Select Your Language

Notifications

webdunia
webdunia
webdunia
webdunia

ಎಲ್ಲಾ ಮೂರು ಸ್ವರೂಪದ ಕ್ರಿಕೆಟ್‌ನಲ್ಲಿ ಆಡುವಾಸೆ: ಮುರಳಿ ವಿಜಯ್

ಎಲ್ಲಾ ಮೂರು ಸ್ವರೂಪದ ಕ್ರಿಕೆಟ್‌ನಲ್ಲಿ  ಆಡುವಾಸೆ: ಮುರಳಿ ವಿಜಯ್
ನವದೆಹಲಿ , ಮಂಗಳವಾರ, 7 ಜುಲೈ 2015 (18:48 IST)
ಸುಮಾರು ಎರಡು ಸೀಸನ್‌ಗಳ ಅಂತರದ ಬ್ರೇಕ್ ಪಡೆದು ಜಿಂಬಾಬ್ವೆ ವಿರುದ್ಧ ಏಕದಿನ ಪಂದ್ಯಗಳಲ್ಲಿ ಆಡಲು ಹಿಂತಿರುಗಿರುವ ಭಾರತದ ಟೆಸ್ಟ್ ಆರಂಭಿಕ ಆಟಗಾರ ಮುರಳಿ ವಿಜಯ್ ಅದರ ಪೂರ್ಣ ಪ್ರಯೋಜನ ಪಡೆಯಲು ನಿರ್ಧರಿಸಿದ್ದಾರೆ.
 
ನಾನು ಏಕ ದಿನ ಪಂದ್ಯಗಳನ್ನು ಆಡಲು ಇಷ್ಟಪಡುತ್ತೇನೆ. ಈ ಸರಣಿಯಲ್ಲಿ ಉತ್ತಮ ಆಟವನ್ನು ನಿರೀಕ್ಷಿಸಿದ್ದೇನೆ ಎಂದು ವಿಜಯ್,  ಭಾರತ ಜಿಂಬಾಬ್ವೆಗೆ ನಿರ್ಗಮಿಸುವ ಮುನ್ನ ಮಾಧ್ಯಮಕ್ಕೆ ತಿಳಿಸಿದರು. 
 
ತನಗೆ ಏಕದಿನ  ಪಂದ್ಯಗಳಲ್ಲಿ ಉತ್ತಮ ಅವಕಾಶ ಸಿಗಲಿಲ್ಲ ಎಂದು ವಿಜಯ್ ಹೇಳುತ್ತಾ ಅದಕ್ಕಾಗಿ ತಾವು ಯಾರನ್ನೂ ದೂಷಿಸುವುದಿಲ್ಲ ಎಂದರು.  ನಾನು ಏಳು ಸೀಸನ್‌ಗಳಿಂದ ಕೇವಲ 14 ಏಕದಿನ ಆಡಿದ್ದೇನೆ. ಇದಕ್ಕಾಗಿ ಯಾರನ್ನೂ ನಿಂದಿಸುವುದಿಲ್ಲ. ಆದರೆ ಒಂದು ನಿರ್ದಿಷ್ಟ ಪಾತ್ರವಿಲ್ಲದಿದ್ದರೆ ಕಷ್ಟವಾಗುತ್ತದೆ ಎಂದು ಹೇಳಿದರು.

ತಾವು ಎಲ್ಲಾ ಮೂರು ಮಾದರಿಯ ಆಟಗಳಲ್ಲಿ ಚೆನ್ನಾಗಿ ಆಡಲು ಬಯಸುವುದಾಗಿ ವಿಜಯ್ ಹೇಳಿದರು. ರಾಜ್ಯಕ್ಕೆ ಉತ್ತಮ ಏಕ ದಿನ ಪಂದ್ಯದ ಆಟಗಾರನಾಗಿದ್ದೆ. ಬಳಿಕ ಟೆಸ್ಟ್‌ಗಳಲ್ಲಿ ಆಡುವ ಅವಕಾಶ ಸಿಕ್ಕಿತು ಎಂದು ವಿಜಯ್ ಹೇಳಿದರು.

Share this Story:

Follow Webdunia kannada