Webdunia - Bharat's app for daily news and videos

Install App

ಫೋರ್ಬ್ಸ್ ಪಟ್ಟಿಯಲ್ಲಿ ಸಲ್ಮಾನ್, ಶಾರುಕ್ ಹಿಂದಿಕ್ಕಿದ ವಿರಾಟ್ ಕೊಹ್ಲಿ

Webdunia
ಶನಿವಾರ, 24 ಡಿಸೆಂಬರ್ 2016 (12:36 IST)
ಫೋರ್ಬ್ಸ್ ಇಂಡಿಯಾ ಪಟ್ಟಿಯಲ್ಲಿ ಭಾರತೀಯ ಕ್ರಿಕೆಟ್ ತಂಡದ ದಿಗ್ಗಜ ಆಟಗಾರ ವಿರಾಟ್ ಕೊಹ್ಲಿ, ಬಾಲಿವುಡ್ ನಟರಾದ ಸಲ್ಮಾನ್ ಖಾನ್ ಮತ್ತು ಶಾರುಕ್ ಖಾನ್‌ರನ್ನು ಹಿಂದಿಕ್ಕಿದ್ದಾರೆ.  
 
ವಿಶ್ವಕ್ರಿಕೆಟ್ ಕ್ಷೇತ್ರದಲ್ಲಿ ಮಾನವೀಯತೆ ಮತ್ತು ಕ್ರೀಡಾನಿಷ್ಠೆಯಿಂದಾಗಿ ಖ್ಯಾತನಾಮರಾಗಿರುವ ವಿರಾಟ್ ಕೊಯ್ಲಿ ಭಾರಿ ಜನಪ್ರಿಯತೆಯನ್ನು ಪಡೆದಿದ್ದಾರೆ.
 
2016 ವರ್ಷ ಕೆಲವೇ ದಿನಗಳಲ್ಲಿ ಅಂತ್ಯವಾಗುತ್ತಿರುವ ಸಂದರ್ಭದಲ್ಲಿ ಬಾಲಿವುಡ್ ಜನಪ್ರಿಯ ನಟರಾದ ಸಲ್ಮಾನ್ ಖಾನ್ ಮತ್ತು ಶಾರುಕ್ ಖಾನ್‌ರನ್ನು ಹಿಂದೆ ತಳ್ಳಿ ಮೋಸ್ಟ್ ಫೆಮಸ್ ಇಂಡಿಯನ್ ಸೆಲೆಬ್ರೆಟಿ 2016 ಎನ್ನುವ ಗೌರವಕ್ಕೆ ಭಾಜನರಾಗಿದ್ದಾರೆ.
 
ಭಾರತೀಯ ಸೆಲೆಬ್ರೆಟಿಗಳ ಟಾಪ್ 100 ಪಟ್ಟಿಯಲ್ಲಿ ವಿರಾಟ್ ಕೊಹ್ಲಿ ಮೂರನೇ ಸ್ಥಾನ ಪಡೆದಿದ್ದಾರೆ. ಮಹೇಂದ್ರ ಸಿಂಗ್ ಧೋನಿ 5ನೇ ಸ್ಥಾನ ಮತ್ತು ಸಚಿನ್ ತೆಂಡೂಲ್ಕರ್ 7ನೇ ಸ್ಥಾನ ಪಡೆದಿದ್ದಾರೆ. 
 
ಯುವರಾಜ್ ಸಿಂಗ್ 13ನೇ ಸ್ಥಾನ ಪಡೆದಿದ್ದರೆ ರೋಹಿತ್ ಶರ್ಮಾ 17ನೇ ಸ್ಥಾನ ಪಡೆದಿದ್ದಾರೆ..
 
ಸಾಮಾಜಿಕ ಅಂತರ್ಜಾಲ ತಾಣವಾದ ಟ್ವಿಟ್ಟರ್‌ನಲ್ಲಿ 13.4 ಮಿಲಿಯನ್ ಫಾಲೋವರ್‌ಗಳನ್ನು ಹೊಂದಿರುವ ವಿರಾಟ್ ಕೊಹ್ಲಿ ಮತ್ತಷ್ಟು ಸಾಧನೆ ತೋರಲಿ ಎನ್ನುವುದು ಕ್ರಿಕೆಟ್ ಅಭಿಮಾನಿಗಳ ಹಾರೈಕೆಯಾಗಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. 
ಎಲ್ಲವನ್ನೂ ನೋಡು

ಓದಲೇಬೇಕು

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಎಲ್ಲವನ್ನೂ ನೋಡು

ಸುದ್ದಿ ಜಗತ್ತು

Test Crickte: ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ ನಿವೃತ್ತಿ ಬೆನ್ನಲ್ಲೇ ಟೀಂ ಇಂಡಿಯಾದಲ್ಲಿ ಮತ್ತೊಂದು ಬದಲಾವಣೆ ಸುದ್ದಿ

TATA IPL 2025: ಕ್ರಿಕೆಟ್ ಪ್ರಿಯರಿಗೆ ಗುಡ್‌ನ್ಯೂಸ್‌

Virat Kohli: ಮಾರ್ಚ್ 17 ಕ್ಕೆ ಚಿನ್ನಸ್ವಾಮಿ ಮೈದಾನದಲ್ಲಿ ಅಭಿಮಾನಿಗಳಿಂದ ಕೊಹ್ಲಿಗೆ ಸರ್ಪ್ರೈಸ್

IPL 2025: ಐಪಿಎಲ್ 2025 ರ ಹೊಸ ವೇಳಾಪಟ್ಟಿ ವಿವರ

Virat Kohli retirement: ವಿರಾಟ್ ಕೊಹ್ಲಿ, ರೋಹಿತ್ ಶರ್ಮಾಗೆ ವಿದಾಯ ಪಂದ್ಯವನ್ನೂ ನೀಡದೇ ಗೇಟ್ ಪಾಸ್

ಮುಂದಿನ ಸುದ್ದಿ
Show comments