Webdunia - Bharat's app for daily news and videos

Install App

ಆರ್‌ಸಿಬಿಗೆ ಆಡಬೇಡಿ : ಯುವಿಗೆ ಕಿಂಗ್ ಫಿಷರ್ ನೌಕರರ ಯೂನಿಯನ್ ಪತ್ರ

Webdunia
ಶನಿವಾರ, 15 ಫೆಬ್ರವರಿ 2014 (17:13 IST)
PR
PR
ಬೆಂಗಳೂರು: ಯುವರಾಜ್ ಸಿಂಗ್ ಅವರಿಗೆ ರಾಯಲ್ ಚಾಲೆಂಜರ್ಸ್ ಪರ ಆಡದಂತೆ ಕಿಂಗ್ ಫಿಷರ್ ನೌಕರರ ಸಂಘಟನೆ ಪತ್ರ ಬರೆದಿದೆ. ರಾಯಲ್ ಚಾಲೆಂಜರ್ಸ್ ಫ್ರಾಂಚೈಸಿ ವಿಜಯ್ ಮಲ್ಯಾ ಅವರನ್ನು ಐಪಿಎಲ್ ಹರಾಜಿನಲ್ಲಿ 14 ಕೋಟಿಗೆ ಖರೀದಿಸಿದ್ದಾರೆ. ಕಿಂಗ್ ಫಿಷರ್ ಏರ್‌ಲೈನ್ಸ್ ಮಾಲೀಕರೂ ಕೂಡ ಆಗಿದ್ದ ವಿಜಯ್ ಮಲ್ಯ ಅದರ ನೌಕರರಿಗೆ ಮಾತ್ರ ಕಳೆದ 18 ತಿಂಗಳ ಬಾಕಿ ಸಂಬಳ ಪಾವತಿ ಮಾಡಿಲ್ಲ. ಈ ಹಿನ್ನೆಲೆಯಲ್ಲಿ ನೌಕರರು ಮಲ್ಯ ಆಫರ್ ತಿರಸ್ಕರಿಸುವಂತೆ ಯುವರಾಜ್‌ಗೆ ಮುಕ್ತ ಪತ್ರ ಬರೆದಿದ್ದಾರೆ. ಡಿಯರ್ ಯುವರಾಜ್, ನಾವು ಕಿಂಗ್‌ಫಿಷರ್ ಏರ್‌ಲೈನ್ಸ್ ನೌಕರರು. ನಿಮ್ಮ ಅಭಿಮಾನಿಗಳು. ನೀವು ಶೀಘ್ರದಲ್ಲೇ ಚೇತರಿಸಿಕೊಳ್ಳುವಂತೆ ನಾವು ಮಾತ್ರವಲ್ಲ, ಇಡೀ ರಾಷ್ಟ್ರವೇ ಪ್ರಾರ್ಥಿಸಿತು.

ನೀವು ಈಗ ಫಾರಂನಲ್ಲಿದ್ದು ವೃತ್ತಿಜೀವನದಲ್ಲಿ ಪ್ರಗತಿ ಹೊಂದುತ್ತಿರುವುದು ನಮಗೆ ಸಂತೋಷವಾಗಿದೆ.ವಿಜಯ್ ಮಲ್ಯ ನಿಮಗೆ 14 ಕೋಟಿ ರೂ. ಕೊಟ್ಟು ಖರೀದಿಸಿದ್ದಾರೆ. ಆದರೆ ನಮಗೆ ಕಳೆದ 18 ತಿಂಗಳಿಂದ ಸಂಬಳ ಉಳಿಸಿಕೊಂಡಿದ್ದಾರೆ.ನಮ್ಮ ಉಳಿತಾಯವೆಲ್ಲ ಇದರಿಂದ ಖರ್ಚಾಗಿದೆ. ಸಾಲದ ಸುಳಿಗೆ ಸಿಕ್ಕಿಬಿದ್ದಿದ್ದೇವೆ.ಆಸ್ತಿ, ಚಿನ್ನ ಅಡವಿಟ್ಟಿದ್ದೇವೆ. ನಮಗೆ ಸಂಬಳ ನೀಡಲು ಮಲ್ಯ ಬಳಿ ಹಣವಿಲ್ಲ. ಆದರೆ ಐಪಿಎಲ್/ ಫಾರ್ಮುಲಾ 1/ ಕಿಂಗ್‌ಫಿಷರ್ ಕ್ಯಾಲೆಂಡರ್‌ಗಳಿಗೆ ಕೋಟಿಗಟ್ಟಲೆ ಖರ್ಚು ಮಾಡಲು ಹಣ ಇರುತ್ತದೆ.

ನೀವು ನಮ್ಮ ಮಾತಿಗೆ ಕಿವಿಗೊಡದೇ ಕ್ರೂರಿ, ಅಮಾನವೀಯ ವ್ಯಕ್ತಿ ಪರ ಕೆಲಸ ಮಾಡಿ ನಕಾರಾತ್ಮಕ ಮನೋಭಾವ ಆಹ್ವಾನಿಸುತ್ತೀರೋ ಅಥವಾ ನೈತಿಕ ಆಧಾರದ ಮೇಲೆ ಉದ್ಯೋಗ ನಿರಾಕರಿಸುತ್ತೀರೋ ನಿರ್ಧರಿಸುವುದು ನಿಮಗೆ ಬಿಟ್ಟಿದ್ದು ಎಂದು ಪತ್ರದಲ್ಲಿ ತಿಳಿಸಿದ್ದಾರೆ.ಯುವರಾಜ್ ಸಿಂಗ್ ಆ ಪತ್ರವನ್ನು ನೋಡಿದ್ದಾರೆಯೇ ಅಥವಾ ಪ್ರತಿಕ್ರಿಯಿಸಿದ್ದಾರೆಯೇ ಎನ್ನುವುದು ತಿಳಿದುಬಂದಿಲ್ಲ.

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಸ್ಟ್ರಾಂಗ್ ಪ್ಲೇಯರ್ ಕೊಹ್ಲಿ ಇರುವಾಗ ವೀಕ್ ಪ್ಲೇಯರ್ ರೋಹಿತ್ ಯಾಕೆ ಕ್ಯಾಪ್ಟನ್ ಆಗಿದ್ದಾರೆ?

ಪ್ರಾಕ್ಟೀಸ್ ಸೆಷನ್ ಗೆ ವಿರಾಟ್ ಕೊಹ್ಲಿ-ಬುಮ್ರಾ ಚಕ್ಕರ್

ಮಗಳ ಬರ್ತ್ ಡೇ ಪಾರ್ಟಿಯಲ್ಲಿ ಟಾಯ್ ಟ್ರೈನ್ ನಲ್ಲಿ ಮಸ್ತ್ ಮಜಾ ಮಾಡಿದ ರೋಹಿತ್ ಶರ್ಮಾ

INDWvsAusw ODI: ಭಾರತ ಮಹಿಳಾ ಕ್ರಿಕೆಟ್ ಆಟಗಾರ್ತಿ ಸ್ನೇಹಾ ರಾಣಾ ತಲೆಗೆ ಗಂಭೀರ ಗಾಯ

INDvsSA test: ಎರಡನೇ ಟೆಸ್ಟ್ ಗೆ ಟೀಂ ಇಂಡಿಯಾದಲ್ಲಿ ಈ ಬದಲಾವಣೆ ಖಚಿತ

Show comments