Select Your Language

Notifications

webdunia
webdunia
webdunia
webdunia

ಕ್ರಿಕೆಟ್ ಜನಪ್ರಿಯತೆಗೆ ಎಫ್-1 ಸರಿಸಾಟಿಯಾಗದು: ಯುವರಾಜ್

ಕ್ರಿಕೆಟ್ ಜನಪ್ರಿಯತೆಗೆ ಎಫ್-1 ಸರಿಸಾಟಿಯಾಗದು: ಯುವರಾಜ್
ನೋಯ್ಡಾ , ಸೋಮವಾರ, 31 ಅಕ್ಟೋಬರ್ 2011 (11:51 IST)
ಭಾರತದ ಚೊಚ್ಚಲ ಗ್ರಾಂಡ್ ಪ್ರೀ ಫಾರ್ಮುಲಾ ಒನ್ ರೇಸನ್ನು ಕಣ್ಣಾರೆ ನೋಡುವ ಮೂಲಕ ವಿಸ್ಮಿತರಾಗಿರುವ ಕ್ರಿಕೆಟಿಗ ಯುವರಾಜ್ ಸಿಂಗ್, ಕ್ರಿಕೆಟ್ ಜನಪ್ರಿಯತೆಯ ಜತೆ ಎಫ್-1 ರೇಸನ್ನು ಹೋಲಿಸಲಾಗದು ಎಂದು ಅಭಿಪ್ರಾಯಪಟ್ಟಿದ್ದಾರೆ.

ತಾಜಾ ಸುದ್ದಿ, ಕನ್ನಡ ಸುದ್ದಿ, ಕನ್ನಡ ಲೇಖನಗಳಿಗಾಗಿ ನಿಮ್ಮ ವೆಬ್‌ದುನಿಯಾಕ್ಕೆ ಭೇಟಿ ಕೊಡಿ

ಸಹ ಆಟಗಾರರಾದ ಸಚಿನ್ ತೆಂಡೂಲ್ಕರ್ ಹಾಗೂ ಹರಭಜನ್ ಸಿಂಗ್ ಜತೆ 60 ಸುತ್ತಿನ ರೇಸನ್ನು ವೀಕ್ಷಿಸಿರುವ ಯುವಿ, ಎಫ್-1 ಕಾರಿನ ಶಬ್ದದಿಂದ ಮನ ಸೆಳೆತಕ್ಕೊಳಗಾಗಿದ್ದಾರೆ.

ರೇಸ್‌ನ ಆರಂಭ ಮನಮೋಹಕವಾಗಿತ್ತು. ಕಾರಿನ ಶಬ್ದವು ನಾನು ಕೇಳಿರುವುದರಲ್ಲೇ ಅತ್ಯಾಶ್ಚರ್ಯಕರವಾಗಿತ್ತು. ಅಲ್ಲದೆ ಫಾರ್ಮುಲಾ ಒನ್‌ಗೆ ದೊರಕಿರುವ ಪ್ರತಿಕ್ರಿಯೆಯಿಂದಲೇ ಪ್ರಸ್ತುತ ರೇಸ್‌ಗೆ ದೇಶದಲ್ಲಿ ಉಳಿಗಾಲವಿದೆ ಎಂದು ಸಾಬೀತಾಗಿದೆ ಎಂದರು.

ಕ್ರಿಕೆಟ್ ಜನಪ್ರಿಯತೆಗೆ ಎಫ್-1 ಸರಿಸಾಟಿಯಾಗುವುದೇ ಎಂಬುದಕ್ಕೆ, ಕ್ರಿಕೆಟ್ ಜನಪ್ರಿಯತೆಯನ್ನು ಹಿಮ್ಮೆಟ್ಟಿಸುವುದು ಕಷ್ಟ. ಯಾಕೆಂದರೆ ಫಾರ್ಮುಲಾ ಒನ್ ರೇಸ್ ವರ್ಷದಲ್ಲಿ ಒಂದು ಬಾರಿಯಷ್ಟೇ ನಡೆಯುತ್ತದೆ. ಒಂದು ವೇಳೆ ವರ್ಷದಲ್ಲಿ ಆರು ಬಾರಿಯಾದರೂ ನಡೆಯುತ್ತಿದ್ದಲ್ಲಿ ನಾನು ಖಂಡಿತವಾಗಿಯೂ ಹೌದು ಎನ್ನುತ್ತಿದ್ದೆ. ಹಾಗಿದ್ದರೂ ಎಫ್-1 ವೀಕ್ಷಿಸುವುದೇ ಶ್ರೇಷ್ಠ ಅನುಭವ ಎಂದಿರುವ ಯುವಿ, ಭಾರತೀಯ ಮೋಟಾರ್ ಸ್ಫೋಟ್ಸ್ ವಿಭಾಗಕ್ಕೆ ಮತ್ತಷ್ಟು ಉತ್ತೇಜನ ಸಿಗಲಿದೆ ಎಂದರು.

ಇದೇ ಸಂದರ್ಭದಲ್ಲಿ ಫೋರ್ಸ್ ಇಂಡಿಯಾ ಅಭಿಮಾನಿಯಾಗಿ ಆಗಮಿಸಿದ್ದ ಸ್ಟೈಲಿಶ್ ಬ್ಯಾಟ್ಸ್‌ಮನ್ ಯುವಿ, ತಂಡದ ತೃಪ್ತಿದಾಯಕ ಪ್ರದರ್ಶನದ ಸಂತಸಗೊಂಡಿದ್ದಾರೆ. ಫೋರ್ಸ್ ಇಂಡಿಯಾವನ್ನು ಬೆಂಬಲಿಸಿ ನಾನಿಲ್ಲಿ ಬಂದಿದ್ದೆ. ಹಾಗೆಯೇ ಆಡ್ರಿಯಾನ್ ಸುತಿನ್ ಒಂಬತ್ತನೇ ಸ್ಥಾನ ಪಡೆಯಲು ಯಶಸ್ವಿಯಾಗಿದ್ದರು. ಆದರೆ ನರೈನ್ ಕಾರ್ತಿಕೇಯನ್ ಕಠಿಣ ಪರಿಸ್ಥಿತಿ ಎದುರಿಸುವಂತಾಗಿತ್ತು ಎಂದು ತಿಳಿಸಿದರು.

ಸದ್ಯ ಗಾಯದಿಂದ ಸಂಪೂರ್ಣ ಚೇತರಿಕೆ ಪಡೆದಿರುವ ಯುವಿ ವೆಸ್ಟ್ಇಂಡೀಸ್ ವಿರುದ್ಧದ ಟೆಸ್ಟ್ ಸರಣಿಯನ್ನು ಎದುರು ನೋಡುತ್ತಿದ್ದಾರೆ. ನಾನೀಗ ದೈಹಿಕ ಸಾಮರ್ಥ್ಯವನ್ನು ಹೊಂದಿದ್ದು ತಾಜಾತನದಿಂದ ಕೂಡಿದ್ದೇನೆ. ನಮ್ಮ ತಂಡವು ವಿಂಡೀಸ್ ವಿರುದ್ಧ ಉತ್ತಮ ಪ್ರದರ್ಶನ ನೀಡುವ ಭರವಸೆಯಿದೆ ಎಂದರು.

ವೆಬ್‌ದುನಿಯಾ ಕನ್ನಡ ಓದುಗರೇ! ಕಾಮೆಂಟ್ ಮಾಡೋ ಮುನ್ನ ಇಲ್ಲೊಮ್ಮೆ ಓದಿ ನೋಡಿ!

Share this Story:

Follow Webdunia kannada