Select Your Language

Notifications

webdunia
webdunia
webdunia
webdunia

ಅರ್ಧದಷ್ಟು ಪಾಕಿಸ್ತಾನ ತಂಡವೇ ಮೋಸದಾಟದಲ್ಲಿ ಭಾಗಿ: ಶೋಯಿಬ್ ಅಖ್ತರ್

ಅರ್ಧದಷ್ಟು ಪಾಕಿಸ್ತಾನ ತಂಡವೇ ಮೋಸದಾಟದಲ್ಲಿ ಭಾಗಿ: ಶೋಯಿಬ್ ಅಖ್ತರ್
ನವದೆಹಲಿ , ಶನಿವಾರ, 24 ಸೆಪ್ಟಂಬರ್ 2011 (17:40 IST)
ಶೋಯಿಬ್ ಅಖ್ತರ್ ಅವರು ತಮ್ಮ ಆತ್ಮಚರಿತ್ರೆ 'ಕಾಂಟ್ರವರ್ಷಿಯಲಿ ಯುವರ್ಸ್' ಪುಸ್ತಕದಲ್ಲಿ ಭಾರತದ ಬ್ಯಾಟಿಂಗ್ ದಿಗ್ಗಜರಾದ ಸಚಿನ್ ತೆಂಡೂಲ್ಕರ್ ಹಾಗೂ ರಾಹುಲ್ ದ್ರಾವಿಡ್ ಅವರನ್ನು ಮಾತ್ರ ಟಾರ್ಗೆಟ್ ಮಾಡಿಲ್ಲ ಬದಲಾಗಿ ಅರ್ಧದಷ್ಟು ಪಾಕಿಸ್ತಾನ ತಂಡವೇ ಮೋಸದಾಟದಲ್ಲಿ ಭಾಗಿಯಾಗುತ್ತಿತ್ತು ಎಂದು ಹೇಳುವ ಮೂಲಕ ವಿವಾದದ ಹೊಸ ಕಿಡಿ ಹೊತ್ತಿಸಿದ್ದಾರೆ.

ತಾಜಾ ಸುದ್ದಿ, ಕನ್ನಡ ಸುದ್ದಿ, ಕನ್ನಡ ಲೇಖನಗಳಿಗಾಗಿ ನಿಮ್ಮ ವೆಬ್‌ದುನಿಯಾಕ್ಕೆ ಭೇಟಿ ಕೊಡಿ

ನಾನು ಸೇರಿದಂತೆ ಪಾಕಿಸ್ತಾನ ತಂಡದ ಅನೇಕ ಬೌಲರುಗಳು ಬಾಲ್ ಟ್ಯಾಂಪರಿಂಗ್‌ನಲ್ಲಿ ಹಲವು ಬಾರಿ ಭಾಗಿಯಾಗುತ್ತಿದ್ದೆವು ಎಂದು ತಮ್ಮ ಆತ್ಮಚರಿತ್ರೆಯಲ್ಲಿ ಅಖ್ತರ್ ಸತ್ಯಾಂಶ ಬಹಿರಂಗಪಡಿಸಿದ್ದಾರೆ.

ನನಗೀಗಲೂ ನೆನಪಿದೆ. ಡಾಂಬುಲಾದಲ್ಲಿ ತುಂಬಾನೆ ಸೆಕೆಯ ಪರಿಸ್ಥಿತಿಯಿತ್ತು. ಅಂದೊಂದು ನಿಧಾನಗತಿಯ ಪಿಚ್ ಆಗಿತ್ತು. ನಾವು ನ್ಯೂಜಿಲೆಂಡ್ ವಿರುದ್ಧ ಆಡುತ್ತಿದ್ದೆವು. ನಮಗೆ ಫಲಿತಾಂಶದ ಅಗತ್ಯವಿತ್ತು. ಹೀಗಾಗಿ ಯಾವುದೇ ಹಿಂಜರಿಕೆಯಿಲ್ಲದೆ ನಾನು ಚೆಂಡನ್ನು ವಿರೂಪಗೊಳಿಸಲು ಆರಂಭಿಸಿದೆ. ಹೌದು, ಪಂದ್ಯದ ಅವಧಿಯಲ್ಲೇ ಚೆಂಡನ್ನು ವಿರೂಪಗೊಳಿಸಿದೆ. ಇದು ನಿಯಮ ಬಾಹಿರ ಎಂಬುದು ಗೊತ್ತಿತ್ತು. ಆದರೆ ಚೆಂಡು ಸೀಮ್ ಆಗುತ್ತಿರಲಿಲ್ಲ. ಹೀಗಾಗಿ ಏನಾದರರೊಂದು ಮಾಡಬೇಕಾಗಿತ್ತು. ಇದು ದೊಡ್ಡ ವಿವಾದಕ್ಕೆ ನಾಂದಿಯಾಗಲಿದೆ ಎಂಬುದು ನನಗೆ ತಿಳಿದಿದೆ. ಆದರೆ ಸುಳ್ಳು ಹೇಳುವುದವನ್ನು ನಾನು ಇಷ್ಟಪಡುವುದಿಲ್ಲ ಎಂದಿದ್ದಾರೆ.

ಚೆಂಡನ್ನು ವಿರೂಪಗೊಳಿಸುವ ಸಲುವಾಗಿ ನಾನು ಹಲವು ಮಾರ್ಗಗಳನ್ನು ಬಳಸುತ್ತಿದ್ದೆವು. ಇದರಲ್ಲಿ ಶೂನ ಮುಳ್ಳು ಹಾಗೂ ಹಿಂಬದಿ ಜೇಬಿನ ಜಿಪ್ ಕೂಡಾ ಸೇರಿವೆ. ಹಲವಾರು ಬೌಲರುಗಳು ವ್ಯಾಸಲಿನ್ ಅಥವಾ ಗಮ್ ಬಳಸುತ್ತಾರೆ. ಚೆಂಡು ಸೀಮ್ ಆಗದ ಹೊರತು ಇಂದೊಂದು ಕೆಟ್ಟ ಅಭ್ಯಾಸವಲ್ಲ ಎಂಬುದು ನನ್ನ ವಾದ. ಹೀಗಾಗಿ ಬಾಲ್ ಟ್ಯಾಂಪರಿಂಗ್ ಅನ್ನೂ ಕಾನೂನಬದ್ಧಗೊಳಿಸಬೇಕು. ಆ ಮೂಲಕ ಬಹುಶ: ಇಂಚಗ ಕುತಂತ್ರವನ್ನು ನೀಗಿಸಬಹುದು. ಈ ಎಲ್ಲ ವಿಚಾರಗಳನ್ನು ಬಯಲು ಮಾಡುವ ಮೂಲಕ ಸ್ವತಃ ನಾನು ಅಪಾಯವನ್ನು ಆಹ್ವಾನಿಸುತ್ತಿದ್ದೇನೆ ಎಂಬುದರ ಅರಿವು ನನಗಿದೆ ಎಂದಿದ್ದಾರೆ.

ಇಷ್ಟು ದೊಡ್ಡ ಆಪಾದನೆ ಮಾಡುವುದರ ಬಗ್ಗೆ ತಮಗೆ ಅವರಿವಿಲ್ಲವೇ ಎಂಬುದಕ್ಕೆ ಅಖ್ತರ್, ಎಲ್ಲ ಬೌಲರುಗಳು ಇದನ್ನು ಮಾಡುತ್ತಿರುತ್ತಾರೆ. ಇದು ಕೇವಲ ಒಬ್ಬ ಶೋಯಿಬ್‌ನ ಕಥೆಯಲ್ಲ. ಇದಕ್ಕೆ ಮೊಹಮ್ಮದ್ ಅಮೇರ್ ಪ್ರಸಂಗವನ್ನು ಉದಾಹರಿಸಿದ ಅಖ್ತರ್, ನನ್ನನ್ನು ಸಹ ಮೊದಲ ಬಾರಿಗೆ ಮೋಸದಾಟಕ್ಕೆ ಆಹ್ವಾನಿಸಿದಾಗ ನಾನು ಸಹ ಅಷ್ಟೇ ಚಿಕ್ಕವನಾಗಿದ್ದೆ. 1999ರ ಕೊಲ್ಕತಾ ಟೆಸ್ಟ್ ಪಂದ್ಯದಲ್ಲಿ ಇದು ನಡೆದಿತ್ತು. ಆದರೆ ಯಾವುದರ ಬಗ್ಗೆ ಅವರು ಮಾತನಾಡುತ್ತಿದ್ದಾರೆ ಎಂಬುದು ನನಗೆ ಗೊತ್ತಿರಲಿಲ್ಲ ಎಂದರು.

ಮೊದಲೇ ತಿಳಿಸಿದಂತೆ ನಾನು ನೊ ಬಾಲ್ ಗಾದೂ ವೈಡ್ ಹಾಕಬೇಕಾಗುತ್ತದೆ. ಕೆಲವು ನಿರ್ದಿಷ್ಟ ಕಲರ್ ಡ್ರೆಸ್ ಹಾಕಿದ ಜನರು ಸ್ಟೇಡಿಯಂನಲ್ಲಿ ನಿಂತಿರುತ್ತಾರೆ. ಕಳಪೆ ನಿರ್ವಹಣೆ ನೀಡುವುದರ ಬಗ್ಗೆ ನನಗೆ ಮೊದಲೇ ತಿಳಿಸಲಾಗುತ್ತದೆ ಎಂದು ಅಖ್ತರ್ ಮೋಸದಾಟದ ಬಗ್ಗೆ ವಿವರಣೆ ನೀಡಿದ್ದಾರೆ.

ನನಗಿದರ ಬಗ್ಗೆ ಆಸಕ್ತಿಯಿಲ್ಲ ಎಂಬುದನ್ನು ಸ್ಪಷ್ಟಪಡಿಸಿದ್ದೆ. ಇದಕ್ಕೆ ಪ್ರತಿಯಾಗಿ ಅವರು ಇಡೀ ಅರ್ಧದಷ್ಟು ತಂಡವೇ ಇದರಲ್ಲಿ ಭಾಗಿಯಾಗಿದೆ ಎಂದು ಬಹಿರಂಗಪಡಿಸಿದ್ದರು. ತಂದಿತ್ತು. ಬಡ ಕುಟುಂಬದ ಹಿನ್ನಲೆಯಿಂದ ಬಂದ ಪ್ರತಿಯೊಬ್ಬರನ್ನು ಅವರು ಮ್ಯಾಚ್ ಫಿಕ್ಸಿಂಗ್‌ಗೆ ಗುರಿಪಡಿಸುತ್ತಿದ್ದರು. ಅವರು ನಮಗೆ ಕಾರು ಹಾಗೂ ಮನೆಗಳನ್ನು ಸನ್ಮಾನಿಸುತ್ತಾರೆ. ಒಂದು ಬಾರಿ ನಾನು ಈ ವಿಷಯವನ್ನು ಶಾಹಿದ್ ಆಫ್ರಿದಿ ಬಳಿಯೂ ಹಂಚಿಕೊಂಡಿದ್ದೆ. ಆಗ ಆಫ್ರಿದಿ 'ಇಲ್ಲಿ ಕೇಳು, ಯಾವುದಕ್ಕೂ ಗಮನ ಕೊಡದಿರು. ಎಲ್ಲದರಿಂದಲೂ ದೂರವಿರು' ಎಂಬುದಾಗಿ ಸಲಹೆ ಮಾಡಿದ್ದರು. ಒಂದು ವೇಳೆ ಅವರು ಸಹ ಇಂತಹ ಪೀಡನೆಗೊಳಗಾಗಿರಬಹುದು ಎಂದು ಅಖ್ತರ್ ಸೇರಿಸಿದರು. ಮಾತು ಮುಂದುರಿಸಿದ ಅಖ್ತರ್, ಮ್ಯಾಚ್ ಫಿಕ್ಸಿಂಗ್ ಪೆಡಂಭೂತ ಇಡೀ ಪಾಕಿಸ್ತಾನ ತಂಡವನ್ನೇ ಆವರಿಸಿತ್ತು ಎಂದಿದ್ದಾರೆ.

ವೆಬ್‌ದುನಿಯಾ ಕನ್ನಡ ಓದುಗರೇ! ಕಾಮೆಂಟ್ ಮಾಡೋ ಮುನ್ನ ಇಲ್ಲೊಮ್ಮೆ ಓದಿ ನೋಡಿ!

Share this Story:

Follow Webdunia kannada