ್

Webdunia
ಭಾನುವಾರ, 13 ಡಿಸೆಂಬರ್ 2009 (10:00 IST)
ಇದು ನನ್ನ ಇದುವರೆಗಿನ ಅತ್ಯುತ್ತಮ ಹುಟ್ಟುಹಬ್ಬ ಎಂದು ಎರಡನೇ ಮತ್ತು ಅಂತಿಮ ಟ್ವೆಂಟಿ-20 ಪಂದ್ಯದಲ್ಲಿ ಆಲ್‌ರೌಂಡ್ ಪ್ರದರ್ಶನ ನೀಡುವ ಮೂಲಕ ಸರಣಿ ಸಮಬಲಗೊಳಿಸಲು ಭಾರತಕ್ಕೆ ಸಹಕರಿಸಿದ 28ರ ಯುವರಾಜ್ ಸಿಂಗ್ ತಿಳಿಸಿದ್ದಾರೆ.

ನಾನು ಇದುವರೆಗೆ ಆಚರಿಸಿಕೊಂಡ ಹುಟ್ಟುಹಬ್ಬಗಳಲ್ಲಿ ಇದು ವಿಶೇಷವಾದದ್ದು. ನನ್ನ ಇಂದಿನ ಆಟ ಅದರಲ್ಲೂ ಅತ್ಯುತ್ತಮವಾಗಿ ಬ್ಯಾಟಿಂಗ್ ಮಾಡಲು ಸಾಧ್ಯವಾಗಿರುವುದು ಸಂತಸ ತಂದಿದೆ ಎಂದು 25 ಎಸೆತಗಳಿಂದ ಸ್ಫೋಟಕ 60 ರನ್ ಗಳಿಸಿದ್ದಲ್ಲದೆ, ಮೂರು ಅಮೂಲ್ಯ ವಿಕೆಟುಗಳನ್ನು ಕೂಡ ಪಡೆದಿದ್ದ ಯುವಿ ಪ್ರತಿಕ್ರಿಯಿಸಿದ್ದಾರೆ.

207 ರ ಬೃಹತ್ ಗುರಿಯನ್ನು ಪಡೆದುಕೊಂಡ ಬಳಿಕ ಭಾರತೀಯ ಆರಂಭಿಕರಾದ ವೀರೇಂದ್ರ ಸೆಹ್ವಾಗ್ ಮತ್ತು ಗೌತಮ್ ಗಂಭೀರ್ ತಂಡಕ್ಕೆ ಅತ್ಯುತ್ತಮ ಆರಂಭ ನೀಡಿದರು ಎಂದು ಅವರು ತಿಳಿಸಿದ್ದಾರೆ.

ತವರಿನ ಪಿಚ್‌ನಲ್ಲಿ ಆಡಿದ ಯುವರಾಜ್, ಈ ಹಿಂದೆ ಇಲ್ಲಿ ಅತ್ಯುತ್ತಮ ಆಟ ನೀಡಿದ್ದು ಕಡಿಮೆ. ಹಾಗಾಗಿ ಸಂತಸಗೊಂಡಿದ್ದರು. 'ಎಲ್ಲವೂ ನಾನಂದುಕೊಂಡಂತೆ ನಡೆದದ್ದು ಖುಷಿ ತಂದಿದೆ. ಆದರೆ 25 ಎಸೆತಗಳಿಂದ 60 ರನ್ ಗಳಿಸುತ್ತೇನೆ ಎಂಬುದನ್ನು ನಿಜಕ್ಕೂ ಎಣಿಸಿರಲಿಲ್ಲ' ಎಂದರು.

ಇದೇ ಹೊತ್ತಿಗೆ ತನ್ನ ಹೆಮ್ಮೆಯ ಪಾಲನ್ನು ಯುವಿ ಕೋಚ್ ಗ್ಯಾರಿ ಕರ್ಸ್ಟನ್‌ಗೂ ನೀಡಲು ಬಯಸುತ್ತಿದ್ದಾರೆ. ನಾನು ಈವರೆಗೆ ಕಂಡ ಅತ್ಯುತ್ತಮ ತರಬೇತುದಾರ ಗ್ಯಾರಿ. ಅವರು ಆಟ ಮತ್ತು ಒತ್ತಡವನ್ನು ಅರ್ಥೈಸಿಕೊಳ್ಳುತ್ತಾರೆ ಎಂದರು.

ಅದೇ ಹೊತ್ತಿಗೆ ಟೀಮ್ ಇಂಡಿಯಾದ ಫೀಲ್ಡಿಂಗ್ ಕಳವಳಗಳು ಹೆಚ್ಚುತ್ತಿರುವುದನ್ನು ಯುವಿ ಒಪ್ಪಿಕೊಂಡಿದ್ದಾರೆ.

ಕಳೆದೆರಡು ಪಂದ್ಯಗಳಲ್ಲಿ ನಮ್ಮ ಕ್ಷೇತ್ರರಕ್ಷಣೆ ಸಮಾಧಾನ ತಂದಿತ್ತು. ಆದರೆ ಇಂದು ಹಲವಾರು ಕ್ಯಾಚ್‌ಗಳನ್ನು ಕೈ ಬಿಟ್ಟೆವು. ಇಲ್ಲದಿದ್ದರೆ ಲಂಕನ್ನರನ್ನು 150-160 ರನ್ನುಗಳಿಗೆ ನಿಯಂತ್ರಿಸಬಹುದಿತ್ತು ಎಂದು ಅವರು ಅಭಿಪ್ರಾಯಪಟ್ಟರು.

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಸ್ಟ್ರಾಂಗ್ ಪ್ಲೇಯರ್ ಕೊಹ್ಲಿ ಇರುವಾಗ ವೀಕ್ ಪ್ಲೇಯರ್ ರೋಹಿತ್ ಯಾಕೆ ಕ್ಯಾಪ್ಟನ್ ಆಗಿದ್ದಾರೆ?

ಪ್ರಾಕ್ಟೀಸ್ ಸೆಷನ್ ಗೆ ವಿರಾಟ್ ಕೊಹ್ಲಿ-ಬುಮ್ರಾ ಚಕ್ಕರ್

ಮಗಳ ಬರ್ತ್ ಡೇ ಪಾರ್ಟಿಯಲ್ಲಿ ಟಾಯ್ ಟ್ರೈನ್ ನಲ್ಲಿ ಮಸ್ತ್ ಮಜಾ ಮಾಡಿದ ರೋಹಿತ್ ಶರ್ಮಾ

INDWvsAusw ODI: ಭಾರತ ಮಹಿಳಾ ಕ್ರಿಕೆಟ್ ಆಟಗಾರ್ತಿ ಸ್ನೇಹಾ ರಾಣಾ ತಲೆಗೆ ಗಂಭೀರ ಗಾಯ

INDvsSA test: ಎರಡನೇ ಟೆಸ್ಟ್ ಗೆ ಟೀಂ ಇಂಡಿಯಾದಲ್ಲಿ ಈ ಬದಲಾವಣೆ ಖಚಿತ

Show comments