Daily Horoscope
✕

ವಿರಾಟ್ ಕೊಹ್ಲಿ ಜೊತೆ ಹೋಲಿಕೆ ಮಾಡಿದ್ದಕ್ಕೆ ಪತ್ರಿಕಾಗೋಷ್ಠಿಯಲ್ಲೇ ಬಾಬರ್ ಅಜಮ್ ಸಿಟ್ಟು Video

Krishnaveni K
ಗುರುವಾರ, 9 ಏಪ್ರಿಲ್ 2026 (16:31 IST)
Photo Credit: X
ಇಸ್ಲಾಮಾಬಾದ್: ಟೀಂ ಇಂಡಿಯಾ ಕ್ರಿಕೆಟ್ ದಿಗ್ಗಜ ವಿರಾಟ್ ಕೊಹ್ಲಿ ಜೊತೆ ಹೋಲಿಕೆ ಮಾಡಿದ್ದಕ್ಕೆ ಪಾಕಿಸ್ತಾನ ಕ್ರಿಕೆಟಿಗ ಬಾಬರ್ ಅಜಮ್ ಪತ್ರಿಕಾಗೋಷ್ಠಿಯಲ್ಲೇ ಸಿಟ್ಟಿಗೆದ್ದ ಘಟನೆ ನಡೆದಿದೆ. ಈ  ವಿಡಿಯೋ ವೈರಲ್ ಆಗಿದೆ.

ಪಿಎಸ್ಎಲ್ ಕ್ರಿಕೆಟ್ ಪಂದ್ಯಾವಳಿ ನಡುವೆ ಪತ್ರಿಕಾಗೋಷ್ಠಿಯೊಂದರಲ್ಲಿ ಬಾಬರ್ ಅಜಮ್ ಭಾಗಿಯಾಗಿದ್ದರು. ಈ ವೇಳೆ ಪತ್ರಕರ್ತರೊಬ್ಬರು ‘ವಿರಾಟ್ ಕೊಹ್ಲಿ ಕೂಡಾ ನಿಮ್ಮ ಹಾಗೇ ಶಾಟ್ ಗಳನ್ನು ಹೊಡೆಯುತ್ತಾರೆ. ಆದರೆ ಅವರು ಪಂದ್ಯಗಳನ್ನು ಮುಗಿಸುತ್ತಾರೆ, ಆದರೆ ನಿಮಗೆ ಅದು ಸಾಧ್ಯವಾಗುತ್ತಿಲ್ಲ. ಜನ ನಿಮ್ಮನ್ನು ಅವರಿಗೆ ಹೋಲಿಸುತ್ತಾರೆ. ಇದರ ಬಗ್ಗೆ ನಿಮ್ಮ ಅಭಿಪ್ರಾಯವೇನು?’ ಎಂದು ಕೇಳುತ್ತಾರೆ.

ಈ ಪ್ರಶ್ನೆ ಕೇಳುತ್ತಿದ್ದಂತೇ ಬಾಬರ್ ಅಜಮ್ ಮುಖಚಹರೆಯೇ ಬದಲಾಗುತ್ತದೆ. ‘ಈ ವಿಚಾರ ಇಲ್ಲಿ ಬೇಕಾಗಿಲ್ಲ. ಮೊದಲು ಹೋಲಿಕೆ ಮಾಡುವುದನ್ನು ಬಿಡಿ. ನಾನು ಪಂದ್ಯ ಮುಗಿಸುತ್ತಿಲ್ಲ ಎನ್ನುವುದು ನಿಮ್ಮ ತಪ್ಪು ಕಲ್ಪನೆ’ ಎಂದಿದ್ದಾರೆ.

ಇದಕ್ಕೆ ನೆಟ್ಟಿಗರು ಕಾಮೆಂಟ್ ಮಾಡಿದ್ದು ಯಾವತ್ತೂ ಕೊಹ್ಲಿಗೆ ಬಾಬರ್ ಹೋಲಿಕೆ ಮಾಡಬೇಡಿ. ಕೊಹ್ಲಿಯ ಹತ್ತಿರವೂ ಅವರು ಸುಳಿಯಲ್ಲ ಎಂದು ಟಾಂಗ್ ಕೊಟ್ಟಿದ್ದಾರೆ. ಈ ವಿಡಿಯೋ ಇಲ್ಲಿದೆ ನೋಡಿ.

ಸಂಬಂಧಿಸಿದ ಸುದ್ದಿ

ಎಲ್ಲವನ್ನೂ ನೋಡು

ಓದಲೇಬೇಕು

ಮೊಹಮ್ಮದ್ ಸಿರಾಜ್ ಗಿಂತ ಪ್ರಸಿದ್ಧ ಕೃಷ್ಣ ಗ್ರೇಟಾ.. ಸಿರಾಜ್ ರನ್ನು ಯಾಕೆ ಕೈ ಬಿಟ್ರಿ: ಫ್ಯಾನ್ಸ್ ಫುಲ್ ಗರಂ

IND vs NZ test: ಔಟ್ ಯಾಕಿಲ್ಲ… ಮೈದಾನದಲ್ಲೇ ಅಂಪಾಯರ್ ಜೊತೆ ರೊಚ್ಚಿಗೆದ್ದ ಕ್ಯಾಪ್ಟನ್ ಶುಭಮನ್ ಗಿಲ್ Video

ನಿವೃತ್ತಿ ಬಗ್ಗೆ ಸಿಎಸ್ ಕೆಗೆ ಧೋನಿ ಹೇಗೆ ಹೇಳಿದ್ರು, ಇಲ್ಲಿದೆ ಇಂಟ್ರೆಸ್ಟಿಂಗ್ ಕಹಾನಿ

ಐಪಿಎಲ್ 2027 ರಿಟೆನ್ಷನ್ ಡೆಡ್‌ಲೈನ್: ಹಾಲಿ ಚಾಂಪಿಯನ್ ಆರ್‌ಸಿಬಿ ತಂಡದಿಂದ ಹೊರಬೀಳಲಿರುವ ನಾಲ್ವರು ಪ್ರಮುಖ ಆಟಗಾರರು ಇವರೇ ನೋಡಿ

IND vs NZ ಟೆಸ್ಟ್ ಸರಣಿ 2026: ವೇಳಾಪಟ್ಟಿ, ಭಾರತ ತಂಡ, ಸಮಯ ಮತ್ತು ನೇರಪ್ರಸಾರದ ಸಂಪೂರ್ಣ ವಿವರ

ಎಲ್ಲವನ್ನೂ ನೋಡು

ಸುದ್ದಿ ಜಗತ್ತು

ಮುಂದಿನ ಸುದ್ದಿ
Show comments