Select Your Language

Notifications

webdunia
webdunia
webdunia
webdunia

ಯೂನಿಸ್ ಖಾನ್ ಅಜೇಯ 171 ರನ್: ಪಾಕ್‌ಗೆ ಶ್ರೀಲಂಕಾ ವಿರುದ್ಧ ಟೆಸ್ಟ್ ಸರಣಿ ಜಯ

ಯೂನಿಸ್ ಖಾನ್ ಅಜೇಯ 171 ರನ್: ಪಾಕ್‌ಗೆ ಶ್ರೀಲಂಕಾ ವಿರುದ್ಧ ಟೆಸ್ಟ್ ಸರಣಿ ಜಯ
ಪಲ್ಲೆಕೆಲೆ , ಮಂಗಳವಾರ, 7 ಜುಲೈ 2015 (17:22 IST)
ಯೂನಿಸ್ ಖಾನ್ ಅವರ ಅಬ್ಬರದ ಅಜೇಯ 171 ರನ್ ನೆರವಿನಿಂದ ಪಾಕಿಸ್ತಾನ ಶ್ರೀಲಂಕಾ ವಿರುದ್ಧ 3ನೇ ಟೆಸ್ಟ್‌ನಲ್ಲಿ ಮಂಗಳವಾರ ಜಯಗಳಿಸುವ ಮೂಲಕ 2006ರಿಂದೀಚೆಗೆ ದ್ವೀಪರಾಷ್ಟ್ರದಲ್ಲಿ ಮೊದಲ ಬಾರಿಗೆ ಸರಣಿಯನ್ನು ಗೆದ್ದುಕೊಂಡಿದೆ. 
 
 ಪ್ರವಾಸಿಗಳು 5ನೇ ದಿನದಾಟದಲ್ಲಿ 377 ರನ್ ಗುರಿಯನ್ನು ಯಶಸ್ವಿಯಾಗಿ ಚೇಸ್ ಮಾಡುವ ಮೂಲಕ 3 ವಿಕೆಟ್ ಕಳೆದುಕೊಂಡು 382 ರನ್ ಗಳಿಸಿದರು. ಕ್ರಿಕೆಟ್ ಇತಿಹಾಸದಲ್ಲಿ 6 ಅತ್ಯಧಿಕ ಯಶಸ್ವಿ ರನ್ ಚೇಸ್ ಪ್ರವಾಸಿ ತಂಡ ಸಾಧಿಸಿದೆ. 
 
 ನಾಯಕ ಮಿಷಬ್ ಉಲ್ ಹಕ್ ಅಜೇಯ 59 ರನ್ ಗಳಿಸಿ ಜೆಹಾನ್ ಮುಬಾರಕ್ ಬೌಲಿಂಗ್‌ನಲ್ಲಿ ಗೆಲುವಿನ ಸಿಕ್ಸರ್ ಬಾರಿಸುವ ಮೂಲಕ ಶ್ರೀಲಂಕಾದಲ್ಲಿ ಸತತ ಮೂರು ಸೋಲಿನ ಸರಣಿಗಳಿಗೆ ತೆರೆಎಳೆದರು. ಪಾಕಿಸ್ತಾನ ಶ್ರೀಲಂಕಾದಲ್ಲಿ 2009, 2012 ಮತ್ತು 2014ರಲ್ಲಿ ಸತತವಾಗಿ ಸೋಲನುಭವಿಸಿತ್ತು. 
 
 ಶ್ರೀಲಂಕಾ ನೆಲದಲ್ಲಿ ಪ್ರವಾಸ ತಂಡವು ನಾಲ್ಕನೇ ಇನ್ನಿಂಗ್ಸ್‌ನಲ್ಲಿ 300 ರನ್ ಗಡಿದಾಟಿದ್ದು ಇದು ನಾಲ್ಕನೇ ಬಾರಿಯಾಗಿದೆ.  ಪಾಕಿಸ್ತಾನದ ಪರ ಶಾನ್ ಮಸೂದ್ 125  ರನ್ ಬಾರಿಸಿದ್ದು, ಯೂನಿಸ್ ಖಾನ್ ಅಜೇಯ 171 ರನ್ ಮತ್ತು ಮಿಶಬ್ ಉಲ್ ಹಕ್ ಅಜೇಯ 59 ರನ್ ಗಳಿಸುವ ಮೂಲಕ ಗೆಲುವಿನ ನಗೆ ಬೀರಿದೆ.

ಮೊದಲ ಇನ್ನಿಂಗ್ಸ್‌ನಲ್ಲಿ ಶ್ರೀಲಂಕಾದ 278 ರನ್ ಸ್ಕೋರಿಗೆ ಉತ್ತರವಾಗಿ ಪಾಕಿಸ್ತಾನ 215 ರನ್ ಮಾತ್ರ ಗಳಿಸಿತ್ತು.  ಶ್ರೀಲಂಕಾ ಎರಡನೇ ಇನ್ನಿಂಗ್ಸ್‌ನಲ್ಲಿ ಮ್ಯಾಥೀವ್ಸ್ ಅವರ 122 ರನ್ ಮತ್ತು ಚಾಂಡಿಮಾಲ್ ಅವರ 67 ರನ್ ನೆರವಿನಿಂದ 313 ರನ್ ಗಳಿಸಿತ್ತು. 
 
 ಈ ಸೋಲಿನ ಬಗ್ಗೆ ಪ್ರತಿಕ್ರಿಯಿಸಿದ ಮ್ಯಾಥೀವ್ಸ್, ಬ್ಯಾಟಿಂಗ್ ದಿಗ್ಗಜರಾದ ಮಹೇಲಾ ಜಯವರ್ದನೆ ಮತ್ತು ಕುಮಾರ್ ಸಂಗಕ್ಕರಾ ಅವರ ಅನುಪಸ್ಥಿತಿಯಿಂದ ಹೊರಬರಲು ನಮ್ಮ ತಂಡ ಇನ್ನೂ ಪ್ರಯತ್ನಿಸುತ್ತಿದೆ ಎಂದು ಹೇಳಿದ್ದಾರೆ. 
 

Share this Story:

Follow Webdunia kannada