Select Your Language

Notifications

webdunia
webdunia
webdunia
webdunia

ಸ್ಥಳೀಯ ಟಿ 20 ಲೀಗ್‌ಗಳು ಯಾಕೆ ಮುಖ್ಯವಾಗಿವೆ?

ಸ್ಥಳೀಯ ಟಿ 20 ಲೀಗ್‌ಗಳು ಯಾಕೆ ಮುಖ್ಯವಾಗಿವೆ?
ಬೆಂಗಳೂರು , ಶನಿವಾರ, 26 ಸೆಪ್ಟಂಬರ್ 2015 (14:26 IST)
ಇಂಡಿಯನ್ ಪ್ರೀಮಿಯರ್ ಲೀಗ್ ಅನೇಕ ರಾಜ್ಯ ಕ್ರಿಕೆಟ್ ಸಂಸ್ಥೆಗಳಿಗೆ ತಮ್ಮದೇ ಟಿ20 ಪಂದ್ಯಾವಳಿಗಳನ್ನು ಆಯೋಜಿಸಲು ಸ್ಫೂರ್ತಿ ನೀಡಿತು. ಕರ್ನಾಟಕ ಪ್ರೀಮಿಯರ್ ಲೀಗ್ ಮುಂತಾದ ಸ್ಥಳೀಯ ಟಿ 20 ಪಂದ್ಯಾವಳಿಗಳು ಯುವ ಕ್ರಿಕೆಟಿಗರಿಗೆ ಭವಿಷ್ಯದ  ಭರವಸೆಯ ಮೆಟ್ಟಿಲನ್ನು ಒದಗಿಸಿದೆ. ತಮ್ಮ ರಾಷ್ಟ್ರೀಯ ತಂಡ ಹೀರೊಗಳ ಜತೆ ಕಲೆಯುವ ಅವಕಾಶವಲ್ಲದೇ ಆಯ್ಕೆದಾರರ ಎದುರು ತಮ್ಮ ಕೌಶಲ್ಯಗಳ ಪ್ರದರ್ಶನಕ್ಕೆ ರಾಜ್ಯ ಮಟ್ಟದ ಲೀಗ್‌ಗಳು ವೇದಿಕೆಯಾಗಿ ಪರಿಣಮಿಸಿದೆ.
 
ಕೆಸಿ ಕಾರ್ಯಪ್ಪಾ ಅವರನ್ನು ನಿದರ್ಶನವಾಗಿ ತೆಗೆದುಕೊಂಡರೆ, ಕರ್ನಾಟಕ ಪ್ರೀಮಿಯರ್ ಲೀಗ್‌ನಲ್ಲಿ ಕೇವಲ ಒಂದು ಸೀಸನ್ ಬಳಿಕ ಲೆಗ್ ಸ್ಪಿನ್ನರ್‌ನನ್ನು ಕೊಲ್ಕತಾ ನೈಟ್ ರೈಡರ್ಸ್ ಐಪಿಎಲ್ ತಂಡವು ಕಳೆದ ವರ್ಷ 2.4 ಕೋಟಿ ರೂ.ಗೆ ಖರೀದಿಸಿದೆ. ಅವರ ಮೂಲದರ ಕೇವಲ 10 ಲಕ್ಷ ರೂ.ಗಳಾಗಿತ್ತು.  ಕೆಪಿಎಲ್‌ನಲ್ಲಿ ದೊಡ್ಡ ಹೆಸರಾಗಿರುವ ರಾಬಿನ್ ಉತ್ತಪ್ಪಾ ವಿಶ್ವಕಪ್ ಗೆಲುವಿನ ಭಾರತ ತಂಡದ ಅವಿಭಾಜ್ಯ ಭಾಗವಾಗಿದ್ದು, ಕೆಪಿಎಲ್ ಕಾರ್ಯವೈಖರಿಯನ್ನು ಮನಸಾರೆ ಶ್ಲಾಘಿಸಿದ್ದಾರೆ. ಆಟಗಾರರಿಗೆ ಏನು ಬೇಕೆಂದು ಅವರಿಗೆ ಚೆನ್ನಾಗಿ ಅರಿವಿದೆ ಎಂದು ಹೇಳಿದ್ದಾರೆ.
 
ಮಾಜಿ ಕ್ರಿಕೆಟರ್‌ಗಳಾದ ಸುನಿಲ್ ಜೋಷಿ ಮತ್ತು ಡೇವಿಡ್ ಜಾನ್ಸನ್ ಅವರು ನಿವೃತ್ತಿಯಿಂದ ಹೊರಬರಲು ಲೀಗ್ ನೆರವಾಗಿದೆ. ಕನ್ನಡ ಮೂವಿ ಸ್ಟಾರ್ ಕಿಚ್ಚ ಸುದೀಪ್ ಜೋಷಿ , ವೆಂಕಟೇಶ್ ಪ್ರಸಾದ್, ಡೇವಿಡ್ ಜಾನ್ಸನ್ ಮನವೊಲಿಸಿ ನಿವೃತ್ತಿಯಿಂದ ಹೊರಬರುವಂತೆ ಮಾಡಿದ್ದಾರೆ. ಕರ್ನಾಟಕದ ಯುವ ಮತ್ತು ಪ್ರತಿಭಾಶಾಲಿ ಆಟಗಾರರ ಜತೆ ಸ್ಪರ್ಧಿಸುವುದು ಸವಾಲಿನ ಕೆಲಸವಾಗಿದೆ ಎಂದು ಜೋಷಿ ಈ ಕುರಿತು ಪ್ರತಿಕ್ರಿಯಿಸಿದ್ದಾರೆ. 
 
ಯುವ ಆಟಗಾರರು ಮತ್ತು ಅನುಭವಿ ಆಟಗಾರರ ಸಂಗಮವಾದ ಕೆಪಿಎಲ್ ಟಿವಿ ವೀಕ್ಷಕರಿಗೆ ಆಕರ್ಷಕವಾಗಿದೆ. ಕೆಪಿಎಲ್ 14. 5 ದಶಲಕ್ಷ ವೀಕ್ಷಕರನ್ನು ಮುಟ್ಟಿದ್ದು, ಕರ್ನಾಟಕದಲ್ಲಿ ಅಪರಿಚಿತ ಮುಖಗಳು ಈಗ ಮನೆ ಮಾತಾಗಿದ್ದಾರೆ. 

Share this Story:

Follow Webdunia kannada