Select Your Language

Notifications

webdunia
webdunia
webdunia
webdunia

ಹರ್ಭಜನ್ ಕಮ್‌ಬ್ಯಾಕ್: ಜಿಂಬಾಬ್ವೆಯಲ್ಲಿ ಗಮನಸೆಳೆಯುತ್ತಾರಾ?

ಹರ್ಭಜನ್ ಕಮ್‌ಬ್ಯಾಕ್: ಜಿಂಬಾಬ್ವೆಯಲ್ಲಿ ಗಮನಸೆಳೆಯುತ್ತಾರಾ?
ನವದೆಹಲಿ , ಶುಕ್ರವಾರ, 3 ಜುಲೈ 2015 (17:57 IST)
ಯಶಸ್ಸಿಗೆ ಯಾವುದೇ ರಹಸ್ಯವಿಲ್ಲ ಎನ್ನುವುದು ನಿಜ, ಕಠಿಣ ಶ್ರಮ ಮತ್ತು ದೃಢ ಸಂಕಲ್ಪ ಇವೆರಡು ಅದಕ್ಕೆ ಬೇಕಾದ ಅಗತ್ಯಗಳು. ಕೆಲವು ಬಾರಿ ಅದೃಷ್ಟವೂ ಹಣೆಬರಹ ನಿರ್ಧರಿಸುತ್ತದೆ. ಹರ್ಭಜನ್ ಸಿಂಗ್ ಪ್ರಕರಣದಲ್ಲಿ ಕಳೆದ ಎರಡು ತಿಂಗಳಲ್ಲಿ ಈ ಮೂರರ ಮಿಶ್ರಣದಿಂದ ಭಾರತ ತಂಡದಲ್ಲಿ ಅವಕಾಶ ಲಭಿಸಿದೆ.  ಹಿರಿಯ ಆಫ್‌ಸ್ಪಿನ್ನರ್ ಪುನಃ ಟೀಂ ಇಂಡಿಯಾಗೆ ಮರಳುವ ಅವಕಾಶವೇ ಕೈತಪ್ಪಿದೆ ಎಂದು ಎಲ್ಲರೂ ಭಾವಿಸಿದ್ದಾಗ ಅದೃಷ್ಟದ ಆಟವು ಬೇರೆ ತೆರನಾಗಿತ್ತು.
 
ಸುಮಾರು 2 ವರ್ಷಗಳ ಬಳಿಕ ಭಾರತದ ಜರ್ಸಿ ಧರಿಸಿದ ಹರ್ಭಜನ್ ಬಾಂಗ್ಲಾದೇಶಕ್ಕೆ ಟೆಸ್ಟ್ ತಂಡಕ್ಕೆ ಆಯ್ಕೆಯಾಗಿದ್ದರು. ಆದರೆ ಭಜ್ಜಿಯ ಕಮ್ ಬ್ಯಾಕ್ ಯೋಜನೆಗೆ ಸತತ ಮಳೆ ಕೈಕೊಟ್ಟು ತನ್ನ ಕಠಿಣ ಶ್ರಮದ ಫಲವನ್ನು ತೋರಿಸುವ ಅವಕಾಶವನ್ನು ಕಿತ್ತುಕೊಂಡಿತು. 
 
ಆದರೆ ಅದೃಷ್ಟವು ಹರ್ಭಜನ್ ಅವರಿಗೆ ತಮ್ಮ ವೃತ್ತಿಜೀವನ ಪುನಶ್ಚೇತನಕ್ಕೆ ಇನ್ನೊಂದು ಅವಕಾಶ ನೀಡಿದೆ. ನಾಲ್ಕುವರ್ಷಗಳ ಬಳಿಕ ಏಕದಿನ ಪಂದ್ಯವಾಡುವ ಅವಕಾಶ ಭಜ್ಜಿಗೆ ಸಿಕ್ಕಿದೆ. ಭಜ್ಜಿ 2011ರಲ್ಲಿ ವೆಸ್ಟ್ ಇಂಡೀಸ್ ವಿರುದ್ಧ ಏಕ ದಿನ ಪಂದ್ಯವಾಡಿದ್ದರು. ಈ ನೀಲಿ ಜರ್ಸಿ ಧರಿಸುವುದಕ್ಕೆ ಎಷ್ಟು ಖುಷಿಯಾಗುತ್ತದೆಂದು ವರ್ಣಿಸಲು ಸಾಧ್ಯವಿಲ್ಲ ಎಂದು ಪುಳುಕಿತರಾದ ಹರ್ಭಜನ್ ಹೇಳಿದರು. 
 

Share this Story:

Follow Webdunia kannada