Webdunia - Bharat's app for daily news and videos

Install App

ಪಾಕ್ ಬೃಹತ್ ಮೊತ್ತಕ್ಕೆ ಶರಣಾದ ಯುಎಇ 210ಕ್ಕೆ ಆಲೌಟ್

Webdunia
ಬುಧವಾರ, 4 ಮಾರ್ಚ್ 2015 (15:33 IST)
ಪಾಕಿಸ್ತಾನ ಮತ್ತು ಯುಎಇ ನಡುವೆ ನೇಪಿಯರ್  ಮೆಕ್ಲೀನ್ ಪಾರ್ಕ್‌ನಲ್ಲಿ ನಡೆಯುತ್ತಿರುವ ಪೂಲ್ ಬಿ 25ನೇ ವಿಶ್ವಕಪ್ ಪಂದ್ಯದಲ್ಲಿ ಪಾಕಿಸ್ತಾನದ ಬೃಹತ್ ಮೊತ್ತ 339ಕ್ಕೆ ಉತ್ತರವಾಗಿ ಯುಎಇ ಎಲ್ಲಾ ವಿಕೆಟ್‌ಗಳನ್ನು 210 ರನ್‌ಗೆ ಕಳೆದುಕೊಂಡು ಸೋಲಪ್ಪಿದೆ.

ಎಮಿರೇಟ್ಸ್ ಪರ ಅನ್ವರ್ 88 ಎಸೆತಗಳಲ್ಲಿ 62 ಮತ್ತು ಕುರಾಮ್ ಖಾನ್ 54 ಎಸೆತಗಳಲ್ಲಿ 43 ಮತ್ತು 33 ಎಸೆತಗಳಲ್ಲಿ 40 ರನ್ ಬಾರಿಸಿದರು. ಸೊಹೇಲ್ ಖಾನ್, ರಿಯಾಜ್ ಮತ್ತು ಶಾಹಿತ್ ಅಫ್ರಿದಿ ತಲಾ ಎರಡು ವಿಕೆಟ್‌ಗಳನ್ನು ಗಳಿಸಿದರು.  ಅಹ್ಮದ್ ಶೆಹಜಾದ್ ತಮ್ಮ 93 ರನ್ ಸ್ಕೋರಿನ ಮೂಲಕ ಪಂದ್ಯಪುರುಷೋತ್ತಮ ಪ್ರಶಸ್ತಿಯನ್ನು ಗಳಿಸಿದರು.
 
ಮೊದಲಿಗೆ ಬ್ಯಾಟಿಂಗ್ ಮಾಡಿದ ಪಾಕಿಸ್ತಾನ ಪರ  ಅಹ್ಮದ್ ಶೆಹಜಾದ್ ಅವರ ಅಬ್ಬರದ 93 ಮತ್ತು ಸೊಹೇಲ್ ಅವರ 70 ರನ್ ಮತ್ತು ಮಿಶಬ್ ಉಲ್ ಹಕ್ ಅವರ 65 ರನ್‌ಗಳ ನೆರವಿನಿಂದ 339 ರನ್ ಬೃಹತ್ ಮೊತ್ತವನ್ನು ದಾಖಲಿಸಿತು. ಯುಎಇ ಪರ ಮಂಜುಳಾ ಗುರುಗೆ 56 ರನ್ ನೀಡಿ 4 ವಿಕೆಟ್ ಕಬಳಿಸಿದರು. ನವೀದ್ ಒಂದು ವಿಕೆಟ್ ಗಳಿಸಿದರು. ಉಳಿದ ಬೌಲರುಗಳು  ಒಂದೂ ವಿಕೆಟ್ ಗಳಿಸದೇ ನಿರಾಶೆ ಮೂಡಿಸಿದರು.

ಪಾಕಿಸ್ತಾನದ ಪರ ಆರಂಭದಲ್ಲೇ ಮಂಜುಳಾ ಗುರುಗೆ ಎಸೆತಕ್ಕೆ ನಸೀರ್ ಜಮ್ಶೇದ್ ಕುರಾಮ್ ಖಾನ್‌ಗೆ ಕ್ಯಾಚಿತ್ತು ಔಟಾದರು. ಹ್ಯಾರಿಸ್ ಸೊಹೇಲ್ ಮತ್ತು ಶೆಹಜಾದ್ ಎರಡನೇ ವಿಕೆಟ್‌ಗೆ 54 ರನ್ ಜೊತೆಯಾಟವಾಡಿದರು. ಶೆಹಜಾದ್ ತಮ್ಮ 11ನೇ ಅರ್ಧಶತಕ ಪೂರೈಸಿದರು. ಇದಕ್ಕೆ ಮುನ್ನ ಶೆಹಜಾದ್ ಸ್ಕೋರು 8 ಮತ್ತು 11 ರನ್‌ಗಳಿದ್ದಾಗ ಎರಡು ಜೀವದಾನ ಪಡೆದರು. ಸೊಹೇಲ್ ಕಳಪೆ ಶಾಟ್‌‍ಗೆ ಬೆಲೆ ತೆತ್ತು ಶೈಮಾನ್ ಅನ್ವರ್‌ಗೆ ಕ್ಯಾಚಿತ್ತು ಔಟಾದರು.

ಮಿಶಬ್ ಉಲ್ ಹಕ್ ಎರಡನೇ ಸತತ ಅರ್ಧಶತಕವನ್ನು ಬಾರಿಸಿದ್ದರಿಂದ ಪಾಕಿಸ್ತಾನ 300 ಗಡಿ ದಾಟಿತು. ನಂತರ ಶಾಹಿದ್ ಅಫ್ರಿದಿ 7 ಎಸೆತಗಳಲ್ಲಿ 21 ರನ್ ಸಿಡಿಸಿ ಪಾಕ್ ಸ್ಕೋರು 6 ವಿಕೆಟ್‌ಗೆ 339 ರನ್ ಮುಟ್ಟಿದೆ.

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಸ್ಟ್ರಾಂಗ್ ಪ್ಲೇಯರ್ ಕೊಹ್ಲಿ ಇರುವಾಗ ವೀಕ್ ಪ್ಲೇಯರ್ ರೋಹಿತ್ ಯಾಕೆ ಕ್ಯಾಪ್ಟನ್ ಆಗಿದ್ದಾರೆ?

ಪ್ರಾಕ್ಟೀಸ್ ಸೆಷನ್ ಗೆ ವಿರಾಟ್ ಕೊಹ್ಲಿ-ಬುಮ್ರಾ ಚಕ್ಕರ್

ಮಗಳ ಬರ್ತ್ ಡೇ ಪಾರ್ಟಿಯಲ್ಲಿ ಟಾಯ್ ಟ್ರೈನ್ ನಲ್ಲಿ ಮಸ್ತ್ ಮಜಾ ಮಾಡಿದ ರೋಹಿತ್ ಶರ್ಮಾ

INDWvsAusw ODI: ಭಾರತ ಮಹಿಳಾ ಕ್ರಿಕೆಟ್ ಆಟಗಾರ್ತಿ ಸ್ನೇಹಾ ರಾಣಾ ತಲೆಗೆ ಗಂಭೀರ ಗಾಯ

INDvsSA test: ಎರಡನೇ ಟೆಸ್ಟ್ ಗೆ ಟೀಂ ಇಂಡಿಯಾದಲ್ಲಿ ಈ ಬದಲಾವಣೆ ಖಚಿತ

Show comments