Webdunia - Bharat's app for daily news and videos

Install App

ಟಿ20 ಕ್ರಿಕೆಟ್ ನಲ್ಲಿ ಎಂದೂ ಮಾಡದ ಬೇಡದ ದಾಖಲೆ ಮಾಡಿದ ಕೊಹ್ಲಿ

Krishnaveni K
ಗುರುವಾರ, 18 ಜನವರಿ 2024 (10:50 IST)
ಬೆಂಗಳೂರು: ಭಾರತ ಮತ್ತು ಅಫ್ಘಾನಿಸ್ತಾನ ನಡುವಿನ ಮೂರನೇ ಟಿ20 ಪಂದ್ಯದಲ್ಲಿ ಟೀಂ ಇಂಡಿಯಾ ಸ್ಟಾರ್ ಕ್ರಿಕೆಟಿಗ ವಿರಾಟ್ ಕೊಹ್ಲಿ ಎಂದೂ ಮಾಡದ ಬೇಡದ ದಾಖಲೆಯೊಂದನ್ನು ಮಾಡಿದ್ದಾರೆ.
 

ಕೊಹ್ಲಿ ಈ ಪಂದ್ಯದಲ್ಲಿ ಶೂನ್ಯಕ್ಕೆ ನಿರ್ಗಮಿಸಿದ್ದಾರೆ. ಈ ಮೂಲಕ ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್ ನಲ್ಲಿ ಇದೇ ಮೊದಲ ಬಾರಿಗೆ ಶೂನ್ಯ ಗಳಿಸಿದ ಕುಖ್ಯಾತಿಗೆ ಪಾತ್ರರಾದರು. ಜೊತೆಗೆ ಬೇಡದ ದಾಖಲೆಯಲ್ಲೂ ಸಚಿನ್ ರನ್ನು ಹಿಂದಿಕ್ಕಿದ್ದಾರೆ.

ಅಂತಾರಾಷ್ಟ್ರೀಯ ಕ್ರಿಕೆಟ್ ನ ಎಲ್ಲಾ ಮಾದರಿಯಲ್ಲೂ ಸೇರಿ 35 ನೇ ಗೋಲ್ಡನ್ ಡಕ್ ಆಗುವ ಮೂಲಕ ಗರಿಷ್ಠ ಶೂನ್ಯ ದಾಖಲೆ ತಮ್ಮದಾಗಿಸಿಕೊಂಡಿದ್ದಾರೆ. ಇದಕ್ಕೆ ಮೊದಲು ಕೊಹ್ಲಿ ಐಪಿಎಲ್ ನಲ್ಲಿ ಗೋಲ್ಡನ್ ಡಕ್ ಆಗಿದ್ದರು. ಆದರೆ ಅಂತಾರಾಷ್ಟ್ರೀಯ ಕ್ರಿಕೆಟ್ ನಲ್ಲಿ ಟಿ20 ಫಾರ್ಮ್ಯಾಟ್ ನಲ್ಲಿ ಗೋಲ್ಡನ್ ಡಕ್ ಆಗಿದ್ದು ಇದೇ ಮೊದಲು.

ಕೊಹ್ಲಿ ಈ ಟಿ20 ಸರಣಿಯಲ್ಲಿ ಟಿ20 ಕ್ರಿಕೆಟ್ ನಲ್ಲಿ 12 ಸಾವಿರ ರನ್ ಪೂರೈಸಿದ ದಾಖಲೆ ಮಾಡಬೇಕಿತ್ತು. ಆದರೆ ಎರಡನೇ ತವರು ಎಂದೇ ಬಿಂಬಿತವಾಗಿರುವ ಬೆಂಗಳೂರಿನಲ್ಲಿ ಶೂನ್ಯಕ್ಕೆ ನಿರ್ಗಮಿಸುವ ಮೂಲಕ ದಾಖಲೆ ಮಾಡುವ ಅವಕಾಶ ತಪ್ಪಿಸಿಕೊಂಡರು.
 

ಸಂಬಂಧಿಸಿದ ಸುದ್ದಿ

ಎಲ್ಲವನ್ನೂ ನೋಡು

ಓದಲೇಬೇಕು

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಎಲ್ಲವನ್ನೂ ನೋಡು

ಸುದ್ದಿ ಜಗತ್ತು

ನಿಮ್ಮ ಕೈಲಿ ನಾವು ಟ್ರೋಫಿ ತಗೊಳ್ಳಲ್ಲ ಎಂದು ಹೇಳಿದ್ರೂ ವೇದಿಕೆಗೆ ಬಂದಿದ್ದ ಮೊಹ್ಸಿನ್ ನಖ್ವಿ: ಗರಂ ಆಗಿರುವ ಬಿಸಿಸಿಐ

ಟ್ರೋಫಿಗಾಗಿ ಹೈಡ್ರಾಮಾದ ಬೆನ್ನಲ್ಲೇ ಭಾರತೀಯ ಮಹಿಳಾ ತಂಡದ ಸಾಧನೆಯನ್ನು ಕೊಂಡಾಡಿದ ಪ್ರಧಾನಿ ನರೇಂದ್ರ ಮೋದಿ

Video: ಅಘ್ಗಾನಿಸ್ತಾನ ವಿರುದ್ಧದ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಮೊದಲ ಬಾರಿಗೆ ಮೊಳಗಿದ ವಂದೇ ಮಾತರಂ

Video: ಅಲೆಕ್ಸಾಂಡರ್ ಝ್ವರೆವ್‌ಗೆ ಅಮೆರಿಕಾ ಓಪನ್‌ ಕಿರೀಟ, ವಿಶ್ವ ಟೆನಿಸ್‌ ಲೋಕಕ್ಕೆ ಹೊಸ ಅಧಿಪತಿಯ ಉದಯ

Video: ಎಂಟನೇ ಬಾರಿ ಮಹಿಳಾ ಏಷ್ಯಾ ಕಪ್ ಗೆದ್ದರೂ ಟ್ರೋಫಿ ಬೇಡ ಎಂದ ಭಾರತ: ಕಾರಣ ಇಲ್ಲಿದೆ ನೋಡಿ

ಮುಂದಿನ ಸುದ್ದಿ
Show comments