Select Your Language

Notifications

webdunia
webdunia
webdunia
webdunia

ಆಸೀಸ್ ಪ್ರವಾಸ ಧೋನಿ ಮುಂದಿರುವ ದೊಡ್ಡ ಸವಾಲು: ಗಂಗೂಲಿ

ಆಸೀಸ್ ಪ್ರವಾಸ ಧೋನಿ ಮುಂದಿರುವ ದೊಡ್ಡ ಸವಾಲು: ಗಂಗೂಲಿ
ನವದೆಹಲಿ , ಸೋಮವಾರ, 10 ಅಕ್ಟೋಬರ್ 2011 (16:51 IST)
ಇಂಗ್ಲೆಂಡ್‌ನಲ್ಲಿ ಸರಣಿಯ ಮರೆಯಲಾರದ ಕಹಿ ನೆನಪಿನ ಬೆನ್ನಲ್ಲೇ ಭಾರತೀಯ ಕ್ರಿಕೆಟ್ ತಂಡವು ವರ್ಷಾಂತ್ಯದಲ್ಲಿ ಆಸ್ಟ್ರೇಲಿಯಾ ಪ್ರವಾಸ ಕೈಗೊಳ್ಳಲಿದ್ದು, ನಾಯಕ ಮಹೇಂದ್ರ ಸಿಂಗ್ ಧೋನಿ ಪಾಲಿಗೆ ದೊಡ್ಡ ಸವಾಲಾಗಿರಲಿದೆ ಎಂದು ಮಾಜಿ ನಾಯಕ ಸೌರವ್ ಗಂಗೂಲಿ ಅಭಿಪ್ರಾಯಪಟ್ಟಿದ್ದಾರೆ.

ತಾಜಾ ಸುದ್ದಿ, ಕನ್ನಡ ಸುದ್ದಿ, ಕನ್ನಡ ಲೇಖನಗಳಿಗಾಗಿ ನಿಮ್ಮ ವೆಬ್‌ದುನಿಯಾಕ್ಕೆ ಭೇಟಿ ಕೊಡಿ

ಇದೇ ಸಂದರ್ಭದಲ್ಲಿ ಸ್ವದೇಶದಲ್ಲಿ ನಡೆಯಲಿರುವ ಏಕದಿನ ಸರಣಿಯಲ್ಲಿ ವಿಶ್ವ ಚಾಂಪಿಯನ್ನರಿಗೆ ಆಂಗ್ಲರ ತಂಡ ಆತಂಕವನ್ನೊಡ್ಡುವ ಸಾಧ್ಯತೆ ವಿರಳವಾಗಿದೆ ಎಂದು ಗಂಗೂಲಿ ತಿಳಿಸಿದರು.

ಕಳೆದ ಇಂಗ್ಲೆಂಡ್ ಪ್ರವಾಸದಲ್ಲಿ ಗಾಯದ ಸಮಸ್ಯೆಯಿಂದ ಬಳಲುತ್ತಿದ್ದ ಟೀಮ್ ಇಂಡಿಯಾವು ಒಂದೇ ಒಂದು ಪಂದ್ಯವನ್ನು ಗೆಲ್ಲಲಾಗದೇ ತವರಿಗೆ ಮರಳಿತ್ತು. ಟೆಸ್ಟ್ ಸರಣಿಯನ್ನು 0-4ರಲ್ಲಿ ಸೋತ ಭಾರತವು ಅಗ್ರಸ್ಥಾನವನ್ನು ಬಿಟ್ಟು ಕೊಡುವಂತಾಗಿತ್ತು. ಆನಂತರ ನಡೆದ ಏಕೈಕ ಟ್ವೆಂಟಿ-20 ಹಾಗೂ ಏಕದಿನ ಸರಣಿಯಲ್ಲೂ 0-3 ಅಂತರದ ಮುಖಭಂಗಕ್ಕೆ ಒಳಗಾಗಿತ್ತು.

ಕಾಂಗಾರೂಗಳ ನಾಡಲ್ಲಿ ಭಾರತಕ್ಕೆ ಮಹಾ ಸವಾಲು ಎದುರಾಗಲಿದೆ ಎಂಬುದು ನನ್ನ ಅಭಿಪ್ರಾಯ. ಒಂದು ವೇಳೆ ಭಾರತ ಅಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿದ್ದಲ್ಲಿ ಧೋನಿ ಅದ್ಭುತ ನಾಯಕರಾಗಬಲ್ಲರು. ಅಲ್ಲಿಯ ತನಕ ಕಾದು ನೋಡಬೇಕಾಗಿದೆ ಎಂದು ಗಂಗೂಲಿ ವಿವರಿಸಿದರು.

ಕಪ್ತಾನಗಿರಿ ಹಂಚುವ ಅಗತ್ಯವಿಲ್ಲ...
ಈ ನಡುವೆ ಎಲ್ಲ ಮೂರು ಪ್ರಕಾರಗಳಿಗೆ ಬೇರೆ ಬೇರೆ ನಾಯಕರನ್ನು ಆರಿಸಬೇಕೆಂಬ ನಿಲುವನ್ನು ಗಂಗೂಲಿ ವಿರೋಧಿಸಿದರು. ಕೇವಲ ಒಂದು ಸರಣಿ ವೈಫಲ್ಯದಿಂದ ಹಾಗೆ ಯೋಚಿಸುವುದು ತಪ್ಪು. ಆಸ್ಟ್ರೇಲಿಯಾ ಸರಣಿಯಲ್ಲಿ ಏನಾನುಗುತ್ತದೆ ಎಂಬುದನ್ನು ಕಾದು ನೋಡೋಣ ಎಂದರು.

ಧೋನಿ ನಾಯಕತ್ವ ಬಗ್ಗೆ ಮಾತನಾಡಿದ ಗಂಗೂಲಿ, ಮಹಿ ಉತ್ತಮ ಕೆಲಸ ನಿರ್ವಹಿಸಿದ್ದು, ತಿರುಗಿ ಬೀಳುವ ಭರವಸೆಯಿದೆ. ಮಹಿ ಮುಂದೀಗ ಆಸೀಸ್ ಪ್ರವಾಸವಿದ್ದು, ನಾಯಕನೊಬ್ಬನಿಗೆ ವಿದೇಶ ಸರಣಿ ಗೆಲ್ಲಬೇಕೆಂಬುದು ಅತಿ ಮುಖ್ಯವೆನಿಸುತ್ತದೆ. ಸ್ವದೇಶ ಹಾಗೂ ವಿದೇಶದಲ್ಲಿ ನಾಯಕತ್ವ ವಹಿಸುವುದು ಎರಡು ವಿಭಿನ್ನ ಚೆಂಡುಗಳ ಆಟ ಎಂದರು.

ವೆಬ್‌ದುನಿಯಾ ಕನ್ನಡ ಓದುಗರೇ! ಕಾಮೆಂಟ್ ಮಾಡೋ ಮುನ್ನ ಇಲ್ಲೊಮ್ಮೆ ಓದಿ ನೋಡಿ!

Share this Story:

Follow Webdunia kannada