Webdunia - Bharat's app for daily news and videos

Install App

ಪಾಕಿಸ್ತಾನದ ಕಳಪೆ ಪ್ರದರ್ಶನಕ್ಕೆ ಅವಿದ್ಯಾವಂತ ಆಟಗಾರರು ಕಾರಣ: ಶಹರ್‌ಯಾರ್ ಖಾನ್

Webdunia
ಶುಕ್ರವಾರ, 20 ಮೇ 2016 (13:58 IST)
ರಾಷ್ಟ್ರೀಯ ತಂಡದ ಕಳಪೆ ಪ್ರದರ್ಶನಕ್ಕೆ ವಿದ್ಯಾವಂತ ಆಟಗಾರರ ಕೊರತೆಯೇ ಕಾರಣ ಎಂದು ಪಿಸಿಬಿ ಅಧ್ಯಕ್ಷ ಶಹರ್‌ಯಾರ್ ಖಾನ್ ವಿಶ್ಲೇಷಿಸಿದ್ದಾರೆ. ಕ್ವೆಟ್ಟಾದಲ್ಲಿ ಮಾಧ್ಯಮದ ಜತೆ ಮಾತನಾಡುತ್ತಾ, ಪ್ರಸಕ್ತ ಮಿಶಬ್ ಉಲ್ ಹಕ್ ಮಾತ್ರ ತಂಡದಲ್ಲಿ ಸೂಕ್ತ ವಿದ್ಯಾವಂತ. ಮಿಶಬ್ ಬಿಟ್ಟರೆ ಯಾರೂ ಪದವೀಧರ ಆಟಗಾರ ತಂಡದಲ್ಲಿಲ್ಲ. ತಂಡದಲ್ಲಿ ವಿದ್ಯಾವಂತ ಆಟಗಾರರ ಕೊರತೆಯು ತಂಡದ ಪತನಕ್ಕೆ ಮುಖ್ಯ ಕಾರಣ ಎಂದು ಶಹರ್ ಯಾರ್ ಖಾನ್ ಹೇಳಿದರು. 
 
ಭವಿಷ್ಯದಲ್ಲಿ ನಾವು ತಂಡದಲ್ಲಿ ವಿದ್ಯಾವಂತ ಆಟಗಾರರಿಗೆ ಪ್ರೋತ್ಸಾಹಿಸಿ, ಪ್ರತಿಭಾವಂತ ಆಟಗಾರರಿಗೆ ಸಾಣೆ ಹಿಡಿಯುತ್ತೇವೆ ಎಂದು ಅವರು ಹೇಳಿದರು. 
 
ಶಿಸ್ತು ವಿಚಾರಗಳಿಗೆ ಸಂಬಂಧಿಸಿದಂತೆ ಯಾವುದೇ ರಾಜಿ ಮಾಡಿಕೊಳ್ಳದಿರಲು ಮಂಡಳಿ ನಿರ್ಧರಿಸಿದೆ. ಅಹ್ಮದ್ ಶೆಹಜಾದ್ ಮತ್ತು ಉಮರ್ ಅಕ್ಮಲ್ ಅವರನ್ನು ಅಶಿಸ್ತಿನ ಕಾರಣದಿಂದ ಆಯ್ಕೆ ಮಾಡಲಿಲ್ಲ. ಶಿಸ್ತು ಮತ್ತು ಫಿಟ್ನೆಸ್ ವಿಷಯಗಳಲ್ಲಿ ನಾವು ರಾಜಿ ಮಾಡಿಕೊಳ್ಳುವುದಿಲ್ಲ ಎಂದು ಸ್ಪಷ್ಟಪಡಿಸಲು ಬಯಸುತ್ತೇನೆ ಎಂದು ಖಾನ್ ತಿಳಿಸಿದರು. 

ತಾಜಾ ಸುದ್ದಿಗಳನ್ನು ಓದಲು ಮೊಬೈಲ್ ಆ್ಯಪ್‌ನ್ನು ಡೌನ್‌ಲೋಡ್ ಮಾಡಿಕೊಳ್ಳಿ
ಎಲ್ಲವನ್ನೂ ನೋಡು

ಓದಲೇಬೇಕು

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಎಲ್ಲವನ್ನೂ ನೋಡು

ಸುದ್ದಿ ಜಗತ್ತು

Virat Kohli: ಮಾರ್ಚ್ 17 ಕ್ಕೆ ಚಿನ್ನಸ್ವಾಮಿ ಮೈದಾನದಲ್ಲಿ ಅಭಿಮಾನಿಗಳಿಂದ ಕೊಹ್ಲಿಗೆ ಸರ್ಪ್ರೈಸ್

IPL 2025: ಐಪಿಎಲ್ 2025 ರ ಹೊಸ ವೇಳಾಪಟ್ಟಿ ವಿವರ

Virat Kohli retirement: ವಿರಾಟ್ ಕೊಹ್ಲಿ, ರೋಹಿತ್ ಶರ್ಮಾಗೆ ವಿದಾಯ ಪಂದ್ಯವನ್ನೂ ನೀಡದೇ ಗೇಟ್ ಪಾಸ್

Virat Kohli: ವಿರಾಟ್ ಕೊಹ್ಲಿ ಸ್ಥಾನಕ್ಕೆ ಕ್ಯೂನಲ್ಲಿ ನಿಂತಿರುವ ಟೀಂ ಇಂಡಿಯಾ ಕ್ರಿಕೆಟಿಗರು

Virat Kohli: ಪತಿ ನಿವೃತ್ತಿ ಬಗ್ಗೆ ಹೃದಯಸ್ಪರ್ಶಿ ಪೋಸ್ಟ್ ಹಂಚಿದ ಅನುಷ್ಕಾ ಶರ್ಮಾ

ಮುಂದಿನ ಸುದ್ದಿ
Show comments