Select Your Language

Notifications

webdunia
webdunia
webdunia
webdunia

ವಿರಾಟ್ ಕೊಹ್ಲಿ ಕಳಪೆ ಆಟ: ಭಾರತ ''ಎ'' ಕೇವಲ 135ಕ್ಕೆ ಆಲೌಟ್

ವಿರಾಟ್ ಕೊಹ್ಲಿ ಕಳಪೆ ಆಟ: ಭಾರತ ''ಎ'' ಕೇವಲ 135ಕ್ಕೆ ಆಲೌಟ್
ಚೆನ್ನೈ , ಗುರುವಾರ, 30 ಜುಲೈ 2015 (13:48 IST)
ಭಾರತ  ಟೆಸ್ಟ್ ತಂಡದ  ನಾಯಕ ವಿರಾಟ್ ಕೊಹ್ಲಿಯ ಕಳಪೆ ಫಾರಂ ಆಸ್ಟ್ರೇಲಿಯಾ ಎ ವಿರುದ್ಧ ಪಂದ್ಯದಲ್ಲೂ ಮುಂದುವರಿದು ಆತಿಥೇಯರು ಕೇವಲ 135ರನ್‌ಗೆ ಎಲ್ಲಾ ವಿಕೆಟ್ ಕಳೆದುಕೊಂಡಿದೆ. ಆಸ್ಟ್ರೇಲಿಯಾ ಎ ವಿರುದ್ಧ ಎರಡನೇ ಅನಧಿಕೃತ ಟೆಸ್ಟ್ ಪಂದ್ಯದಲ್ಲಿ ಬ್ಯಾಟಿಂಗ್ ಅಭ್ಯಾಸ ಮಾಡುವುದಕ್ಕಾಗಿ ಆಡಿದ್ದ ವಿರಾಟ್ ಕೊಹ್ಲಿ  42 ಎಸೆತಗಳನ್ನು ಆಡಿ 16 ರನ್ ಮಾಡುವ ಮೂಲಕ ಅಭಿಮಾನಿಗಳನ್ನು ನಿರಾಶೆಗೊಳಿಸಿದರು.

 ಭಾರತ ಎ ನಾಯಕ ಚೇತೇಶ್ವರ ಪೂಜಾರ್ ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆಮಾಡಿಕೊಂಡರು. ಆದರೆ ಆಸ್ಟ್ರೇಲಿಯಾ ಎ ಆತಿಥೇಯ ತಂಡವನ್ನು ಔಟ್ ಮಾಡಲು ಕೇವಲ 68. 5 ಓವರುಗಳನ್ನು ಮಾತ್ರ ತೆಗೆದುಕೊಂಡಿತು. ಎಲ್ಲರ ಗಮನ ಕೊಹ್ಲಿ ಬ್ಯಾಟಿಂಗ್‌ನತ್ತ ಹರಿದಿದ್ದರೂ ಕೊಹ್ಲಿ ತಮ್ಮ ಕಳಪೆ ಫಾರಂ ಮುಂದುವರಿಸಿ ಒಂದು ಗಂಟೆಯ ಕಾಲದ ಇನ್ನಿಂಗ್ಸ್‌ನಲ್ಲಿ 16 ರನ್ ಹೊಡೆದು ಔಟಾದರು.

 ಇದಕ್ಕೆ ಉತ್ತರವಾಗಿ ಆಸ್ಟ್ರೇಲಿಯಾ ಎ 13 ಓವರುಗಳಲ್ಲಿ 43 ರನ್ ಹೊಡೆದಿದ್ದು, ಕ್ಯಾಮೆರಾನ್ ಬ್ಯಾನ್‌ಕ್ರಾಫ್ಟ್ (24 ಅಜೇಯ) ಮತ್ತು ಉಸ್ಮಾನ್ ಕ್ವಾಜಾ (13 ಅಜೇಯ) ನೆರವಿನಿಂದ ಯಾವುದೇ ವಿಕೆಟ್ ನಷ್ಟವಿಲ್ಲದೇ 13 ಓವರುಗಳಲ್ಲಿ 43 ರನ್ ಹೊಡೆದಿದೆ.

ಆಸ್ಟ್ರೇಲಿಯಾ ಎ ತಂಡ ತನ್ನ ಬೌಲಿಂಗ್ ಯೋಜನೆಯನ್ನು ಸಮರ್ಥವಾಗಿ ನಿರ್ವಹಿಸಿತು. ವೇಗಿ ಗುರೀಂದರ್ ಸಿಂಗ್ ಸಾಂಧು(3/25) ಉತ್ತಮ ಅಂಕಿಅಂಶ ಹೊಂದಿದ್ದರೆ, ಎಡಗೈ ಸ್ಪಿನ್ ಅವಳಿಗಳಾದ ಸ್ಟೀವ್ ಓ ಕೀಫ್  2 ವಿಕೆಟ್ ಮತ್ತು ಅಶ್ಟಾನ್ ಅಗರ್ 2 ವಿಕೆಟ್ ನೆರವಿನಿಂದ ಭಾರತ ಎ ತಂಡದ ಮೇಲಿನ ಕ್ರಮಾಂಕದ ಬ್ಯಾಟ್ಸ್‌ಮನ್‌ಗಳನ್ನು ಔಟ್ ಮಾಡಿದರು. 

Share this Story:

Follow Webdunia kannada