Select Your Language

Notifications

webdunia
webdunia
webdunia
webdunia

ಯುವ ಟೀಂ ಇಂಡಿಯಾ ಸಾಧನೆಯನ್ನು ಶ್ಲಾಘಿಸಿದ ವಿರಾಟ್ ಕೊಹ್ಲಿ

ಯುವ ಟೀಂ ಇಂಡಿಯಾ ಸಾಧನೆಯನ್ನು ಶ್ಲಾಘಿಸಿದ ವಿರಾಟ್ ಕೊಹ್ಲಿ
ಕೊಲಂಬೊ , ಮಂಗಳವಾರ, 1 ಸೆಪ್ಟಂಬರ್ 2015 (17:38 IST)
ಭಾರತ 22 ವರ್ಷಗಳ ಬಳಿಕ ಶ್ರೀಲಂಕಾ ನೆಲದಲ್ಲಿ ಮೊದಲ ಟೆಸ್ಟ್ ಸರಣಿ ಜಯಗಳಿಸಿದ ಬಳಿಕ, ನಾಯಕ ವಿರಾಟ್ ಕೊಹ್ಲಿ ತನ್ನ ಯುವ ತಂಡದ ಬಗ್ಗೆ ಹೆಮ್ಮೆ ವ್ಯಕ್ತಪಡಿಸಿದರು. ಮೂರನೇ ಮತ್ತು ಅಂತಿಮ ಟೆಸ್ಟ್‌ನಲ್ಲಿ ಪ್ರವಾಸಿಗಳು ಲಂಕನ್ನರನ್ನು 117 ರನ್‌ಗಳಿಂದ ಸೋಲಿಸಿ ಸರಣಿಯನ್ನು 2-1ರಿಂದ ಗೆದ್ದರು.  ಮೊದಲ ಟೆಸ್ಟ್‌ನಲ್ಲಿ ಮೇಲುಗೈ ಸಾಧಿಸಿದ್ದರೂ ಭಾರತ ಗಾಲೆಯಲ್ಲಿ ಹೃದಯಬಿರಿಯುವ ಸೋಲನ್ನು ಅನುಭವಿಸಿತ್ತು. ಆದರೂ ಆಕ್ರಮಣಕಾರಿ ಆಟದ ತಮ್ಮ ನಿಲುವಿಗೆ ಅಂಟಿಕೊಳ್ಳಲು ಕೊಹ್ಲಿ ಮತ್ತು ನಿರ್ದೇಶಕ ರವಿ ಶಾಸ್ತ್ರಿ ನಿರ್ಧರಿಸಿದ್ದರು. 
 
ಮಂಗಳವಾರ ಸಂಜೆ 1993ರಲ್ಲಿ ಟೆಸ್ಟ್ ಸರಣಿ ಗೆದ್ದ ಬಳಿಕ ಕೊಹ್ಲಿ ಶ್ರೀಲಂಕಾ ನೆಲದಲ್ಲಿ ಸರಣಿ ಗೆದ್ದ ಮೊದಲ ನಾಯಕರೆನಿಸಿದರು. ಬೌಲರುಗಳ ಶ್ರೇಷ್ಟ ಮಟ್ಟದ ಬೌಲಿಂಗ್ ಸಾಧನೆಯನ್ನು ಅವರು ಶ್ಲಾಘಿಸಿದರು. ವಿಶೇಷವಾಗಿ ಇಶಾಂತ್ ಶರ್ಮಾ ಅವರ ಮಾರಕ ದಾಳಿಯನ್ನು ಹೊಗಳಿದರು. ಶ್ರೀಲಂಕನ್ನರು ಇಶಾಂತ್ ಅವರಿಗೆ ತಪ್ಪು ಕಾಲದಲ್ಲಿ ಕೋಪಬರಿಸಿದ್ದು ನಮಗೆ ಅನುಕೂಲವಾಯಿತು ಎಂದು ಕೊಹ್ಲಿ ಮಾರ್ಮಿಕವಾಗಿ ಹೇಳಿದರು.
 
 0-1ರಿಂದ ಹಿನ್ನಡೆ ಅನುಭವಿಸಿ ಮತ್ತೆ ಪುಟಿದೇಳುವುದು  ಅಷ್ಟು ಸುಲಭವಲ್ಲ. ನಮ್ಮ ವೃತ್ತಿಜೀವನದ ಆರಂಭದಲ್ಲೇ ಭವ್ಯ ಮೈಲಿಗಲ್ಲು ಸಾಧಿಸಿರುವುದು ಖುಷಿ ನೀಡುತ್ತದೆ ಎಂದು ಕೊಹ್ಲಿ ಹೇಳಿದರು.  ಏತನ್ಮಧ್ಯೆ, ಶ್ರೀಲಂಕಾ ನಾಯಕ ಮ್ಯಾಥೀವ್ಸ್ ಬೌಲರುಗಳ ಉತ್ತಮ ಪ್ರದರ್ಶನದ ನಡುವೆ ಬ್ಯಾಟಿಂಗ್ ವೈಫಲ್ಯದಿಂದ ನಿರಾಶರಾದರು.
ಮ್ಯಾಥೀವ್ಸ್ ಸರಣಿಯಲ್ಲಿ ಅತ್ಯಧಿಕ ಸ್ಕೋರರ್ ಆಗಿದ್ದು, 339 ರನ್‌ಗಳಲ್ಲಿ 2 ಶತಕಗಳನ್ನು ಬಾರಿಸಿದ್ದಾರೆ. 

Share this Story:

Follow Webdunia kannada