Select Your Language

Notifications

webdunia
webdunia
webdunia
webdunia

ಆಸೀಸ್‌ ಸರಕಾರ ಭರವಸೆ; ಆಟಗಾರರ ಆತಂಕ ದೂರ

ಆಸೀಸ್‌ ಸರಕಾರ ಭರವಸೆ; ಆಟಗಾರರ ಆತಂಕ ದೂರ
ಮೆಲ್ಬೋರ್ನ್ , ಭಾನುವಾರ, 28 ಫೆಬ್ರವರಿ 2010 (16:01 IST)
ಇಂಡಿಯನ್ ಪ್ರೀಮಿಯರ್ ಲೀಗ್‌ನಲ್ಲಿ ಪಾಲ್ಗೊಳ್ಳುವ ದೇಶದ ಆಟಗಾರರಿಗೆ ಭದ್ರತಾ ಭರವಸೆಯನ್ನು ನೀಡಿರುವ ಆಸ್ಟ್ರೇಲಿಯಾ ಸರಕಾರ, ಈ ಪ್ರತಿಷ್ಠಿತ ಕೂಟದಲ್ಲಿ ಭಾಗವಹಿಸಲು ಭಾರತಕ್ಕೆ ತೆರಳಬಹುದಾಗಿದೆ ಎಂದು ಹೇಳಿದೆ.

ಇದರೊಂದಿಗೆ ಐಪಿಎಲ್ ಬಗ್ಗೆ ಆಸೀಸ್ ಕ್ರಿಕೆಟಿಗರಿಗಿದ್ದ ಆತಂಕ ಬಹುತೇಕ ದೂರವಾದಂತಾಗಿದ್ದು, ಕೂಟದಲ್ಲಿ ಭಾಗವಹಿಸುವುದು ನಿಚ್ಚಲವೆನಿಸಿದೆ.

ಬಹುನಿರೀಕ್ಷಿತ ಇಂಡಿಯನ್ ಪ್ರೀಮಿಯರ್ ಲೀಗ್ ಮಾರ್ಚ್ 12ರಂದು ನವಿ ಮುಂಬೈನಲ್ಲಿ ಆರಂಭವಾಗಲಿದೆ.

ಈ ಹಿಂದೆ ಐಪಿಎಲ್‌ನಲ್ಲಿ ಭಾಗವಹಿಸುವ ಆಟಗಾರರಿಗೆ ಯಾವುದೇ ಭದ್ರತಾ ಭರವಸೆ ನೀಡಲು ತಯಾರಿಲ್ಲವೆಂದು ಆಸೀಸ್ ಕ್ರಿಕೆಟ್ ಆಟಗಾರರ ಅಸೋಸಿಯೇಷನ್ ತಿಳಿಸಿತ್ತು.

ಆದರೆ ಇದೀಗ ನಡೆದಿರುವ ಹೊಸ ಬೆಳವಣಿಗೆಯಲ್ಲಿ ಆಸ್ಟ್ರೇಲಿಯಾ ಸರಕಾರವು ವಿಷಯವನ್ನು ಗಂಭೀರವಾಗಿ ಪರಿಗಣಿಸಿದ್ದು, ಭದ್ರತಾ ಭರವಸೆಯನ್ನು ನೀಡಿದೆ.

ಮೂಲಗಳ ಪ್ರಕಾರ ಇದೀಗ ನ್ಯೂಜಿಲೆಂಡ್ ಪ್ರವಾಸ ಕೈಗೊಂಡಿರುವ ಆಸೀಸ್ ಆಟಗಾರರನ್ನು ದೂರವಾಣಿ ಸಂಪರ್ಕ ನಡೆಸಿರುವ ಸರ್ಕಾರಿ ಅಧಿಕಾರಿಗಳು ಆಶ್ವಾಸನೆ ನೀಡಿದ್ದಾರೆ ಎನ್ನಲಾಗಿದೆ.

ಇದೇ ಮಾತುಗಳನ್ನು ಮಾಜಿ ಆಟಗಾರರಾದ ಶೇನ್ ವಾರ್ನ್, ಆಡಂ ಗಿಲ್‌ಕ್ರಿಸ್ಟ್ ಮತ್ತು ಮಾಥ್ಯೂ ಹೇಡನ್ ಅವರಿಗೂ ನೀಡಲಾಗಿದೆ ಎಂದು ತಿಳಿದು ಬಂದಿದೆ.

ಈ ಹಿಂದೆ ಸುರಕ್ಷತಾ ಬಗೆಗಿನ ವಿವರಗಳನ್ನು ಹಂಚಿಕೊಳ್ಳಲು ಐಪಿಎಲ್ ನಿರಾಕರಿಸಿತ್ತು.

Share this Story:

Follow Webdunia kannada