Select Your Language

Notifications

webdunia
webdunia
webdunia
webdunia

ಆಂಗ್ಲರನ್ನು ಮಣಿಸಿದ ಭಾರತ ಮೂರನೇ ಸ್ಥಾನಕ್ಕೆ ನೆಗೆತ

ಆಂಗ್ಲರನ್ನು ಮಣಿಸಿದ ಭಾರತ ಮೂರನೇ ಸ್ಥಾನಕ್ಕೆ ನೆಗೆತ
ಕೊಲ್ಕತಾ , ಬುಧವಾರ, 26 ಅಕ್ಟೋಬರ್ 2011 (17:34 IST)
WD


ಇಂಗ್ಲೆಂಡ್ ವಿರುದ್ಧ ತವರಿನಲ್ಲಿ ಸಾಗಿದ ಐದು ಪಂದ್ಯಗಳ ಏಕದಿನ ಸರಣಿಯನ್ನು 5-0 ಅಂತರದಲ್ಲಿ ವೈಟ್‌ವಾಶ್ ಮಾಡಿಕೊಂಡಿರುವ ಭಾರತ ತಂಡವು ಐಸಿಸಿ ಏಕದಿನ ತಂಡ ರ‌್ಯಾಂಕಿಂಗ್ ಪಟ್ಟಿಯಲ್ಲಿ ಐದರಿಂದ ಮೂರನೇ ಸ್ಥಾನಕ್ಕೆ ನೆಗೆತ ಕಂಡಿವೆ.

ತಾಜಾ ಸುದ್ದಿ, ಕನ್ನಡ ಸುದ್ದಿ, ಕನ್ನಡ ಲೇಖನಗಳಿಗಾಗಿ ನಿಮ್ಮ ವೆಬ್‌ದುನಿಯಾಕ್ಕೆ ಭೇಟಿ ಕೊಡಿ

ಸರಣಿ ಆರಂಭಕ್ಕೂ ಮುನ್ನ 112 ಪಾಯಿಂಟುಗಳನ್ನು ಹೊಂದಿದ್ದ ಭಾರತ ಐದನೇ ಸ್ಥಾನದಲ್ಲಿತ್ತು. ಅದೇ ಹೊತ್ತಿಗೆ ಆಂಗ್ಲರ ಪಡೆ ನಾಲ್ಕನೇ ಸ್ಥಾನ ಆಲಂಕರಿಸಿತ್ತು.

ಆದರೆ ಆಲಿಸ್ಟಾರ್ ಕುಕ್ ಪಡೆಯನ್ನು 5-0 ಅಂತರದಲ್ಲಿ ವೈಟ್‌ವಾಶ್ ಮಾಡಿರುವ ಭಾರತವು ಆರು ರೇಟಿಂಗ್ ಪಾಯಿಂಟ್ ಅಂಕ ಗಳಿಸುವುದರೊಂದಿಗೆ ಮೂರನೇ ಸ್ಥಾನಕ್ಕೆ ನೆಗೆತವನ್ನು ಕಂಡಿವೆ. ಇದೀಗ ವಿಶ್ವ ಚಾಂಪಿಯನ್ ಭಾರತದ ಮುಂದಿರುವ ಆಸ್ಟ್ರೇಲಿಯಾ ಮತ್ತು ಶ್ರೀಲಂಕಾ ತಂಡಗಳು ಕ್ರಮವಾಗಿ ಅಗ್ರ ಎರಡು ಸ್ಥಾನಗಳನ್ನು ಹಂಚಿಕೊಂಡಿವೆ.

ಹೀಗಿದ್ದರೂ ಆಸ್ಟ್ರೇಲಿಯಾ ವಿರುದ್ಧದ ಕೊನೆಯ ಏಕದಿನ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ಗೆಲುವನ್ನು ದಾಖಲಿಸಿದ್ದಲ್ಲಿ ಮತ್ತೆ ಮೂರನೇ ಸ್ಥಾನಕ್ಕೆ ನೆಗತವನ್ನು ಕಾಣಲಿದೆ. ಇದರೊಂದಿಗೆ ಭಾರತ ನಾಲ್ಕನೇ ಸ್ಥಾನಕ್ಕೆ ಕುಸಿಯಲಿದೆ.

ವೆಬ್‌ದುನಿಯಾ ಕನ್ನಡ ಓದುಗರೇ! ಕಾಮೆಂಟ್ ಮಾಡೋ ಮುನ್ನ ಇಲ್ಲೊಮ್ಮೆ ಓದಿ ನೋಡಿ!

Share this Story:

Follow Webdunia kannada