Select Your Language

Notifications

webdunia
webdunia
webdunia
webdunia

ಅಂಪೈರ್ ತಪ್ಪಿನಿಂದಾಗಿ ಶತಕವಂಚಿತರಾದ ಟೇಲರ್

ಅಂಪೈರ್  ತಪ್ಪಿನಿಂದಾಗಿ ಶತಕವಂಚಿತರಾದ ಟೇಲರ್
ಮೆಲ್ಬರ್ನ್ , ಮಂಗಳವಾರ, 31 ಮಾರ್ಚ್ 2015 (16:43 IST)
ಐಸಿಸಿ ಕ್ರಿಕೆಟ್ ವಿಶ್ವಕಪ್ 2015ರ ಆವೃತ್ತಿ ಕೆಲವು ಕಹಿ ನೆನಪಿನ ಕ್ಷಣಗಳನ್ನು ಉಳಿಸಿಹೋಯಿತು. ಅವುಗಳ ಪೈಕಿ ಅಂಪೈರ್ ತಪ್ಪು ತೀರ್ಪಿನಿಂದಾಗಿ ಇಂಗ್ಲೆಂಡ್ ಬ್ಯಾಟ್ಸ್‌ಮನ್ ಜೇಮ್ಸ್ ಟೇಲರ್  ವಿಶ್ವಕಪ್ ಶತಕ ದಾಖಲಿಸುವ ಅವಕಾಶದಿಂದ ವಂಚಿತರಾದ ಕಹಿ ನೆನಪನ್ನು ಉಳಿಸಿತು. ಆಸ್ಟ್ರೇಲಿಯಾ ಇಂಗ್ಲೆಂಡ್ ನಡುವೆ ಎಂಸಿಜಿಯಲ್ಲಿ ಆರಂಭದ ದಿನದ ಪಂದ್ಯದಲ್ಲಿ ಆಸೀಸ್ ಮೇಲುಗೈ ಪಡೆದು ಸಾಂಪ್ರದಾಯಿಕ ಎದುರಾಳಿ ಇಂಗ್ಲೆಂಡ್  ಭಾರೀ ಸೋಲನ್ನು ಅನುಭವಿಸಿತು.  

ತಮ್ಮ ತಂಡದ ಆಟಗಾರರೆಲ್ಲ ಬೇಗನೇ ಔಟಾದರೂ ಜೇಮ್ಸ್ ಟೇಲರ್ ಮಾತ್ರ 98 ರನ್ ಸ್ಕೋರ್ ಮಾಡಿ ಶತಕ ಬಾರಿಸುವ ಕನಸು ಕಂಡಿದ್ದರು. ಆದರೆ ಹ್ಯಾಜಲ್‌ವುಡ್ ಎಸೆತವು ಟೇಲರ್ ಪ್ಯಾಡ್‌ಗೆ ಬಡಿದು ಅವರಿಗೆ ಎಲ್‌‌ಬಿಡಬ್ಲ್ಯು ಔಟ್ ನೀಡಲಾಯಿತು.  ಟೇಲರ್ ಈ ಮಧ್ಯೆ ಒಂದು ಸಿಂಗಲ್ ರನ್ ತೆಗೆದುಕೊಳ್ಳಲು ಓಡಿದರು. ಗ್ಲೆನ್ ಮ್ಯಾಕ್ಸೆವೆಲ್ ಅಷ್ಟರಲ್ಲಿ ನೇರವಾಗಿ ಸ್ಟಂಪ್ಸ್‌ಗೆ ಚೆಂಡನ್ನು ಹೊಡೆದು 11ನೇ ಕ್ರಮಾಂಕದ ಆಟಗಾರ ಆಂಡರ್‌ಸನ್ ಅವರನ್ನು ರನೌಟ್‌ ಮಾಡಿದರು. ಟೇಲರ್ ಎಲ್‌ಬಿಡಬ್ಲ್ಯು ರಿವ್ಯೂನಲ್ಲಿ ಔಟಾಗಿಲ್ಲವೆಂದು ತೀರ್ಪು ಬಂದರೂ ಆಂಡರ್‌ಸನ್ ರನ್‌ಔಟ್ ಎಂದು ಡಿಕ್ಲೇರ್ ಮಾಡಲಾಯಿತು.
 
ಆದರೆ ಡಿಆರ್‌ಎಸ್ ಆಟದ ಸ್ಥಿತಿಗತಿ ನಿಯಮದ ಪ್ರಕಾರ, ಬ್ಯಾಟ್ಸ್‌ಮನ್‌ಗೆ ಮೊದಲು ಔಟ್ ನೀಡಿದ ಕೂಡಲೇ ಯಾವುದೇ ಎಸೆತ ಅಥವಾ ಥ್ರೋ ಡೆಡ್ ಎನಿಸುವುದರಿಂದ ರನ್ ಅಥವಾ ಔಟ್ ಲೆಕ್ಕಕ್ಕೆ ಬರುವುದಿಲ್ಲ. ಈ ಘಟನೆಯ ಮರುದಿನ ಆಟದಲ್ಲಿ ತಪ್ಪು ಸಂಭವಿಸಿರುವುದನ್ನು ಐಸಿಸಿ ಒಪ್ಪಿಕೊಂಡಿತು. ಆದರೆ 98 ರನ್ ಗಳಿಸಿದ್ದ ಜೇಮ್ಸ್ ಟೇಲರ್ ಈ ತಪ್ಪಿನಿಂದಾಗಿ 2 ರನ್ ಅಂತರದಲ್ಲಿ ಶತಕ ವಂಚಿತರಾದರು. 

Share this Story:

Follow Webdunia kannada