Webdunia - Bharat's app for daily news and videos

Install App

ಡಿಸೆಂಬರ್‌ನಲ್ಲಿ ವಿರಾಟ್- ಅನುಷ್ಕಾ ವಿವಾಹವಂತೆ..!

Webdunia
ಭಾನುವಾರ, 22 ಮಾರ್ಚ್ 2015 (13:47 IST)
ಭಾರತ ಕ್ರಿಕೆಟ್‌ ತಂಡದ ದಿಟ್ಟ  ಬ್ಯಾಟ್ಸ್‌ಮನ್‌ ಎಂದೇ ಖ್ಯಾತರಾಗಿರುವ ವಿರಾಟ್‌ ಕೊಹ್ಲಿ ಮತ್ತು ಬಾಲಿವುಡ್‌ನ‌ ಚೆಲುವೆ ಅನುಷ್ಕಾ ಶರ್ಮಾ ಈ ವರ್ಷಾಂತ್ಯ ಮದುವೆ ಆಗಲಿದ್ದಾರೆ ಎಂದು ಇಲ್ಲಿನ ಪ್ರಮುಖ ದೈನಿಕವೊಂದು ವರದಿ ಮಾಡಿದೆ.

ವಿರಾಟ್‌ ಕೊಹ್ಲಿ ಅವರು ಅನುಷ್ಕಾ ನಟನೆಯ ಎನ್‌ಎಚ್‌ 10 ಸಿನೇಮಾ ನೋಡಿ ಆಕೆಯನ್ನು ಟ್ವಿಟರ್‌ನಲ್ಲಿ  ಬಹುವಾಗಿ ಪ್ರಶಂಸಿಸಿರುವ ಬೆನ್ನಿಗೇ ಆಕೆಯಿಂದ ಕೂಡಲೇ ಧನ್ಯವಾದ ಸಮರ್ಪಣೆಯೂ ಆಗಿದೆ. ಈ ಒಟ್ಟು ವಿದ್ಯಮಾನದ ಹಿನ್ನೆಲೆಯಲ್ಲಿ ವಿರಾಟ್‌ ಕೊಹ್ಲಿ - ಅನುಷ್ಕಾ ಶರ್ಮಾ ಈ ವರ್ಷಾಂತ್ಯ ಮದುವೆಯಾಗಲಿದ್ದಾರೆ ಎಂಬ ವದಂತಿಗಳೂ ಬಲವಾಗಿ ಕೇಳಿ ಬಂದಿವೆ. ಇದರ ಬೆನ್ನು ಹಿಡಿದ ದಿಲ್ಲಿಯ ಪ್ರಮುಖ ಪತ್ರಿಕೆಯು ವದಂತಿಯ ಹಿಂದಿನ "ಸತ್ಯಾಂಶ'ವನ್ನು ಬಯಲಿಗೆಳೆದು ಮದುವೆ ಸಂಭಾವ್ಯತೆಯನ್ನು ಸುದ್ದಿ ಮಾಡಿದೆ !

ವಿಶ್ವಕಪ್‌ ಕ್ರಿಕೆಟ್‌ ಪಂದ್ಯಗಳ ಆರಂಭಕ್ಕೆ ಮುನ್ನವೇ ಆಸ್ಟ್ರೇಲಿಯ ಮತ್ತು ನ್ಯೂಝೀಲಂಡ್‌ನ‌ಲ್ಲಿ ವಿರಾಟ್‌ ಕೊಹ್ಲಿ ಜತೆಗೆ ಅನುಷ್ಕಾ ಶರ್ಮಾ ಕನಿಷ್ಠ ಒಂದಕ್ಕಿಂತ ಹೆಚ್ಚು ಬಾರಿ ಜತೆಯಾಗಿ ಕಾಣಿಸಿಕೊಂಡಿರುವುದು ಈಗಾಗಲೇ ಸಾಕಷ್ಟು ಸುದ್ದಿಯಾಗಿದೆ.

ಇದೀಗ ಹೊಸ ವಿದ್ಯಮಾನವೊಂದರಲ್ಲಿ ಐಸಿಸಿ ವಕ್ತಾರರೋರ್ವರು ವಿರಾಟ್‌ - ಅನುಷ್ಕಾ ವಿವಾಹವಾಗುವ ಸಾಧ್ಯತೆಗಳ ಬಗ್ಗೆ ಬಾಯಿ ಬಿಟ್ಟಿರುವುದು ಕೂಡ ವದಂತಿಗಳಿಗೆ ಪುಷ್ಟಿ ನೀಡಿದೆ.

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಸ್ಟ್ರಾಂಗ್ ಪ್ಲೇಯರ್ ಕೊಹ್ಲಿ ಇರುವಾಗ ವೀಕ್ ಪ್ಲೇಯರ್ ರೋಹಿತ್ ಯಾಕೆ ಕ್ಯಾಪ್ಟನ್ ಆಗಿದ್ದಾರೆ?

ಪ್ರಾಕ್ಟೀಸ್ ಸೆಷನ್ ಗೆ ವಿರಾಟ್ ಕೊಹ್ಲಿ-ಬುಮ್ರಾ ಚಕ್ಕರ್

ಮಗಳ ಬರ್ತ್ ಡೇ ಪಾರ್ಟಿಯಲ್ಲಿ ಟಾಯ್ ಟ್ರೈನ್ ನಲ್ಲಿ ಮಸ್ತ್ ಮಜಾ ಮಾಡಿದ ರೋಹಿತ್ ಶರ್ಮಾ

INDWvsAusw ODI: ಭಾರತ ಮಹಿಳಾ ಕ್ರಿಕೆಟ್ ಆಟಗಾರ್ತಿ ಸ್ನೇಹಾ ರಾಣಾ ತಲೆಗೆ ಗಂಭೀರ ಗಾಯ

INDvsSA test: ಎರಡನೇ ಟೆಸ್ಟ್ ಗೆ ಟೀಂ ಇಂಡಿಯಾದಲ್ಲಿ ಈ ಬದಲಾವಣೆ ಖಚಿತ

Show comments