Webdunia - Bharat's app for daily news and videos

Install App

ಟಿ-20 ಮಹಿಳಾ ವಿಶ್ವಕಪ್: ಮೂರನೇ ಬಾರಿಗೆ ಟ್ರೋಫಿ ಗೆದ್ದ ಆಸ್ಟ್ರೇಲಿಯಾ

Webdunia
ಸೋಮವಾರ, 7 ಏಪ್ರಿಲ್ 2014 (11:00 IST)
ಐಸಿಸಿ ಮಹಿಳಾ ವಿಶ್ವ ಟಿ-20 ಪಂದ್ಯಾವಳಿಯಲ್ಲಿ ಆಸ್ಟ್ರೇಲಿಯಾದ ಮಹಿಳಾ ಕ್ರಿಕೆಟ್ ತಂಡ ಸತತ ಮೂರನೇ ಬಾರಿಗೆ ಟ್ರೋಫಿ ಗೆದ್ದು ಐತಿಹಾಸಿಕ ದಾಖಲೆ ನಿರ್ಮಿಸಿದೆ. 2010ರ ಆವೃತ್ತಿಯಲ್ಲಿ ವೆಸ್ಟ್ಇಂಡೀಸ್ ವಿರುದ್ಧ ಜಯಿಸಿ ಟ್ರೋಫಿ ಗೆದ್ದುಕೊಂಡಿದ್ದ ಆಸೀಸ್ ಮಹಿಳಾ ತಂಡ, 2012ರಲ್ಲಿ ಶ್ರೀಲಂಕಾವನ್ನು ಮಣಿಸಿ ಚಾಂಪಿಯನ್ ಪಟ್ಟ ಅಲಂಕರಿಸಿತ್ತು.
PTI

2009 ರ ಚೊಚ್ಚಲ ವಿಶ್ವ ಮಹಿಳಾ ಟಿ-20 ಟೂರ್ನಿಯಲ್ಲಿ ಇಂಗ್ಲೆಂಡ್ ವನಿತೆಯರು ನ್ಯೂಜಿಲೆಂಡ್ ವಿರುದ್ಧ 6 ವಿಕೆಟ್ ಗೆಲುವಿನೊಂದಿಗೆ ಪ್ರಶಸ್ತಿಯನ್ನು ತಮ್ಮದಾಗಿಸಿಕೊಂಡಿದ್ದರು. ಶೇರ್ ಇ ಬಾಂಗ್ಲಾ ರಾಷ್ಟ್ರೀಯ ಕ್ರೀಡಾಂಗಣದಲ್ಲಿ ರವಿವಾರ ನಡೆದ ನಿರ್ಣಾಯಕ ಪಂದ್ಯದ ಸೆಣಸಾಟದಲ್ಲಿ ಇಂಗ್ಲೆಂಡ್ ವಿರುದ್ಧ ಅಬ್ಬರದ 6 ವಿಕೆಟ್ ಗೆಲುವು ಸಾಧಿಸಿದ ಆಸ್ಟ್ರೇಲಿಯಾ ಮಹಿಳಾ ತಂ, ಪುರುಷರ ತಂಡ ಅನುಭವಿಸಿದ್ದ ವೈಫಲ್ಯವನ್ನು ಮೆಟ್ಟಿನಿಂತು ಸಂಭ್ರಮಿಸಿತು.

ಗೆಲ್ಲಲು 106 ರನ್ ಗುರಿ ಪಡೆದಿದ್ದ ಮೆಗ್ ಲ್ಯಾನ್ನಿಂಗ್ ಸಾರಥ್ಯದ ಆಸೀಸ್ ಮಹಿಳಾ ತಂಡ, ಇನ್ನೂ 29 ಎಸೆತಗಳು ಬಾಕಿ ಇರುವಂತೆಯೇ, 15.1 ಓವರ್‌ಗಳಲ್ಲಿ ಕೇವಲ 4 ವಿಕೆಟ್ ಕಳೆದುಕೊಂಡು ಜಯದ ಕಹಳೆ ಮೊಳಗಿಸಿತು.

ಶಿಸ್ತುಬದ್ಧ ದಾಳಿ ನಡೆಸಿ ಇಂಗ್ಲೆಂಡ್ ತಂಡವನ್ನು ನಿಯಂತ್ರಿಸಿದ ಸಾರಾ ಕೋಯ್ಟಿ ಪಂದ್ಯಶ್ರೇಷ್ಠರಾದರು. 6 ಪಂದ್ಯಗಳಲ್ಲಿ 98 ರನ್‌ಗೆ 13 ವಿಕೆಟ್ ಪಡೆದ ಇಂಗ್ಲೆಂಡ್‌ನ ಅನ್ಯಾಶ್ರುಸೋಲ್ ಸರಣಿಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು.

ಆರಂಭಿಕರಾದ ಎಲಿಸಿ ವಿಲಾನಿ (12), ಜೆಸ್ ಜೊನ್ನಾಸೆನ್ (15) ಅಸ್ಥಿರ ಪ್ರದರ್ಶನ ತೋರಿದರಾದರೂ, ತಂಡದ ನಾಯಕಿಯಾಗಿ ಯಶಸ್ವಿ ಪ್ರದರ್ಶನ ನೀಡಿದ ಲ್ಯಾನ್ನಿಂಗ್ 30 ಎಸೆತಗಳಲ್ಲಿ 4 ಬೌಂಡರಿ, 2 ಸಿಕ್ಸರ್‌ಗಳ ನೆರವಿನಿಂದ 44 ಹಾಗೂ ಎಲಿಸಿ ಪೆರ್ರಿ 32 ಎಸೆತಗಳಲ್ಲಿ 3 ಬೌಂಡರಿ, 1 ಸಿಕ್ಸರ್ ನೆರವಿನಿಂದ 31 ರನ್ ಮಾಡಿ ತಂಡದ ಗೆಲುವಿಗೆ ಕಾರಣರಾದರು.

ಟಾಸ್ ಗೆದ್ದು ಮೊದಲು ಫೀಲ್ಡಿಂಗ್ ಮಾಡಿದ ಆಸೀಸ್ ವಿರುದ್ಧ ಚಾರ್ಲೊಟ್ಟಿ ಎಡ್ವರ್ಡ್ಸ್ ನಾಯಕತ್ವದ ಇಂಗ್ಲೆಂಡ್ ಮಹಿಳಾ ತಂಡ, ಬ್ಯಾಟಿಂಗ್ ವೈಫಲ್ಯದಿಂದಾಗಿ 20 ಓವರ್‌ಗಳಲ್ಲಿ 8 ವಿಕೆಟ್ ನಷ್ಟಕ್ಕೆ 105 ರನ್ ಗಳಿಸಿತು. ತಂಡದ ಪರ ಹೀತರ್ ನೈಟ್ 24 ಎಸೆತದಲ್ಲಿ 29 ರನ್ ಮಾಡಿ ಗರಿಷ್ಠ ಸ್ಕೋರ್ ಮಾಡಿದ ಆಟಗಾರ್ತಿ ಎನಿಸಿಕೊಂಡರು.

ಆಸೀಸ್ ಪರ ಸಾರಾ ಕೋಯ್ಟಿ 16ಕ್ಕೆ 3 ವಿಕೆಟ್ ಪಡೆದು ಯಶಸ್ವಿ ಎನಿಸಿದರೆ, ರಿನೆ ಫಾರೆಲ್ ಮತ್ತು ಎಲಿಸಿ ಪೆರ್ರಿ ತಲಾ 2 ವಿಕೆಟ್ ಗಳಿಸಿದರು

ವೆಬ್ದುನಿಯಾವನ್ನು ಓದಿ

ಎಲ್ಲವನ್ನೂ ನೋಡು

ಓದಲೇಬೇಕು

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಎಲ್ಲವನ್ನೂ ನೋಡು

ಸುದ್ದಿ ಜಗತ್ತು

ಸ್ಟ್ರಾಂಗ್ ಪ್ಲೇಯರ್ ಕೊಹ್ಲಿ ಇರುವಾಗ ವೀಕ್ ಪ್ಲೇಯರ್ ರೋಹಿತ್ ಯಾಕೆ ಕ್ಯಾಪ್ಟನ್ ಆಗಿದ್ದಾರೆ?

ಪ್ರಾಕ್ಟೀಸ್ ಸೆಷನ್ ಗೆ ವಿರಾಟ್ ಕೊಹ್ಲಿ-ಬುಮ್ರಾ ಚಕ್ಕರ್

ಮಗಳ ಬರ್ತ್ ಡೇ ಪಾರ್ಟಿಯಲ್ಲಿ ಟಾಯ್ ಟ್ರೈನ್ ನಲ್ಲಿ ಮಸ್ತ್ ಮಜಾ ಮಾಡಿದ ರೋಹಿತ್ ಶರ್ಮಾ

INDWvsAusw ODI: ಭಾರತ ಮಹಿಳಾ ಕ್ರಿಕೆಟ್ ಆಟಗಾರ್ತಿ ಸ್ನೇಹಾ ರಾಣಾ ತಲೆಗೆ ಗಂಭೀರ ಗಾಯ

INDvsSA test: ಎರಡನೇ ಟೆಸ್ಟ್ ಗೆ ಟೀಂ ಇಂಡಿಯಾದಲ್ಲಿ ಈ ಬದಲಾವಣೆ ಖಚಿತ

Show comments