Webdunia - Bharat's app for daily news and videos

Install App

ಐಪಿಎಲ್ 2024: ವಿಲ್ ಜ್ಯಾಕ್ಸ್ ಶತಕ ಸಿಡಿಸಿದ್ದಕ್ಕೆ ಮಗುವಿನಂತೆ ಕುಣಿದಾಡಿದ ವಿರಾಟ್ ಕೊಹ್ಲಿ

Krishnaveni K
ಸೋಮವಾರ, 29 ಏಪ್ರಿಲ್ 2024 (09:05 IST)
Photo Courtesy: Twitter
ಬೆಂಗಳೂರು: ಐಪಿಎಲ್ 2024 ರಲ್ಲಿ ಗುಜರಾತ್ ಟೈಟನ್ಸ್ ವಿರುದ್ಧ ನಡೆದ ಪಂದ್ಯವನ್ನು ಆರ್ ಸಿಬಿ ಭರ್ಜರಿಯಾಗಿ 9 ವಿಕೆಟ್ ಗಳಿಂದ ಗೆದ್ದುಕೊಂಡಿದೆ. ಈ ಗೆಲುವಿನ ರನ್ ಜೊತೆಗೆ ಆರ್ ಸಿಬಿ ವಿಲ್ ಜ್ಯಾಕ್ಸ್ ಶತಕವೂ ಪೂರ್ತಿಯಾಗಿತ್ತು.

ಮೊದಲು ಬ್ಯಾಟಿಂಗ್ ಮಾಡಿದ ಗುಜರಾತ್ 20 ಓವರ್ ಗಳಲ್ಲಿ 3 ವಿಕೆಟ್ ನಷ್ಟಕ್ಕೆ 200 ರನ್ ಗಳಿಸಿತು. ಈ ಮೊತ್ತ ಬೆನ್ನತ್ತಿದ ಆರ್ ಸಿಬಿ 16 ಓವರ್ ಗಳಲ್ಲೇ ಕೇವಲ 1 ವಿಕೆಟ್ ನಷ್ಟಕ್ಕೆ 201 ರನ್ ಗಳಿಸಿ ಗೆಲುವು ದಾಖಲಿಸಿತು. ಆರಂಭಿಕ ಫಾ ಡು ಪ್ಲೆಸಿಸ್ 24 ರನ್ ಗಳಿಗೆ ವಿಕೆಟ್ ಒಪ್ಪಿಸಿದ ಮೇಲೆ ವಿರಾಟ್ ಕೊಹ್ಲಿ-ವಿಲ್ ಜ್ಯಾಕ್ಸ್ ಕೊನೆಯವರೆಗೂ ಅಜೇಯರಾಗುಳಿದರು.

ಕೊಹ್ಲಿ 44 ಎಸೆತಗಳಿಂದ 70 ರನ್ ಗಳಿಸಿದರು. ಆದರೆ ಇನ್ನೊಂದೆಡೆ ಅಬ್ಬರಿಸಿದವಿಲ್ ಜ್ಯಾಕ್ಸ್ ಕೇವಲ 41 ಎಸೆತಗಳಿಂದ 10 ಸಿಕ್ಸರ್ ಸಹಿತ 100 ರನ್ ಗಳಿಸಿದರು. ಆರ್ ಸಿಬಿ ಗೆಲುವಿಗೆ 1 ರನ್ ಬೇಕಾಗಿದ್ದಾಗ ವಿಲ್ ಜ್ಯಾಕ್ಸ್ ಶತಕಕ್ಕೆ 6 ರನ್ ಬೇಕಾಗಿತ್ತು. ಯಶಸ್ವಿಯಾಗಿ ಸಿಕ್ಸರ್ ಸಿಡಿಸಿದ ವಿಲ್ ಜ್ಯಾಕ್ಸ್ ಗೆಲುವಿನ ಜೊತೆಗೆ ಶತಕವನ್ನೂ ಪೂರೈಸಿದರು.

ಈ ವೇಳೆ ಕೊಹ್ಲಿ ಸಂಭ್ರಮ ಮುಗಿಲು ಮುಟ್ಟಿತ್ತು. ಅರೆಕ್ಷಣ ಸಿಕ್ಸರ್ ಹೋಗುವುದನ್ನೇ ನಂಬಲಸಾಧ‍್ಯ ರೀತಿಯಲ್ಲಿ ನೋಡುತ್ತಾ ಕುಳಿತಿ ಕೊಹ್ಲಿ ಬಳಿಕ ಚಿಕ್ಕಮಕ್ಕಳಂತೆ ಕುಣಿದಾಡಿಬಿಟ್ಟರು. ವಿಲ್ ಜ್ಯಾಕ್ಸ್ ರನ್ನು ಬಿಗಿದಪ್ಪಿ ಸಂಭ್ರಮಿಸಿದರು. ಈ ದೃಶ್ಯ ನೋಡಿದ ಕೊಹ್ಲಿ ಅಭಿಮಾನಿಗಳು ಈ ಕಾರಣಕ್ಕಾಗಿಯೇ ನಮಗೆ ಕಿಂಗ್ ಕೊಹ್ಲಿ ಎಂದರೆ ಇಷ್ಟ ಎಂದು ಅಭಿಪ್ರಾಯಪಟ್ಟಿದ್ದಾರೆ.

ಸಂಬಂಧಿಸಿದ ಸುದ್ದಿ

ಎಲ್ಲವನ್ನೂ ನೋಡು

ಓದಲೇಬೇಕು

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಎಲ್ಲವನ್ನೂ ನೋಡು

ಸುದ್ದಿ ಜಗತ್ತು

ನಿಮ್ಗೆ ಸ್ವಿಂಗ್ ಆಡುವ ಯೋಗ್ಯತೆ ಇಲ್ಲ ಎಂದ ಹ್ಯಾರಿ ಬ್ರೂಕ್ ಗೆ ಕೆಎಲ್ ರಾಹುಲ್ ಉತ್ತರ ಏನಿತ್ತು ಗೊತ್ತಾ

Video: ಡ್ರಾ ಮಾಡಿಕೊಳ್ಳೋಣ್ವಾ ಎಂದರೆ ತಡಿ ಸೆಂಚುರಿ ಮಾಡ್ತೀನಿ ಎಂದ ರವೀಂದ್ರ ಜಡೇಜಾ

ಕಾಲಿನ ಬೆರಳು ಮುರಿದರೂ ಮತ್ತೆ ಕಣಕ್ಕೆ ಇಳಿಯಲು ಸಜ್ಜಾದ ರಿಷಭ್‌ ಪಂತ್‌: ಕುತೂಹಲ ಘಟ್ಟದತ್ತ ನಾಲ್ಕನೇ ಟೆಸ್ಟ್‌

IND vs ENG: ಕೆಎಲ್ ರಾಹುಲ್ ಟೀಂ ಇಂಡಿಯಾಗೆ ನೀವೇ ಗತಿ

IND vs ENG: ದ್ವಿತೀಯ ಇನಿಂಗ್ಸ್ ನಲ್ಲಿ ಟೀಂ ಇಂಡಿಯಾಕ್ಕೆ ಇದೆಂಥಾ ಅವಸ್ಥೆ

ಮುಂದಿನ ಸುದ್ದಿ
Show comments