Select Your Language

Notifications

webdunia
webdunia
webdunia
webdunia

2 ಏಕದಿನ ಪಂದ್ಯಗಳಿಗೆ ಜಿಂಬಾಬ್ವೆ ನಾಯಕ ಚಿಗುಂಬರಾ ಅಮಾನತು

2 ಏಕದಿನ ಪಂದ್ಯಗಳಿಗೆ ಜಿಂಬಾಬ್ವೆ ನಾಯಕ ಚಿಗುಂಬರಾ ಅಮಾನತು
ಇಸ್ಲಾಮಾಬಾದ್ , ಗುರುವಾರ, 28 ಮೇ 2015 (16:16 IST)
ಜಿಂಬಾಬ್ವೆ ನಾಯಕ  ಚಿಗುಂಬರಾ ಪಾಕಿಸ್ತಾನದ ವಿರುದ್ಧ ಉಳಿದ ಏಕ ದಿನ ಅಂತಾರಾಷ್ಟ್ರೀಯ ಸರಣಿಗಳನ್ನು ಮಿಸ್ ಮಾಡಿಕೊಳ್ಳಲಿದ್ದಾರೆ. ನಿಧಾನಗತಿಯ ಓವರುಗಳನ್ನು ನಿರ್ವಹಿಸಿದ ಕಾರಣ ಅವರನ್ನು ಎರಡು ಪಂದ್ಯಗಳಿಗೆ ನಿಷೇಧಿಸಲಾಗಿದೆ.
 
ಪಾಕಿಸ್ತಾನದ 41 ರನ್ ಜಯದಲ್ಲಿ ನಿಗದಿತ ಗುರಿಗಿಂತ ಮೂರು ಓವರುಗಳ ಕೊರತೆ ಜಿಂಬಾಬ್ವೆಗೆ ಕಂಡುಬಂದಿದ್ದರಿಂದ ಚಿಗುಂಬರಾ ಅವರನ್ನು ಅಮಾನತುಗೊಳಿಸಲಾಗಿದೆ. 
ಐಸಿಸಿಯ ರಿಮೋಟ್ ಮ್ಯಾಚ್ ರೆಫರಿ ರೋಷನ್ ಮಹಾನಾಮಾ ಜಿಂಬಾಬ್ವೆ ಆಟಗಾರರಿಗೆ ಪಂದ್ಯಶುಲ್ಕದ ಶೇ. 40ರಷ್ಟು ದಂಡ ವಿಧಿಸಿದ್ದಾರೆ.

ಚಿಗುಂಬರಾ ತಮ್ಮ ಚೊಚ್ಚಲ ಶತಕವನ್ನು ಬಾರಿಸಿ 95 ಎಸೆತಗಳಲ್ಲಿ 117 ರನ್ ಗಳಿಸಿದ್ದರು. ಈಗ ಶುಕ್ರವಾರ ಮತ್ತು ಭಾನುವಾರ ಎರಡು ಏಕದಿನಗಳನ್ನು ಮಿಸ್ ಮಾಡಿಕೊಳ್ಳಲಿದ್ದಾರೆ. 
 ಈ ಪಂದ್ಯಕ್ಕೆ ಐಸಿಸಿ ತನ್ನ ಪಂದ್ಯದ ಅಧಿಕಾರಿಗಳನ್ನು ಕಳಿಸಲು ಭದ್ರತಾ ಕಾರಣಗಳಿಗಾಗಿ ನಿರಾಕರಿಸಿತ್ತು.
 

Share this Story:

Follow Webdunia kannada