Webdunia - Bharat's app for daily news and videos

Install App

ವಿರಾಟ್ ಕೊಹ್ಲಿ ಸಿಡಿಲಬ್ಬರದ ಶತಕ: ರಾಯಲ್ ಚಾಲೆಂಜರ್ಸ್‌ಗೆ ಕಿಂಗ್ಸ್ ಇಲೆವನ್ ವಿರುದ್ಧ ಗೆಲುವು

Webdunia
ಗುರುವಾರ, 19 ಮೇ 2016 (09:13 IST)
ಬೆಂಗಳೂರು: ವಿರಾಟ್ ಕೊಹ್ಲಿ ಅವರ ಸಿಡಿಲಬ್ಬರದ ಶತಕದ 113 ರನ್ ಮತ್ತು ಕ್ರಿಸ್ ಗೇಲ್ ಅವರ 73 ರನ್ ನೆರವಿನಿಂದ ರಾಯಲ್ ಚಾಲೆಂಜರ್ಸ್ ಬೆಂಗಳೂರು ಕಿಂಗ್ಸ್ ಇಲೆವನ್ ಪಂಜಾಬ್ ವಿರುದ್ಧ  82 ರನ್‌ಗಳಿಂದ ಭರ್ಜರಿ ಜಯಗಳಿಸಿದೆ. ರಾಯಲ್ ಚಾಲೆಂಜರ್ಸ್ 15 ಓವರುಗಳಲ್ಲಿ 211 ರನ್ ಭಾರೀ ಮೊತ್ತವನ್ನು ಕಲೆಹಾಕಿದೆ.  

ರಾಯಲ್ ಸ್ಕೋರನ್ನು ಬೆನ್ನಟ್ಟಿದ ಕಿಂಗ್ಸ್ ಇಲೆವನ್  14 ಓವರುಗಲ್ಲಿ 120 ರನ್ ಗಳಿಸಲು ಮಾತ್ರ ಸಾಧ್ಯವಾಗಿ ಸೋಲಪ್ಪಿದೆ. ಬೆಂಗಳೂರಿನ  ಪ್ರೇಕ್ಷಕರು ಕ್ರಿಸ್ ಗೇಲ್ ಮತ್ತು ಕೊಹ್ಲಿ ಅವರ ಆಟವನ್ನು ನೋಡಿ ಮನಸಾರೆ ಆನಂದಿಸಿದರು. 
 
ಮಳೆಯಿಂದಾಗಿ ಓವರುಗಳನ್ನು 15ಕ್ಕೆ ಮೊಟಕುಗೊಳಿಸಲಾಯಿತು. ಕಿಂಗ್ಸ್  ಇಲೆವನ್ ಬೌಲರುಗಳನ್ನು ಮನಬಂದಂತೆ ದಂಡಿಸಿ ಬೌಂಡರಿ, ಸಿಕ್ಸರುಗಳ ಸುರಿಮಳೆಯನ್ನು ಕ್ರಿಸ್ ಗೇಲ್ ಮತ್ತು ಕೊಹ್ಲಿ  ಸುರಿಸಿದರು.  ವಿರಾಟ್ ಕೊಹ್ಲಿ ಕೇವಲ 50 ಎಸೆತಗಳಲ್ಲಿ 8 ಸಿಕ್ಸರುಗಳು ಮತ್ತು 12 ಬೌಂಡರಿಗಳ  113 ರನ್ ಸ್ಕೋರ್ ಮಾಡಿದರೆ , ಕ್ರಿಸ್ ಗೇಲ್ 32 ಎಸೆತಗಳಲ್ಲಿ 73 ರನ್ ಸ್ಕೋರ್ ಮಾಡಿದರು.
 
ಕೊಹ್ಲಿ ಮತ್ತು ಗೇಲ್ ಸ್ಫೋಟಕ ಬ್ಯಾಟಿಂಗ್ ಪ್ರದರ್ಶನವನ್ನು ಪ್ರೇಕ್ಷಕರು ಮನಸಾರೆ ಆನಂದಿಸಿದರು. ಕೊಹ್ಲಿ ಕೊನೆಗೆ ಸಂದೀಪಶರ್ಮಾ ಬೌಲಿಂಗ್‌ನಲ್ಲಿ  ಮಿಲ್ಲರ್‌ಗೆ ಕ್ಯಾಚಿತ್ತು ಔಟಾದರು.
 
 ಲೋಕೇಶ್ ರಾಹುಲ್ 6 ಎಸೆತಗಳಲ್ಲಿ 16 ರನ್ ಗಳಿಸಿ ಅಜೇಯರಾಗಿ ಉಳಿದರು. ಬಳಿಕ ಬ್ಯಾಟಿಂಗ್ ಆಡಿದ ಕಿಂಗ್ಸ್ ಇಲೆವನ್ ಯಜುವೇಂದ್ರ ಚಾಹಲ್ ಸ್ಪಿನ್ ದಾಳಿಗೆ ತತ್ತರಿಸಿತು. ಚಾಹಲ್ 4 ವಿಕೆಟ್ ಕಬಳಿಸಿದರೆ, ಶೇನ್ ವಾಟ್ಸನ್ 2 ವಿಕೆಟ್ ಕಬಳಿಸಿದರು.
 ಕಿಂಗ್ಸ್ ಇಲೆವನ್ ಪರ ವೃದ್ಧಿಮಾನ್ ಸಹಾ 24 ರನ್ ಗಳಿಸಿದ್ದನ್ನು ಬಿಟ್ಟರೆ ಬೇರೆ ಯಾವ ಆಟಗಾರನೂ 20ರ ಗಡಿಯನ್ನು ದಾಟಲಿಲ್ಲ. ಆರ್‌ಸಿಬಿ ಈ ಗೆಲುವಿನಿಂದ ಪಾಯಿಂಟ್ ಪಟ್ಟಿಯಲ್ಲಿ 2ನೇ ಸ್ಥಾನಕ್ಕೇರಿದೆ.

ವೆಬ್‌ದುನಿಯಾ ಮೊಬೈಲ್ ಆಪ್ (ಡೌನ್‌ಲೋಡ್) ಮಾಡಿಕೊಂಡು ತಾಜಾ ಸುದ್ದಿಗಳನ್ನು ಪಡೆಯಿರಿ.
ಎಲ್ಲವನ್ನೂ ನೋಡು

ಓದಲೇಬೇಕು

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಎಲ್ಲವನ್ನೂ ನೋಡು

ಸುದ್ದಿ ಜಗತ್ತು

ಸ್ಟ್ರಾಂಗ್ ಪ್ಲೇಯರ್ ಕೊಹ್ಲಿ ಇರುವಾಗ ವೀಕ್ ಪ್ಲೇಯರ್ ರೋಹಿತ್ ಯಾಕೆ ಕ್ಯಾಪ್ಟನ್ ಆಗಿದ್ದಾರೆ?

ಪ್ರಾಕ್ಟೀಸ್ ಸೆಷನ್ ಗೆ ವಿರಾಟ್ ಕೊಹ್ಲಿ-ಬುಮ್ರಾ ಚಕ್ಕರ್

ಮಗಳ ಬರ್ತ್ ಡೇ ಪಾರ್ಟಿಯಲ್ಲಿ ಟಾಯ್ ಟ್ರೈನ್ ನಲ್ಲಿ ಮಸ್ತ್ ಮಜಾ ಮಾಡಿದ ರೋಹಿತ್ ಶರ್ಮಾ

INDWvsAusw ODI: ಭಾರತ ಮಹಿಳಾ ಕ್ರಿಕೆಟ್ ಆಟಗಾರ್ತಿ ಸ್ನೇಹಾ ರಾಣಾ ತಲೆಗೆ ಗಂಭೀರ ಗಾಯ

INDvsSA test: ಎರಡನೇ ಟೆಸ್ಟ್ ಗೆ ಟೀಂ ಇಂಡಿಯಾದಲ್ಲಿ ಈ ಬದಲಾವಣೆ ಖಚಿತ

ಮುಂದಿನ ಸುದ್ದಿ
Show comments