Select Your Language

Notifications

webdunia
webdunia
webdunia
webdunia

ಆಂಗ್ಲರ ಪಾಲಿಗಿದು ಅವಿಸ್ಮರಣೀಯ ವರ್ಷ: ಟಿಮ್ ಬ್ರೆಸ್ಮನ್

ಆಂಗ್ಲರ ಪಾಲಿಗಿದು ಅವಿಸ್ಮರಣೀಯ ವರ್ಷ: ಟಿಮ್ ಬ್ರೆಸ್ಮನ್
ಲಂಡನ್ , ಸೋಮವಾರ, 31 ಅಕ್ಟೋಬರ್ 2011 (15:29 IST)
ಇತ್ತೀಚೆಗಷ್ಟೇ ಭಾರತದ ವಿರುದ್ಧದ ಏಕದಿನ ಸರಣಿಯಲ್ಲಿ ಎದುರಾದ 0-5 ಅಂತರದ ಹೀನಾಯ ಸೋಲಿನ ಹೊರತಾಗಿಯೂ ಪ್ರಸಕ್ತ ವರ್ಷವು ಆಂಗ್ಲರ ಪಾಲಿಗೆ ಅವಸ್ಮರಣೀಯ ಎನಿಸಿಕೊಂಡಿದೆ ಎಂದು ಇಂಗ್ಲೆಂಡ್ ಬಲಗೈ ವೇಗಿ ಟಿಮ್ ಬ್ರೆಸ್ಮನ್ ಅಭಿಪ್ರಾಯಪಟ್ಟಿದ್ದಾರೆ.

ತಾಜಾ ಸುದ್ದಿ, ಕನ್ನಡ ಸುದ್ದಿ, ಕನ್ನಡ ಲೇಖನಗಳಿಗಾಗಿ ನಿಮ್ಮ ವೆಬ್‌ದುನಿಯಾಕ್ಕೆ ಭೇಟಿ ಕೊಡಿ

ಪ್ರಸ್ತುತ ಇಂಗ್ಲೆಂಡ್ ಟೆಸ್ಟ್ ಹಾಗೂ ಟ್ವೆಂಟಿ-20 ಮಾದರಿಯಲ್ಲಿ ಅಗ್ರಸ್ಥಾನ ವಶಪಡಿಸಿಕೊಂಡಿದೆ. ಇದನ್ನೇ ಪ್ರಮುಖವಾಗಿ ಉಲ್ಲೇಖಿಸಿರುವ ಬ್ರೆಸ್ಮನ್, ಇಂದೊಂದು ಮಹತ್ತರ ಸಾಧನೆ ಎಂದಿದ್ದಾರೆ.

ಮೂರು ಮಾದರಿಗಳ ಕ್ರಿಕೆಟ್‌ನ ಎರಡು ವಿಭಾಗಗಳಲ್ಲಿ ನಂಬರ್ ವನ್ ಎನಿಸಿಕೊಳ್ಳುವುದು ನಿಜಕ್ಕೂ ಉತ್ತಮ ಸಾಧನೆ. ಅದರಲ್ಲೂ ವಿಶೇಷವಾಗಿ ನಾವು ಟೆಸ್ಟ್‌ನಲ್ಲಿ ಅಗ್ರಸ್ಥಾನಕ್ಕೇರಿರುವುದು ಪರಮೋತ್ಕರ್ಷ ಸಾಧನೆಯಾಗಿದೆ ಎಂದವರು ಪ್ರತಿಕ್ರಿಯಿಸಿದ್ದಾರೆ.

ಪ್ರಸಕ್ತ ಸಾಲಿನಲ್ಲಿ ನಾವು ಆಡಿರುವ ರೀತಿಯಂತೂ ಅದ್ಭುತ. ಹಾಗಿದ್ದರೂ ಎಲ್ಲ ವಿಭಾಗದಲ್ಲಿಯೂ ಫಲಿತಾಂಶವನ್ನು ಸುಧಾರಿಸುಕೊಳ್ಳುವತ್ತ ಪ್ರಯತ್ನ ಮುಂದುವರಿಸಿದ್ದೇವೆ ಎಂದರು.

ಪ್ರಸ್ತುತ ವರ್ಷ ಇಂಗ್ಲೆಂಡ್ ಪಾಲಿಗೆ ಅವಿಸ್ಮರಣೀಯ ಎನಿಸಿಕೊಂಡಿದೆ. ಸಾಂಪ್ರಾದಾಯಿಕ ಬದ್ಧ ಎದುರಾಳಿಯಾದ ಆಸ್ಟ್ರೇಲಿಯಾ ತಂಡವನ್ನು ಮಣಿಸುವ ಮೂಲಕ ಪ್ರತಿಷ್ಠಿತ ಆಶಸ್ ಸರಣಿ ವಶಪಡಿಸಿಕೊಂಡಿದ್ದ ಇಂಗ್ಲಿಂಷರು ಭಾರತದ ವಿರುದ್ಧದ ನಾಲ್ಕು ಪಂದ್ಯಗಳ ಟೆಸ್ಟ್ ಸರಣಿಯನ್ನು 4-0 ಅಂತರದಲ್ಲಿ ವೈಟ್‌ವಾಶ್ ಮಾಡಿಕೊಂಡಿತ್ತು. ಆ ಮೂಲಕ ರ‌್ಯಾಂಕಿಂಗ್ ಪಟ್ಟಿಯಲ್ಲಿ ಅಗ್ರ ಸ್ಥಾನಕ್ಕೇರಿತ್ತು.

ವೆಬ್‌ದುನಿಯಾ ಕನ್ನಡ ಓದುಗರೇ! ಕಾಮೆಂಟ್ ಮಾಡೋ ಮುನ್ನ ಇಲ್ಲೊಮ್ಮೆ ಓದಿ ನೋಡಿ!

Share this Story:

Follow Webdunia kannada