ಭಾರತ-ವಿಂಡೀಸ್ ಏಕದಿನ: ಹೆಟ್ ಮ್ಯಾರ್, ಶೈ ಹೋಪ್ ಅಬ್ಬರದ ಮುಂದೆ ಪಿಚ್ ಲೆಕ್ಕಕ್ಕೇ ಇಲ್ಲ!

Webdunia
ಸೋಮವಾರ, 16 ಡಿಸೆಂಬರ್ 2019 (08:58 IST)
ಚೆನ್ನೈ: ಟೀಂ ಇಂಡಿಯಾ ಆರಂಭಿಕರು ಬ್ಯಾಟಿಂಗ್ ಮಾಡುವಾಗ ಪರದಾಡುವುದನ್ನು ನೋಡಿದಾಗ ದ್ವಿತೀಯ ಇನಿಂಗ್ಸ್ ನಲ್ಲಿ ವೆಸ್ಟ್ ಇಂಡೀಸ್ ಬ್ಯಾಟಿಂಗ್ ಕತೆ ಏನಾಗಬಹುದೋ ಎಂಬ ಆತಂಕ ಕಾಡಿತ್ತು. ಆದರೆ ಶೈ ಹೋಪ್, ಹೆಟ್ ಮ್ಯಾರ್ ಅಬ್ಬರದ ಮುಂದೆ ಪಿಚ್ ಲೆಕ್ಕಕ್ಕೇ ಇರಲಿಲ್ಲ!


ಭಾರತ ಮತ್ತು ವೆಸ್ಟ್ ಇಂಡೀಸ್ ನಡುವಿನ ಮೊದಲ ಏಕದಿನ ಪಂದ್ಯವನ್ನು ವಿಂಡೀಸ್ ಅಧಿಕಾರಯುತವಾಗಿ 8 ವಿಕೆಟ್ ಗಳಿಂದ ಗೆದ್ದುಕೊಂಡಿತು. ಭಾರತ ನೀಡಿದ್ದ 288 ರನ್ ಗಳ ಗುರಿಯನ್ನು ವಿಂಡೀಸ್ 47.5 ಓವರ್ ಗಳಲ್ಲಿ 2 ವಿಕೆಟ್ ನಷ್ಟಕ್ಕೆ 291 ರನ್ ಗಳಿಸಿ ಗುರಿ ಮುಟ್ಟಿತು.

ಟಾಸ್ ಗೆದ್ದು ವಿಂಡೀಸ್ ನಾಯಕ ಮೊದಲು ಫೀಲ್ಡಿಂಗ್ ಆಯ್ದುಕೊಂಡಾಗ ಎಲ್ಲರೂ ಅಚ್ಚರಿಗೊಂಡಿದ್ದರು. ಆದರೆ ಭಾರತದ ಅಗ್ರ ಕ್ರಮಾಂಕದ ಬ್ಯಾಟ್ಸ್ ಮನ್ ಗಳು ರನ್ ಗಳಿಸಲು ಪರದಾಡುವಾಗ ದ್ವಿತೀಯ ಇನಿಂಗ್ಸ್ ನಲ್ಲಿ ಬ್ಯಾಟಿಂಗ್ ಇನ್ನೂ ಕಷ್ಟವಾಗಬಹುದು ಎಂದೇ ಊಹಿಸಿದ್ದರು.

ಆದರೆ ಸುನಿಲ್ ಅಂಬ್ರೋಸ್ ರನ್ನು ಬೇಗನೇ ಕಳೆದುಕೊಂಡ ವಿಂಡೀಸ್ ನಂತರ ತನ್ನ ಗೇರ್ ಬದಲಾಯಿಸಿಕೊಂಡಿತು. ಆರಂಭಿಕ ಶೈ ಹೋಪ್ ಜತೆಗೂಡಿದ ಹೆಟ್ ಮ್ಯಾರ್ 139 ರನ್ ಗಳಿಸಿ ದ್ವಿಶತಕದ ಜತೆಯಾಟವಾಡಿದರು. ಇದರಲ್ಲಿ ಶೈ ಕೊಡುಗೆ 102 ರನ್. ಇವರಿಬ್ಬರ ಅಬ್ಬರದ ಬ್ಯಾಟಿಂಗ್ ಮುಂದೆ ಪಿಚ್ ಕೂಡಾ ಫ್ಲ್ಯಾಟ್ ಆಗಿತ್ತು! ಅಂತಿಮವಾಗಿ ಹೆಟ್ ಮ್ಯಾರ್ ಔಟಾದರೂ ಅಷ್ಟರಲ್ಲಿ ಭಾರತ ಸೋಲಿನ ಸುಳಿಗೆ ಸಿಲುಕಿತ್ತು. ಭಾರತದ ಪರ ಮೊಹಮ್ಮದ್ ಶಮಿ ಮತ್ತು ದೀಪಕ್ ಚಹರ್ ತಲಾ 1 ವಿಕೆಟ್ ಕಬಳಿಸಿದರು.

ಸಂಬಂಧಿಸಿದ ಸುದ್ದಿ

ಎಲ್ಲವನ್ನೂ ನೋಡು

ಓದಲೇಬೇಕು

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಎಲ್ಲವನ್ನೂ ನೋಡು

ಸುದ್ದಿ ಜಗತ್ತು

IND vs ENG: ಟೀಂ ಇಂಡಿಯಾ ವಿರುದ್ಧ ಟಾಸ್ ಗೆದ್ದ ಇಂಗ್ಲೆಂಡ್, ಕೆಎಲ್ ರಾಹುಲ್ ಗೈರು

ಮೂರನೇ ವಿಶ್ವಕಪ್‌ ಕಿರೀಟದ ಕನಸಿನಲ್ಲಿದ್ದ ಫ್ರಾನ್ಸ್‌ಗೆ ನಿರಾಸೆ: ಫೈನಲ್‌ಗೆ ಲಗ್ಗೆ ಹಾಕಿದ ಸ್ಪೇನ್‌

ಇಂವ ಹಿಂಗೇ ಗುರೂ.. ದಿನೇಶ್ ಕಾರ್ತಿಕ್ ಗೆ ಮೈದಾನದಲ್ಲೇ ಕಿಕ್ ಮಾಡಿದ ರೋಹಿತ್ ಶರ್ಮಾ Video

IND VS END ODI: ಗಿಲ್‌ ಅಬ್ಬರ, ಅಕ್ಷರ್‌ ಆಲ್‌ರೌಂಡ್‌ ಆಟ: ಇಂಗ್ಲೆಂಡ್‌ ನೆಲದಲ್ಲಿ ಕೊನೆಗೂ ಗೆಲುವಿನ ಖಾತೆ ತೆರೆದ ಭಾರತ

ಎಡ್ಜ್‌ಬಾಸ್ಟನ್‌ನಲ್ಲಿ ಏಕದಿನ ಪಂದ್ಯದ ವೇಳೆ ಹೃದಯಸ್ಪರ್ಶಿ ಸನ್ನೆಯಿಂದ ಎಲ್ಲರ ಹೃದಯ ಗೆದ್ದ ಎಂಎಸ್ ಧೋನಿ

ಮುಂದಿನ ಸುದ್ದಿ
Show comments