Select Your Language

Notifications

webdunia
webdunia
webdunia
webdunia

1987ರ ಮಾದರಿಯಲ್ಲಿ 2019ರ ವಿಶ್ವಕಪ್ ನಡೆಸಬೇಕು: ಕಿರಣ್ ಮೋರೆ

1987ರ ಮಾದರಿಯಲ್ಲಿ 2019ರ ವಿಶ್ವಕಪ್ ನಡೆಸಬೇಕು: ಕಿರಣ್ ಮೋರೆ
ನವದೆಹಲಿ , ಗುರುವಾರ, 2 ಏಪ್ರಿಲ್ 2015 (12:21 IST)
ಮುಂದಿನ ಐಸಿಸಿ ವಿಶ್ವಕಪ್ 2019ರ ಪಂದ್ಯಾವಳಿಯನ್ನು  1987ರ ಮಾದರಿಯಲ್ಲಿ ನಡೆಸಬೇಕೆಂದು  ಭಾರತದ ಮಾಜಿ ವಿಕೆಟ್ ಕೀಪರ್ ಕಿರಣ್ ಮೋರೆ ಬಯಸಿದ್ದಾರೆ. ಈ ಮಾದರಿಯ ಕ್ರಿಕೆಟ್ ಅನ್ನು ಉಪಖಂಡದಲ್ಲಿ ಮೊದಲ ಬಾರಿಗೆ ಆಯೋಜಿಸಲಾಗಿದ್ದು, ಅದರಲ್ಲಿ ಕಿರಣ್ ಮೋರೆ ಟೀಂ ಇಂಡಿಯಾ ಪರ ಆಡಿದ್ದರು. 
 
 ಈಗ ಮುಗಿದ ವಿಶ್ವಕಪ್ ನಿರಾಶಾದಾಯಕ ಪ್ರದರ್ಶನವಾಗಿದೆ. 2 ಅಥವಾ 3 ಪಂದ್ಯಗಳಲ್ಲಿ ನಿಕಟ ಸ್ಪರ್ಧೆಯಿತ್ತು.  ಪ್ರತಿಯೊಬ್ಬರಿಗೂ ಯಾರು ಕ್ವಾರ್ಟರ್ ಫೈನಲ್ ಪ್ರವೇಶಿಸುತ್ತಾರೆಂಬ ಬಗ್ಗೆ  ಮುಂಚಿತವಾಗಿ ತಿಳಿದಿತ್ತು. ಇಂಗ್ಲೆಂಡ್ ತಮ್ಮ ತಪ್ಪಿನಿಂದಾಗಿ ಕ್ವಾರ್ಟರ್ ಫೈನಲ್ ಪ್ರವೇಶಿಸಲಿಲ್ಲ ಎಂದು ವಾಂಖಡೆ ಸ್ಟೇಡಿಯಂನಲ್ಲಿ  ಮುಂಬೈ ಇಂಡಿಯನ್ಸ್ ತಂಡದ ತರಬೇತಿ ಸೆಷನ್ ಬಳಿಕ ಹೇಳಿದರು.
 
 ನಾನು 1987ರ ವಿಶ್ವಕಪ್ ಮಾದರಿಯನ್ನು ಪುನಃ ಅಳವಡಿಸಬೇಕೆಂದು ಬಯಸುತ್ತೇನೆ ಎಂದು ಎರಡು ಗ್ರೂಪ್ ನಡುವೆ ಪಂದ್ಯಗಳನ್ನು ಉಲ್ಲೇಖಿಸಿ ಅವರು ಹೇಳಿದರು. ಪ್ರತಿಯೊಂದು ಪೂಲ್‌ನಲ್ಲಿ ಟಾಪ್ ಎರಡು ತಂಡಗಳು ಸೆಮಿಫೈನಲ್‌ಗೆ ಪ್ರವೇಶಿಸುತ್ತವೆ. ಭಾರತ, ಶ್ರೀಲಂಕಾ ಮತ್ತು ಪಾಕಿಸ್ತಾನ ಆಯೋಜಿಸಿದ್ದ 1987ರ ಪಂದ್ಯಾವಳಿಯಲ್ಲಿ ಇದು ಜಾರಿಯಲ್ಲಿತ್ತು. 
 
 ಮುಂಬೈ  ಇಂಡಿಯನ್ಸ್ ಪರ ವಿಕೆಟ್ ಕೀಪಿಂಗ್ ಕನ್ಸಲ್ಟೆಂಟ್ ಆಗಿರುವ ಮೋರೆ ಬೌಲಿಂಗ್‌ನ ಎರಡೂ ಕಡೆಗಳಿಂದ ಎರಡು ಭಿನ್ನ ಚೆಂಡುಗಳ ಬಳಕೆಯನ್ನು ಮತ್ತು  ನಾನ್ ಪವರ್ ಪ್ಲೇ ಹಂತಗಳಲ್ಲಿ 30 ಯಾರ್ಡ್ ವೃತ್ತದೊಳಗೆ ಐವರು ಫೀಲ್ಡರುಗಳು ಇರಬೇಕೆಂಬ ನಿಯಮವನ್ನು ತೆಗೆಯಬೇಕು ಎಂದು ಹೇಳಿದರು.
 
 ಐವರು ಫೀಲ್ಡರುಗಳ ನಿಯಮ ತೆಗೆಯಬೇಕು ಜೊತೆಗೆ ಎರಡು ಚೆಂಡುಗಳ ಬದಲಿಗೆ ಒಂದು ಚೆಂಡನ್ನು ಬಳಸಬೇಕು. ಹಳೆಯ ನಿಯಮದ ಪ್ರಕಾರ, ಚೆಂಡಿನ ಬದಲಾವಣೆಯು 34 ಓವರುಗಳ ನಂತರ ಆಗುತ್ತದೆ ಎಂದು ಗಮನಸೆಳೆದರು.  ಟಿಟ್ವೆಂಟಿ ಆಟಗಳಲ್ಲಿ ಕೂಡ ಬೌಂಡರಿ ಗೆರೆಯನ್ನು ವಿಕೆಟ್‌ನಿಂದ 72 ಯಾರ್ಡ್‌ಗಿಂತ ಕಡಿಮೆ ದೂರದಲ್ಲಿ ಇರಿಸಬಾರದು ಎಂದು ಕಿರಣ್ ಮೋರೆ ಹೇಳಿದರು. 
 

Share this Story:

Follow Webdunia kannada