Select Your Language

Notifications

webdunia
webdunia
webdunia
webdunia

ಪಾಕಿಸ್ತಾನ ಮಹಿಳಾ ಕ್ರಿಕೆಟ್ ತಂಡದ ಆಟಗಾರ್ತಿ ವಿರಾಟ್ ಕೊಹ್ಲಿ ಫ್ಯಾನ್

ಪಾಕಿಸ್ತಾನ ಮಹಿಳಾ ಕ್ರಿಕೆಟ್ ತಂಡದ ಆಟಗಾರ್ತಿ ವಿರಾಟ್ ಕೊಹ್ಲಿ ಫ್ಯಾನ್
ಕರಾಚಿ , ಗುರುವಾರ, 8 ಅಕ್ಟೋಬರ್ 2015 (17:00 IST)
ಟೀಂ ಇಂಡಿಯಾದ ವಿರಾಟ್ ಕೊಹ್ಲಿಯ ನೋಟಕ್ಕೆ ಸೋಲದೇ ಅವರ ಕ್ರಿಕೆಟ್ ಆಡುವ ಶೈಲಿಗೆ ಪಾಕಿಸ್ತಾನ ಬ್ಯಾಟ್ಸ್‌ಮನ್ ಬಿಸ್ಮಾ ಮರೂಫ್ ಮನಸೋತು ಅವರ ಅಭಿಮಾನಿಯಾಗಿದ್ದು, ಭಾರತದ ಟೆಸ್ಟ್ ನಾಯಕನ ಆಟವನ್ನು ಮಾದರಿಯನ್ನು ಅನುಕರಿಸಲು ಬಯಸಿದ್ದಾರೆ.
 
24 ವರ್ಷದ ಮರೂಫ್ ಇತ್ತೀಚಿನ ಟಿ20 ಮತ್ತು ಏಕ ದಿನ ಸರಣಿಗಳಲ್ಲಿ ಬಾಂಗ್ಲಾದೇಶದ ವಿರುದ್ಧ ಜಯದಲ್ಲಿ ಪ್ರಮುಖ ಪಾತ್ರ ವಹಿಸಿದ್ದರು.  ಸುಮಾರು ಒಂದು ದಶಕದ ನಂತರ ಪಾಕಿಸ್ತಾನಕ್ಕೆ ಮಹಿಳಾ ಕ್ರಿಕೆಟ್ ಯಶಸ್ವಿ ವಾಪಸಾತಿಯ ಗುರುತು ಇದಾಗಿತ್ತು.
 
ಡಾನ್. ಕಾಂಗೆ ನೀಡಿದ ಸಂದರ್ಶನದಲ್ಲಿ ಮಾತನಾಡುತ್ತಿದ್ದ ಮರೂಫ್, ಕೊಹ್ಲಿ, ಸುರೇಶ್ ರೈನಾ ಮತ್ತು ಆಸ್ಟ್ರೇಲಿಯಾ ನಾಯಕ ಮೈಕೇಲ್ ಕ್ಲಾರ್ಕ್ ಅವರ ಬ್ಯಾಟಿಂಗ್ ಶೈಲಿಯನ್ನು  ವೀಕ್ಷಿಸುವ ಮೂಲಕ  ಶಾಟ್ ಆಯ್ಕೆಯನ್ನು  ಮತ್ತು ಇನ್ನಿಂಗ್ಸ್ ಕಟ್ಟುವ ಕಲೆಯನ್ನು ಸುಧಾರಿಸಿಕೊಂಡಿದ್ದಾಗಿ ಹೇಳಿದರು. 
 
ನನ್ನ ಬ್ಯಾಟಿಂಗ್ ಶೈಲಿ ಸ್ವಾಭಾವಿಕವಾಗಿದ್ದು, ಬಲಗೈ ಆಟಗಾರರಿಂದ ನಾನು  ಪ್ರೇರೇಪಿತನಾಗಿದ್ದೇನೆ. ನಾನು ಮೈಕೇಲ್ ಕ್ಲಾರ್ಕ್ ಅವರ ಭಾರೀ ಅಭಿಮಾನಿಯಾಗಿದ್ದು, ಸುರೇಶ್  ರೈನಾ ಮತ್ತು ವಿರಾಟ್ ಕೊಹ್ಲಿ ಬ್ಯಾಟಿಂಗ್ ವೀಕ್ಷಿಸಿ  ಶಾಟ್ ಆಯ್ಕೆಯನ್ನು ಮತ್ತು ಇನ್ನಿಂಗ್ಸ್ ಕಟ್ಟುವುದನ್ನು ಕಲಿತಿದ್ದಾಗಿ ಹೇಳಿದ್ದಾರೆ. 
 
 ಕರಾಚಿಯಲ್ಲಿ ಬಾಂಗ್ಲಾ ವಿರುದ್ಧ ಎಡಗೈ ಆಟಗಾರ್ತಿ ಮರೂಫ್ ಟಿ20 ಮತ್ತು ಏಕದಿನ ಪಂದ್ಯಗಳಲ್ಲಿ 109 ಮತ್ತು 133 ರನ್ ಬಾರಿಸಿದ್ದರು. 2010 ಏಷ್ಯನ್ ಕ್ರೀಡಾಕೂಟದ ಚಿನ್ನದ ಪದಕ ವಿಜೇತ ತಂಡದ ಆಟಗಾರ್ತಿಯಾಗಿರುವ ಮರೂಫ್ ಸ್ವದೇಶದಲ್ಲಿ ಆಡುವುದು ತುಂಬಾ ಸಂತೋಷ ಉಂಟುಮಾಡುತ್ತದೆ ಎಂದು ಹೇಳಿದರು. 
 

Share this Story:

Follow Webdunia kannada