Webdunia - Bharat's app for daily news and videos

Install App

ಅಂಪೈಯರ್‌ಗಳ ಮೇಲೆ ಹರಿಹಾಯ್ದ ಬ್ರಿಟಿಷ್ ಮಾಧ್ಯಮ

Webdunia
ಶುಕ್ರವಾರ, 21 ನವೆಂಬರ್ 2008 (18:21 IST)
ಕಾನ್ಪುರದಲ್ಲಿ ನಡೆದ ಭಾರತ ಮತ್ತು ಇಂಗ್ಲೆಂಡ್ ನಡುವಿನ ಮೂರನೇ ಏಕದಿನದ ಪಂದ್ಯದ ಸಂದರ್ಭ ಡಕ್‌ವರ್ತ್ ಲೂಯಿಸ್ ನಿಯಮದ ಪ್ರಕಾರ ಭಾರತವನ್ನು ವಿಜಯಿಯೆಂದು ಘೋಷಿಸಿದ ಕ್ರಮವನ್ನು 'ತಾರತಮ್ಯ ನೀತಿ' ಎಂದು ಜರೆದಿರುವ ಬ್ರಿಟಿಷ್ ಮಾಧ್ಯಮಗಳು ಪಂದ್ಯವನ್ನು ಪ್ರಜ್ಞಾಯುತವಾಗಿ ನಡೆಸಲು ವಿಫಲರಾಗಿದ್ದಾರೆ ಎಂದು ಅಂಪೈಯರ್ ರಸೆಲ್ ಟಾಫಿನ್ ಮತ್ತು ಅಮೇಶ್ ಸಾಹಿಬಾ ಅವರ ಮೇಲೆ ಹರಿಹಾಯ್ದಿವೆ.

ವಿಳಂಬವಾಗಿ ಆರಂಭಗೊಂಡು 49 ಒವರ್‌ಗಳಿಗೆ ಕಡಿತಗೊಳಿಸಲ್ಪಟ್ಟ ಪಂದ್ಯದ ಕೊನೆಯಲ್ಲಿ ಮಂದಬೆಳಕಿನ ಕಾರಣದಿಂದ ಭಾರತವನ್ನು ಡಿಎಲ್ ನಿಯಮದಂತೆ 16ರನ್ನುಗಳಿಂದ ವಿಜೇತ ಎಂದು ಘೋಷಿಸಲಾಯಿತು. ಮೊದಲೆರಡು ಪಂದ್ಯಗಳಲ್ಲಿ ಯುವಿ ಅರ್ಭಟದಿಂದ ತತ್ತರಿಸಿದ್ದ ಇಂಗ್ಲೆಂಡ್‌ಗೆ ಮೂರನೇ ಪಂದ್ಯದಲ್ಲಿ ಶಾಪವಾದ ಮಂದಬೆಳಕು 0-3ರ ಹಿನ್ನಡೆ ದೊರಕಿಸಿತು.

ತಮ್ಮ ತಂಡವನ್ನು ಅಧಿಕಾರಿಗಳು ಗೆಲುವಿನಿಂದ ದೂರವಿರಿಸಿದರು ಎಂದು ಹೇಳುವಲ್ಲಿ ಹಿಂದುಳಿಯದ ಇಂಗ್ಲೀಷ್ ನಾಯಕ ಕೇವಿನ್ ಪೀಟರ್‌ಸನ್ ಜೊತೆಗೂಡಿದ ಇಂಗ್ಲೆಂಡ್‌ನ ಕ್ರೋಧಾವಿಷ್ಟ ಮಾಧ್ಯಮಗಳು ಪಂದ್ಯವನ್ನು ನಡೆಸಿದ ರೀತಿಯನ್ನು ದೂಷಿಸಿದವು.

" ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿ ಆಗಾಗ ಆಟದ ನಿಯಮಗಳನ್ನು ಬದಲಿಸುತ್ತಿರುತ್ತದೆ, ಆದರೆ ಅಂಪೈಯರ್‌ಗಳು ತಮ್ಮ ಸಾಮಾನ್ಯ ಪ್ರಜ್ಞೆಯನ್ನು ಉಪಯೋಗಿಸಬಾರದೆಂದು ಯಾವ ನಿಯಮವೂ ಇಲ್ಲ, ಆದರೆ ಕಾನ್ಪುರದಲ್ಲಿ ಸಾಮಾನ್ಯ ಪ್ರಜ್ಞೆಯನ್ನು ಬಳಸಲೇ ಇಲ್ಲ" ಎಂದು ದ ಡೈಲಿ ಟೆಲಿಗ್ರಾಫ್ ವರದಿ ಮಾಡಿದೆ.

" ಸರಣಿಯಲ್ಲಿ ಮೊದಲ ಗೆಲುವು ದಾಖಲಿಸುವ ಉತ್ತಮ ಅವಕಾಶ ಕಳೆದುಕೊಂಡಿದ್ದಕ್ಕೆ ಇಂಗ್ಲೆಂಡ್ ಆಟಗಾರ ಕೋಪ ಅರ್ಥವಾಗುವಂತುಹುದೇ" ಎಂದು ಹೇಳಲಾಗಿದೆ.

ಇಬ್ಬರು ಅಂಪೈಯರ್‌ಗಳಲ್ಲಿ ಹಿರಿಯ ಆಧಿಕಾರಿಯಾಗಿದ್ದ ಟಿಫನ್‌ರನ್ನು ಮಾಧ್ಯಮಗಳು ನೇರ ಅರೋಪಕ್ಕೆ ಗುರಿಯಾಗಿಸಿದವು. ಪೀಟರ್‌ಸನ್ ಮತ್ತು ಇಂಗ್ಲೆಂಡ್ ಕೋಚ್ ಪೀಟರ್ ಮೋರ್ಸ್ ಅವರ ವಿನಂತಿಯಂತೆ ಭೋಜನ ವಿರಾಮದ ಅವಧಿಯನ್ನು ಕಡಿತಗೊಳಿಸಬಹುದಾಗಿತ್ತು ಅಲ್ಲದೇ 45 ನಿಮಿಷಗಳಷ್ಟು ತಡವಾದ ಆರಂಭದ ನಂತರ ಕೇವಲ ಒಂದು ಒವರ್‌ ಕಡಿತ, ತರ್ಕಕ್ಕೆ ಸಿಗದ ನಿರ್ಣಯ ಎಂದು ಹೇಳಿವೆ.

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಸ್ಟ್ರಾಂಗ್ ಪ್ಲೇಯರ್ ಕೊಹ್ಲಿ ಇರುವಾಗ ವೀಕ್ ಪ್ಲೇಯರ್ ರೋಹಿತ್ ಯಾಕೆ ಕ್ಯಾಪ್ಟನ್ ಆಗಿದ್ದಾರೆ?

ಪ್ರಾಕ್ಟೀಸ್ ಸೆಷನ್ ಗೆ ವಿರಾಟ್ ಕೊಹ್ಲಿ-ಬುಮ್ರಾ ಚಕ್ಕರ್

ಮಗಳ ಬರ್ತ್ ಡೇ ಪಾರ್ಟಿಯಲ್ಲಿ ಟಾಯ್ ಟ್ರೈನ್ ನಲ್ಲಿ ಮಸ್ತ್ ಮಜಾ ಮಾಡಿದ ರೋಹಿತ್ ಶರ್ಮಾ

INDWvsAusw ODI: ಭಾರತ ಮಹಿಳಾ ಕ್ರಿಕೆಟ್ ಆಟಗಾರ್ತಿ ಸ್ನೇಹಾ ರಾಣಾ ತಲೆಗೆ ಗಂಭೀರ ಗಾಯ

INDvsSA test: ಎರಡನೇ ಟೆಸ್ಟ್ ಗೆ ಟೀಂ ಇಂಡಿಯಾದಲ್ಲಿ ಈ ಬದಲಾವಣೆ ಖಚಿತ

Show comments