Select Your Language

Notifications

webdunia
webdunia
webdunia
webdunia

ಅನುಷ್ಕಾ ಜತೆ ಸ್ವದೇಶಕ್ಕೆ ಮರಳಿದ ವಿರಾಟ್

ಅನುಷ್ಕಾ ಜತೆ ಸ್ವದೇಶಕ್ಕೆ ಮರಳಿದ ವಿರಾಟ್
ನವದೆಹಲಿ , ಶನಿವಾರ, 28 ಮಾರ್ಚ್ 2015 (12:46 IST)
ಭಾರತ ಕ್ರಿಕೆಟ್ ತಂಡದ ಉಪನಾಯಕ ವಿರಾಟ್ ಕೊಹ್ಲಿ ತಮ್ಮ ಪ್ರಿಯತಮೆ ಅನುಷ್ಕಾ ಶರ್ಮಾ ಜತೆಗೂಡಿ ಸ್ವದೇಶಕ್ಕೆ ಮರಳಿದ್ದಾರೆ. 

 
ಶುಕ್ರವಾರ ತಡ ರಾತ್ರಿ ಇಬ್ಬರು ಮುಂಬೈ ವಿಮಾನ ನಿಲ್ದಾಣಕ್ಕೆ ಬಂದಿಳಿದರು. ಕೈ ಕೈ ಹಿಡಿದುಕೊಂಡು ಇಬ್ಬರು ಒಂದೇ ಗಾಡಿಯಲ್ಲಿ ಕುಳಿತು ಮನೆಗೆ ಮರಳಿದ್ದಾರೆ ಎಂದು ತಿಳಿದು ಬಂದಿದೆ. 
 
ಅನುಷ್ಕಾ ಸೆಮಿಫೈನಲ್ ಪಂದ್ಯವನ್ನು ವೀಕ್ಷಿಸಲು ಸಿಡ್ನಿಗೆ ತೆರಳಿದ್ದರು. ಆದರೆ ಸೆಮಿಫೈನಲ್ ಪಂದ್ಯದಲ್ಲಿ ಆಸ್ಟ್ರೇಲಿಯಾ ವಿರುದ್ಧ ಹೀನಾಯ ಸೋಲನ್ನು ಅನುಭವಿಸಿದ ಭಾರತ ಮೂರನೇ ಬಾರಿ ವಿಶ್ವಕಪ್‌ ಎತ್ತಿ ಹಿಡಿಯುವುದನ್ನು ತಪ್ಪಿಸಿಕೊಂಡಿತ್ತು.
 
ಈ ಸೋಲಿನ ನಂತರ ಸಾಮಾಜಿಕ ಮಾಧ್ಯಮಗಳಲ್ಲಿ ಅನುಷ್ಕಾ ಮತ್ತು ವಿರಾಟ್ ಬಗ್ಗೆ ಹಾಸ್ಯ ಮಿಶ್ರಿತ ಟೀಕೆಗಳು ಪ್ರಾರಂಭವಾಗಿದ್ದವು. ಅನುಷ್ಕಾರವರಿಂದಲೇ ವಿರಾಟ್ ಆಟವಾಡದೇ ಬೇಗನೆ ಮರಳಿದರು. ಭಾರತ ತಂಡದ ಸೋಲಿಗೆ ಅನುಷ್ಕಾರವರೇ ಕಾರಣ ಎಂಬುದಾಗಿ ಸಾವಿರಾರು ಸಂದೇಶಗಳು ಹರಿದಾಡ ತೊಡಗಿದವು. ಈ ಹಿನ್ನೆಲೆಯಲ್ಲಿ ಅನುಷ್ಕಾ ಬೆನ್ನಿಗೆ ನಿಂತ ಬಾಲಿವುಡ್ ಭಾರತದ ಸೋಲಿಗೆ ಅನುಷ್ಕಾರವರನ್ನು ದೂಷಿಸುವುದನ್ನು ತಕ್ಷಣಕ್ಕೆ ನಿಲ್ಲಿಸಿ ಎಂದು ಹೇಳಿತ್ತು. 

Share this Story:

Follow Webdunia kannada