Webdunia - Bharat's app for daily news and videos

Install App

ತಪ್ಪಾಗಿದೆ, ತಿದ್ಕೋಳ್ತೇವೆ; ನಾಯಕ ವೀರೇಂದ್ರ ಸೆಹ್ವಾಗ್ ನುಡಿ

Webdunia
ಬುಧವಾರ, 30 ನವೆಂಬರ್ 2011 (12:18 IST)
PTI
ವೆಸ್ಟ್‌ಇಂಡೀಸ್ ವಿರುದ್ಧದ ಮೊದಲ ಏಕದಿನ ಪಂದ್ಯದಲ್ಲಿ ಒಂದು ವಿಕೆಟ್ ಅಂತರದ ರೋಚಕ ಗೆಲುವು ದಾಖಲಿಸಿದ ನಂತರ ಮಾತನಾಡಿರುವ ಭಾರತದ ನಾಯಕ, ಕೆಲವೊಂದು ತಪ್ಪುಗಳಾಗಿದ್ದು ಮುಂದಿನ ಪಂದ್ಯಗಳಲ್ಲಿ ಸರಿಪಡಿಸಲಿದ್ದೇವೆ ಎಂದು ಭರವಸೆ ವ್ಯಕ್ತಪಡಿಸಿದ್ದಾರೆ.

ತಾಜಾ ಸುದ್ದಿ, ಕನ್ನಡ ಸುದ್ದಿ, ಕನ್ನಡ ಲೇಖನಗಳಿಗಾಗಿ ನಿಮ್ಮ ವೆಬ್‌ದುನಿಯಾಕ್ಕೆ ಭೇಟಿ ಕೊಡಿ

ಆಕರ್ಷಕ 72 ರನ್ ಗಳಿಸಿದ್ದರ ಹೊರತಾಗಿಯೂ ಮಧ್ಯಮ ಕ್ರಮಾಂಕದ ಬ್ಯಾಟ್ಸ್‌ಮನ್ ರೋಹಿತ್ ಶರ್ಮಾ ಅವರಿಗೆ ಪಂದ್ಯ ಗೆಲ್ಲಿಸಲು ಸಾಧ್ಯವಾಗಲಿಲ್ಲ. ಹಾಗಿದ್ದರೂ ಅಂತಿಮ ಜೋಡಿಯಾದ ಉಮೇಶ್ ಯಾದವ್ ಮತ್ತು ವರುಣ್ ಆರೋನ್ ಗೆಲುವಿನ ಗೆರೆ ದಾಟಿಸಿದ್ದರು.

ನಾನು ನನ್ನ ಸ್ಥಾನದಿಂದ ಕದಲಲಿಲ್ಲ. ಇದು ಮತ್ತೊಂದು ನೆಕ್ ಟು ನೆಕ್ ಪಂದ್ಯವಾಗಿತ್ತು. ನಂಬರ್ ಹತ್ತು ಹಾಗೂ 11ನೇ ಕ್ರಮಾಂಕದವರಲ್ಲಿ ಏನೇ ಹೇಳಿದರೂ ಅವರಿಗೆ ಸಾಧ್ಯವಾದದನ್ನು ಅವರು ಮಾಡುತ್ತಾರೆ. ಏನೇ ಆದರೂ ಅಂತಿಮದ ವರೆಗೂ ಆಡಲು ಪ್ರಯತ್ನಿಸು ಎಂದಷ್ಟೇ ಹೇಳಿದ್ದೆ ಎಂದರು.

ರೋಹಿತ್ ಹಾಗೂ ರವೀಂದ್ರ ಜಡೇಜಾ ಉತ್ತಮ ಜತೆಯಾಟದಲ್ಲಿ ಭಾಗಿಯಾದರು. ನಾವು ಅಲ್ಲಿಂದಲೇ ಸುಲಭವಾಗಿ ಗೆಲ್ಲಬೇಕಿತ್ತು. ಆದರೂ ಕೊನೆಗೂ ಕಷ್ಟಪಟ್ಟದರೂ ಜಯ ದಾಖಲಿಸಿದ್ದೇವೆ. ಮುಂದಿನ ಪಂದ್ಯದಲ್ಲಾದರೂ ಬ್ಯಾಟಿಂಗ್ ವಿಭಾಗದಲ್ಲಾದ ತಪ್ಪನ್ನು ತಿದ್ದಿಕೊಳ್ಳಬೇಕಾಗಿದೆ ಎಂದರು.

ಅದೇ ಹೊತ್ತಿಗೆ ತಮ್ಮ ಆಕರ್ಷಕ 72 ರನ್ನುಗಳ ಆಟಕ್ಕೆ ತೃಪ್ತಿ ವ್ಯಕ್ತಪಡಿಸಿರುವ ಯುವ ಭರವಸೆಯ ದಾಂಡಿಗ ರೋಹಿತ್ ಶರ್ಮಾ, ಪಂದ್ಯವನ್ನು ಬೇಗನೇ ಮುಗಿಸಲು ಸಾಧ್ಯವಾಗದಿರುವುದಕ್ಕೆ ಬೇಸರ ವ್ಯಕ್ತಪಡಿಸಿದರು.

ಕೊನೆಯವರೆಗೂ ಆಡುವುದು ನನ್ನ ಇರಾದೆಯಾಗಿತ್ತು. ಆದರೆ ಅಂತಿಮದಲ್ಲಿ ವಿಕೆಟ್ ಉಳಿಸಲು ಸಾಧ್ಯವಾಗಿಲ್ಲ. ಹಾಗಿದ್ದರೂ ಪರವಾಗಿಲ್ಲ ನಾವು ಪಂದ್ಯ ಗೆದ್ದಿದ್ದೇವೆ ಎಂದು ಪಂದ್ಯಶ್ರೇಷ್ಠ ಪ್ರಶಸ್ತಿಗೆ ಭಾಜನರಾದ ರೋಹಿತ್ ಸಂತಸ ವ್ಯಕ್ತಪಡಿಸಿದರು.

ಮತ್ತೊಂದೆಡೆ ನಿಕಟ ಪಂದ್ಯವನ್ನು ಕಳೆದುಕೊಂಡಿರುವುದಕ್ಕೆ ವಿಂಡೀಸ್ ನಾಯಕ ಡ್ಯಾರೆನ್ ಸಮ್ಮಿ ಸಹ ಬೇಸರ ವ್ಯಕ್ತಪಡಿಸಿದರು. ಯಾವುದೇ ಹಂತದಲ್ಲಾದರೂ ಪಂದ್ಯವನ್ನು ಕೈಬಿಡದಂತೆ ಆಟಗಾರರನ್ನು ಕೇಳಿಕೊಂಡೆ. ಆದರೆ ದುರದೃಷ್ಟವಶಾತ್ ಪಂದ್ಯ ಗೆಲ್ಲಲು ಸಾಧ್ಯವಾಗಲಿಲ್ಲ ಎಂದರು.

ವೆಬ್‌ದುನಿಯಾ ಕನ್ನಡ ಓದುಗರೇ! ಕಾಮೆಂಟ್ ಮಾಡೋ ಮುನ್ನ ಇಲ್ಲೊಮ್ಮೆ ಓದಿ ನೋಡಿ!

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಸ್ಟ್ರಾಂಗ್ ಪ್ಲೇಯರ್ ಕೊಹ್ಲಿ ಇರುವಾಗ ವೀಕ್ ಪ್ಲೇಯರ್ ರೋಹಿತ್ ಯಾಕೆ ಕ್ಯಾಪ್ಟನ್ ಆಗಿದ್ದಾರೆ?

ಪ್ರಾಕ್ಟೀಸ್ ಸೆಷನ್ ಗೆ ವಿರಾಟ್ ಕೊಹ್ಲಿ-ಬುಮ್ರಾ ಚಕ್ಕರ್

ಮಗಳ ಬರ್ತ್ ಡೇ ಪಾರ್ಟಿಯಲ್ಲಿ ಟಾಯ್ ಟ್ರೈನ್ ನಲ್ಲಿ ಮಸ್ತ್ ಮಜಾ ಮಾಡಿದ ರೋಹಿತ್ ಶರ್ಮಾ

INDWvsAusw ODI: ಭಾರತ ಮಹಿಳಾ ಕ್ರಿಕೆಟ್ ಆಟಗಾರ್ತಿ ಸ್ನೇಹಾ ರಾಣಾ ತಲೆಗೆ ಗಂಭೀರ ಗಾಯ

INDvsSA test: ಎರಡನೇ ಟೆಸ್ಟ್ ಗೆ ಟೀಂ ಇಂಡಿಯಾದಲ್ಲಿ ಈ ಬದಲಾವಣೆ ಖಚಿತ

Show comments