Webdunia - Bharat's app for daily news and videos

Install App

ಮಿಸ್ಬಾ-ಉಲ್-ಹಕ್ ಲಾರ್ಡ್ಸ್‌ ಮೈದಾನದಲ್ಲಿ 10 ಪುಶ್‌ಅಪ್ ಮಾಡಿದ್ದೇಕೆ?

Webdunia
ಶುಕ್ರವಾರ, 15 ಜುಲೈ 2016 (19:10 IST)
ಹಿರಿಯ ಬ್ಯಾಟ್ಸ್‌ಮನ್ ಮಿಸ್ಬಾ ಉಲ್ ಹಕ್ ಗುರುವಾರ ಲಾರ್ಡ್ಸ್‌ ಮೈದಾನದಲ್ಲಿ ಅಜೇಯ ಶತಕದೊಂದಿಗೆ ಶ್ರೇಷ್ಟ ಪ್ರದರ್ಶನ ನೀಡಿದ್ದಾರೆ. ಪಾಕಿಸ್ತಾನದ ನಾಯಕ 179 ಎಸೆತಗಳಲ್ಲಿ 110 ರನ್ ಗಳಿಸಿದ್ದು, ಅವರ ಇನ್ನಿಂಗ್ಸ್‌ನಲ್ಲಿ 18 ಬೌಂಡರಿಗಳಿದ್ದವು. ಮೂರಂಕಿಯ ಗಡಿಯನ್ನು ದಾಟಿದ ಕೂಡಲೇ ವಿಶಿಷ್ಠ ರೀತಿಯಲ್ಲಿ ಮಿಸ್ಬಾ ಸಂಭ್ರಮಾಚರಣೆ ಮಾಡಿದರು.

 ಪ್ರೇಕ್ಷಕರ ಕರತಾಡನವನ್ನು ಸ್ವೀಕರಿಸುವ ಮುಂಚೆ, ಮಿಸ್ಬಾ ಸೆಲ್ಯೂಟ್ ಮಾಡಿ ಬಳಿಕ ಹತ್ತು ಪುಷ್‌ಅಪ್‌ಗಳನ್ನು ಮಾಡಿದರು. ಈ ಪ್ರವಾಸಕ್ಕೆ ಮುಂಚೆ ಸಿದ್ದತಾ ಶಿಬಿರದ ಸಂದರ್ಭದಲ್ಲಿ ಪಾಕಿಸ್ತಾನ ತಂಡಕ್ಕೆ ನೆರವಾದ ಪಾಕಿಸ್ತಾನಿ ಸೇನಾಧಿಕಾರಿಗಳಿಗೆ ಗೌರವ ಸಲ್ಲಿಸಲು ತಾವು ಪುಷ್ ಅಪ್ ಮಾಡಿದ್ದಾಗಿ ಅವರು ನಂತರ ಬಹಿರಂಗಮಾಡಿದರು.
 
 ಗೌರವ ಸಂಹಿತೆಯ ಭಾಗವಾಗಿ ನೆಲದಲ್ಲಿ 10 ಪುಷ್ ಅಪ್‌ಗಳನ್ನು ಮಾಡುತ್ತಿದ್ದೆವು. ನಾನು ಶತಕ ಗಳಿಸಿದರೆ ನಾವು ಅಲ್ಲಿದ್ದೆವು ಎನ್ನುವುದನ್ನು ನೆನಪಿಸಲು ಪುಷ್ ಅಪ್ ಮಾಡುವುದಾಗಿ  ಭರವಸೆ ನೀಡಿದ್ದೆ. ಸೆಲ್ಯೂಟ್ ಮಾಡಿದ್ದು ರಾಷ್ಟ್ರಧ್ವಜಕ್ಕೆ ಎಂದೂಮಿಸ್ಬಾ ಹೇಳಿದರು.  ಮಿಸ್ಬಾ ಮತ್ತು ಅವರ ತಂಡದ ಆಟಗಾರರು ಅಬೋಟಾಬಾದ್ ಸೇನಾ ಬೂಟ್ ಕ್ಯಾಂಪ್‌ನಲ್ಲಿ ಎರಡು ವಾರಗಳ ಕಾಲವಿದ್ದರು. ಯುವ ಆಟಗಾರರು ಅವರಿಗೆ ನಿಯೋಜಿಸಿದ ಕೆಲಸಗಳನ್ನು ಮಾಡಲು ತಿಣುಕಾಡಿದರೆ ಮಿಸ್ಬಾ ಮತ್ತು ಯೂನಿಸ್ ಖಾನ್ ಲೀಲಾಜಾಲವಾಗಿ ಪೂರೈಸಿ ಫಿಟ್ ಆಟಗಾರರೆನಿಸಿದ್ದರು.
ಎಲ್ಲವನ್ನೂ ನೋಡು

ಓದಲೇಬೇಕು

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಎಲ್ಲವನ್ನೂ ನೋಡು

ಸುದ್ದಿ ಜಗತ್ತು

ಇಂಗ್ಲೆಂಡ್ ವಿರುದ್ಧ ಐದನೇ ಟೆಸ್ಟ್ ಪಂದ್ಯಕ್ಕೆ ಟೀಂ ಇಂಡಿಯಾ ವಿಕೆಟ್ ಕೀಪರ್ ಯಾರು

ಮಹಿಳಾ ಚೆಸ್ ವಿಶ್ವ ಕಪ್ ಗೆದ್ದು ಚಾರಿತ್ರಿಕ ಸಾಧನೆ ಮೆರೆದ ಭಾರತದ ದಿವ್ಯಾ ದೇಶ್‌ಮುಖ್‌

ರಿಷಭ್ ಪಂತ್ ಎದೆಗಾರಿಕೆ, ವ್ಯಕ್ತಿತ್ವ ಮುಂದಿನ ಪೀಳಿಗೆಗೂ ಸ್ಫೂರ್ತಿ: ಗೌತಮ್ ಗಂಭೀರ್ ಬಿಚ್ಚುಮಾತು

ನಿಮ್ಗೆ ಸ್ವಿಂಗ್ ಆಡುವ ಯೋಗ್ಯತೆ ಇಲ್ಲ ಎಂದ ಹ್ಯಾರಿ ಬ್ರೂಕ್ ಗೆ ಕೆಎಲ್ ರಾಹುಲ್ ಉತ್ತರ ಏನಿತ್ತು ಗೊತ್ತಾ

Video: ಡ್ರಾ ಮಾಡಿಕೊಳ್ಳೋಣ್ವಾ ಎಂದರೆ ತಡಿ ಸೆಂಚುರಿ ಮಾಡ್ತೀನಿ ಎಂದ ರವೀಂದ್ರ ಜಡೇಜಾ

ಮುಂದಿನ ಸುದ್ದಿ
Show comments