Select Your Language

Notifications

webdunia
webdunia
webdunia
webdunia

ಶೋಯಬ್ ಅಖ್ತರ್‌ಗೆ ಭವಿಷ್ಯವಿದೆ: ಇಂತಿಕಾಬ್ ಆಲಂ

ಶೋಯಬ್ ಅಖ್ತರ್‌ಗೆ ಭವಿಷ್ಯವಿದೆ: ಇಂತಿಕಾಬ್ ಆಲಂ
ಕರಾಚಿ , ಸೋಮವಾರ, 24 ನವೆಂಬರ್ 2008 (15:37 IST)
PTI
ವಿವಾದಿತ ವೇಗಿ ಶೋಯಬ್ ಅಖ್ತರ್ ಸಾಂಪ್ರದಾಯಿಕ ಎದುರಾಳಿ ಭಾರತದ ವಿರುದ್ಧ ಮುಂದಿನ ವರ್ಷಾರಂಭದಲ್ಲಿನ ಸರಣಿಯಲ್ಲಿ ಪ್ರಮುಖ ಪಾತ್ರ ವಹಿಸಲಿದ್ದಾರೆ ಎಂದು ಪಾಕಿಸ್ತಾನದ ಕೋಚ್ ಇಂತಿಕಾಬ್ ಅಲಮ್ ಹೇಳಿದ್ದಾರೆ.

"ಅವರು ಭಾರತದ ವಿರುದ್ಧ ಬಹಳ ಪ್ರಮುಖ ಪಾತ್ರ ವಹಿಸಬಹುದು ಮತ್ತು ಅನುಭವ ಹಾಗೂ ವೇಗದೊಂದಿಗೆ ಉತ್ತಮ ಪ್ರದರ್ಶನ ನೀಡುವುದು ಅಗತ್ಯವಾಗಿದೆ. ಅವರ ಕ್ರಿಕೆಟಿಂಗ್ ಭವಿಷ್ಯ ಮುಗಿದು ಹೋಗಿದೆ ಎಂದು ನನಗನಿಸುವುದಿಲ್ಲ. ಉತ್ತಮ ಚಿಕಿತ್ಸೆ ಪಡೆದಲ್ಲಿ ಮತ್ತು ಅವರು ತಮ್ಮ ಬಗ್ಗೆ ಹೆಚ್ಚಿನ ಕಾಳಜಿ ವಹಿಸಿದಲ್ಲಿ ಇತ್ತೀಚಿನ ದಿನಗಳಲ್ಲಿ ಪಾಕಿಸ್ತಾನ ತಂಡಕ್ಕೆ ನೀಡಿದ ಕೊಡುಗೆಗಿಂತ ಹೆಚ್ಚಿನದನ್ನು ಮುಂದಿನ ದಿನಗಳಲ್ಲಿ ಮಾಡಬಹುದು" ಎಂದು ಪಾಕಿಸ್ತಾನವನ್ನು ವೆಸ್ಟ್ ಇಂಡೀಸ್ ವಿರುದ್ಧ ಕ್ಲೀನ್ ಸ್ವೀಪ್ ಸರಣಿ ಜಯದತ್ತ ನಡೆಸಿದ ಇಂತಿಕಾಬ್ ಹೇಳಿದ್ದಾರೆ.

"ಅಂತಾರಾಷ್ಟ್ರೀಯ ಕ್ರಿಕೆಟಿಗರಾಗಿ ಶೋಯಬ್‌ರ ಕ್ರಿಕೆಟ್ ಬದುಕು ಖಂಡಿತ ಕೊನೆಗೊಂಡಿಲ್ಲ ಮತ್ತು ಪಾಕಿಸ್ತಾನ ಕ್ರಿಕೆಟ್‌ಗಾಗಿ ಅವರು ಇನ್ನೂ ಒಂದಷ್ಟು ಕಾಲ ಸೇವೆ ಸಲ್ಲಿಸಬಲ್ಲರು" ಎಂದು ಅವರು ಹೇಳಿದ್ದಾರೆ.

ಇದಕ್ಕೆ ಮೊದಲು, ಶೋಯಬ್ ಅಖ್ತರ್‌ರ ಅಂತಾರಾಷ್ಟ್ರೀಯ ಭವಿಷ್ಯವು ಮುಕ್ತಾಯಗೊಂಡಿರುವುದರಿಂದ ಅವರಿಗೆ ನಿವೃತ್ತಿ ತೆಗೆದುಕೊಳ್ಳುವಂತೆ ಸೂಚಿಸಬೇಕೆಂದು ಮಾಜಿ ಪಾಕಿಸ್ತಾನ ಕ್ರಿಕೆಟ್ ಮಂಡಳಿ ಅಧ್ಯಕ್ಷ, ಮಾಜಿ ಲೆಪ್ಟಿನೆಂಟ್ ಜನರಲ್ ತಾಕಿರ್ ಜಿಯಾ ಪಿಸಿಬಿಗೆ ಸಲಹೆ ನೀಡಿದ್ದರು.

Share this Story:

Follow Webdunia kannada