Select Your Language

Notifications

webdunia
webdunia
webdunia
webdunia

ಕೊಹ್ಲಿಯ ಬ್ರಾಂಡ್ ವ್ಯಾಲ್ಯೂ ಎಷ್ಟು ಗೊತ್ತಾ..? ಸಚಿನ್, ಧೋನಿ ಎಲ್ಲರಿಗೂ ಹೆಚ್ಚು

ಕೊಹ್ಲಿಯ ಬ್ರಾಂಡ್ ವ್ಯಾಲ್ಯೂ ಎಷ್ಟು ಗೊತ್ತಾ..? ಸಚಿನ್, ಧೋನಿ ಎಲ್ಲರಿಗೂ ಹೆಚ್ಚು
ಲಾರ್ಡ್ಸ್ , ಶುಕ್ರವಾರ, 2 ಜೂನ್ 2017 (09:10 IST)
ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ವಿಶ್ವದ ಮೋಸ್ಟ್ ಮಾರ್ಕೆಟಬಲ್ ಅಥ್ಲೀಟ್`ಗಳಲ್ಲಿ  ಒಬ್ಬರು. ಇದಕ್ಕೆ ಸಾಕ್ಷಿ ಅವರ ಲೇಟೆಸ್ಟ್ ಬ್ರಾಂಡ್ ವ್ಯಾಲ್ಯೂ.
 

ವರ್ಷಾರಂಭದಲ್ಲಿ ವಿರಾಟ್ ಕೊಹ್ಲಿ 110 ಮಿಲಿಯನ್ ಅಮೆರಿಕನ್ ಡಾಲರ್ ಮೌಲ್ಯದ ಪುಮಾ ಅಪೆರೆಲ್ ಬ್ರ್ಯಾಂಡ್ ಜಾಹೀರಾತು ಒಪ್ಪಂದಕ್ಕೆ ಸಹಿ ಹಾಕಿದ್ದರು. ಈ ಮೂಲಕ ಸಿಂಗಲ್ ಬ್ರ್ಯಾಂಡ್`ಗೆ 100 ಕೋಟಿ ರೂ. . ಪಡೆದ ದೇಶದ ಮೊದಲ ಕ್ರೀಡಾಳು ಎಂಬ ಖ್ಯಾತಿಗೆ ಪಾತ್ರರಾಗಿದ್ದರು.

`ಪುಮಾ ಒಪ್ಪಂದ ಜೊತೆ ಎಂಆರ್ಎಫ್ ಡೀಲ್ ಸೇರಿ ನನ್ನ ಬ್ರ್ಯಾಂಡ್ ವ್ಯಾಲ್ಯೂ ಸುಮಾರು 120 ಮಿಲಿಯನ್ ಡಾಲರ್ ಆಗಲಿದೆ. ನನ್ನ ಮ್ಯಾನೇಜ್ ಮೆಂಟ್ ನನಗೆ ಈ ವಿಷಯ ತಿಳಿಸಿದೆ’ ಎಂದು ಸ್ವತಃ ಕೊಹ್ಲಿ ಹೇಳಿರುವುದಾಗಿ ವರದಿಯಾಗಿದೆ.

ಇದು ಕೇವಲ ನನಗೆ ಸಂಖ್ಯೆಯಷ್ಟೇ. ಇದಕ್ಕಾಗಿ ನಾನು ಶ್ರಮಿಸಿದವನಲ್ಲ. ಇದು ನನ್ನ ವೃತ್ತಿಯ ಉಪ ಉತ್ಪನ್ನ. ನನ್ನ ದೃಷ್ಟಿ ಯಾವಾಗಲೂ ನನ್ನ ವೃತ್ತಿ ಮೇಲೆ ಇರುತ್ತೆ. ಜಾಹೀರಾತು ಆದಾಯವೂ ಸಹ ನನ್ನ ಜೀವನಕ್ಕೆ ಬಹುಮುಖ್ಯವಾದದ್ದು ಮತ್ತು ನಾನು ಬಲಿಷ್ಠ ಮ್ಯಾನೇಜ್ ಮೆಂಟ್ ತಂಡವನ್ನ ಹೊಂದಿದ್ದೇನೆ. ಅವರು ಒಳ್ಳೆಯ ಕೆಲಸ ಮಾಡುತ್ತಿದ್ದಾರೆ ಎಂದು ಕೊಹ್ಲಿ ತಿಳಿಸಿದ್ದಾರೆ.

ವೆಬ್ ದುನಿಯಾ ಫ್ಯಾಂಟಸಿ ಕ್ರಿಕೆಟ್ ಲೀಗ್: ಆಡಿ 2.5 ಲಕ್ಷ ರೂ. ಮೌಲ್ಯದ ಬಹುಮಾನ ಗೆಲ್ಲಿ.. ವೆಬ್ ದುನಿಯಾ ಫ್ಯಾಂಟಸಿ ಲೀಗ್`ನಲ್ಲಿ ಭಾಗವಹಿಸಲು ಈ ಲಿಂಕ್ ಕ್ಲಿಕ್ ಮಾಡಿ..

 http://kannada.fantasycricket.webdunia.com/
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ವೆಬ್ ದುನಿಯಾ ಫ್ಯಾಂಟಸಿ ಕ್ರಿಕೆಟ್ ಲೀಗ್: ಆಡಿ 2.5 ಲಕ್ಷ ರೂ. ಮೌಲ್ಯದ ಬಹುಮಾನ ಗೆಲ್ಲಿ