Select Your Language

Notifications

webdunia
webdunia
webdunia
webdunia

ಆರ್‌.ಪಿ.ಸಿಂಗ್, ಧೋನಿ ವ್ಯಯಕ್ತಿಕ ದಾಖಲೆ

ಆರ್‌.ಪಿ.ಸಿಂಗ್, ಧೋನಿ ವ್ಯಯಕ್ತಿಕ ದಾಖಲೆ
ಪರ್ತ್ , ಶುಕ್ರವಾರ, 18 ಜನವರಿ 2008 (12:50 IST)
ಭಾರತ ಕ್ರಿಕೆಟ್ ತಂಡದ ಎಡಗೈ ಬೌಲರ್ ರುದ್ರ ಪ್ರತಾಪ್ ಸಿಂಗ್ ಮತ್ತು ವಿಕೆಟ್ ಕೀಪರ್ ಮಹೇಂದ್ರ್ ಸಿಂಗ್ ಧೋನಿ ಆಸ್ಟ್ರೇಲಿಯಾ ವಿರುದ್ದದ ಮೂರನೇಯ ಟೆಸ್ಟ್‌ನ ಎರಡನೇಯ ದಿನದಲ್ಲಿ ವ್ಯಯಕ್ತಿಕ ದಾಖಲೆಯ ಆಟವಾಡಿದರು.

ಎಡಗೈ ಬೌಲರ್ ರುದ್ರ ಪ್ರತಾಪ್ ಸಿಂಗ್ 68 ರನ್‌ಗಳನ್ನು ನೀಡಿ ನಾಲ್ಕು ವಿಕೆಟ್‌ಗಳನ್ನು ಕಬಳಿಸಿದರು. ಇದು ಅವರ ಕ್ರಿಕೆಟ್ ಜೀವನದ ಎರಡನೇಯ ಉತ್ತಮ ಪ್ರದರ್ಶನವಾಗಿದೆ.ಕಳೆದ ವರ್ಷ ಲಂಡನ್‌ನಲ್ಲಿರುವ ಲಾರ್ಡ್ಸ್ ಕ್ರೀಡಾಂಗಣದಲ್ಲಿ 59ರನ್‌ಗಳನ್ನು ನೀಡಿ ಐದು ವಿಕೆಟ್‌ಗಳನ್ನು ಕಬಳಿಸಿದ್ದರು.

ಉಪನಾಯಕ ಧೋನಿ ಇನಿಂಗ್ಸ್ ಪಂದ್ಯದಲ್ಲಿ ಐದು ವಿಕೆಟ್‌ಗಳನ್ನು ಕಬಳಿಸಿದ ಮೊದಲ ಭಾರತೀಯ ವಿಕೆಟ್‌ ಕೀಪರ್ ಗೌರವಕ್ಕೆ ಪಾತ್ರರಾದರು

ಎಡಗೈ ಬೌಲರ್ ಇರ್ಫಾನ್ ಪಠಾಣ್ ಆಸ್ಟ್ರೇಲಿಯಾ ವಿರುದ್ದ ಉತ್ತಮ ಬೌಲಿಂಗ್ ಪ್ರದರ್ಶನ ನೀಡಿ (63/2)ದರು. 2003-04ರಲ್ಲಿ ನಡೆದ ಸಿಡ್ನಿ ಟೆಸ್ಟ್‌ ಪಂದ್ಯಾವಳಿಯಲ್ಲಿ 80 ರನ್‌ಗಳನ್ನು ನೀಡಿ ಎರಡು ವಿಕೆಟ್‌ಗಳನ್ನು ಪಡೆದಿದ್ದರು.

ಬೌಲರ್ ಇಶಾಂತ್ ಶರ್ಮಾ 34 ರನ್‌ಗಲನ್ನು ನೀಡಿ ಎರಡು ವಿಕೆಟ್‌ಗಳನ್ನು ನೀಡಿ ಉತ್ತಮ ಬೌಲಿಂಗ್ ಪ್ರದರ್ಶಿಸಿದರು.ಎರಡನೇಯ ಟೆಸ್ಟ್ ಪಂದ್ಯಾವಳಿಯಲ್ಲಿ 87 ರನ್‌ಗಳನ್ನು ನೀಡಿ ಯಾವುದೇ ವಿಕೆಟ್ ಪಡೆಯದೆ ವಿಪಲತೆಯನ್ನು ಅನುಭವಿಸಿದ್ದರು.

ಧೋನಿ ಮತ್ತು ಪಠಾಣ್ ಏಳನೇಯ ವಿಕೆಟ್‌ ಜೊತೆಯಾಟದಲ್ಲಿ 44 ರನ್‌ಗಳನ್ನು ಗಳಿಸಿರುವುದು ಭಾರತದ ಪರವಾಗಿ ಗರಿಷ್ಟವಾಗಿದೆ.1977ರಲ್ಲಿ ಶ್ರೀನಿವಾಸ್ ವೆಂಕಟ್‌ರಾಘವನ್ ಮತ್ತು ಬ್ರಿಜೇಶ್ ಪಟೇಲ್ 38 ರನ್‌ಗಳ ಜೊತೆಯಾಟ ದಾಖಲೆಯನ್ನು ಪಡೆದಿತ್ತು.

Share this Story:

Follow Webdunia kannada