ಟೀಂ ಇಂಡಿಯಾ ಬಗ್ಗೆ ಹರಿದಾಡುತ್ತಿದೆಯೊಂದು ಜೋಕ್!

Webdunia
ಸೋಮವಾರ, 12 ಜೂನ್ 2017 (09:29 IST)
ಲಂಡನ್: ಟೀಂ ಇಂಡಿಯಾ ದ.ಆಫ್ರಿಕಾ ತಂಡವನ್ನು ಸೋಲಿಸಿ ಚಾಂಪಿಯನ್ಸ್ ಟ್ರೋಫಿ ಸೆಮಿಫೈನಲ್ ಗೇರಿದ ಮೇಲೆ ತಂಡದ ಬಗ್ಗೆ ಟ್ವಿಟರ್ ನಲ್ಲಿ ಕುತೂಹಲಕಾರಿ ತಮಾಷೆಯೊಂದು ಹರಿದಾಡುತ್ತಿದೆ.

 
ಮೊದಲ ಪಂದ್ಯದಲ್ಲಿ ಟೀಂ ಇಂಡಿಯಾ ಪಾಕ್ ವಿರುದ್ಧ ಭರ್ಜರಿಯಾಗಿ ಗೆದ್ದಿತ್ತು. ದ್ವಿತೀಯ ಪಂದ್ಯದಲ್ಲಿ ಲಂಕಾ ವಿರುದ್ಧ ಸೋತಿತ್ತು. ನಿನ್ನೆ ಮತ್ತೆ ದ. ಆಫ್ರಿಕಾ ವಿರುದ್ಧ ಗೆದ್ದಿದೆ. ಇವರಲ್ಲಿ ಪಾಕ್ ಮತ್ತು ಆಫ್ರಿಕಾ ಆಟಗಾರರು ಹಸಿರು ಬಣ್ಣದ ಸಮವಸ್ತ್ರಧಾರಿಗಳು.

ಹಾಗಾಗಿ ಭಾರತ ತಂಡಕ್ಕೆ ಹಸಿರು ಸಮವಸ್ತ್ರಧಾರಿಗಳನ್ನು ನೋಡಿದರೆ ಆಡಲು ಎಲ್ಲಿಲ್ಲದ ಉತ್ಸಾಹ ಬರುತ್ತದೆ. ಲಂಕಾ ನೇರಳೆ ಬಣ್ಣದ ಸಮವಸ್ತ್ರ ಧರಿವುದರಿಂದ ಅವರ ವಿರುದ್ಧ ಸೋತಿತು. ಆದರೆ ಹಸಿರು ಬಣ್ಣದ ಅಂಗಿ ತೊಟ್ಟವರೆಂದರೆ ಅದು ಪಾಕಿಸ್ತಾನ ತಂಡವೆಂದುಕೊಂಡು ಟೀಂ ಇಂಡಿಯಾ ಎಲ್ಲಿಲ್ಲದ ಉತ್ಸಾಹದಲ್ಲಿ ಆಡುತ್ತದೆ ಎಂದು ಟ್ವಿಟರಿಗರು ತಮಾಷೆ ಮಾಡುತ್ತಿದ್ದಾರೆ.

ಇದೀಗ ಸೆಮಿಫೈನಲ್ ನಲ್ಲಿ ಭಾರತಕ್ಕೆ ಬಾಂಗ್ಲಾದೇಶ ಎದುರಾಳಿ. ಬಾಂಗ್ಲಾ ಆಟಗಾರರೂ ಹಸಿರು ಸಮವಸ್ತ್ರ ಧರಿಸುವುದರಿಂದ ಮುಂದಿನ ಸರದಿ ಬಾಂಗ್ಲಾದ್ದು ಎಂದು ಟ್ವಿಟರ್ ನಲ್ಲಿ ಸಂದೇಶಗಳು ಹರಿದಾಡುತ್ತಿವೆ. ಇಂತಹದ್ದೊಂದು ಲಾಜಿಕ್ ಹುಟ್ಟು ಹಾಕಿರುವುದು ಮಾಜಿ ಕ್ರಿಕೆಟಿಗ ವೀರೇಂದ್ರ ಸೆಹ್ವಾಗ್ ಎನ್ನುವುದು ವಿಶೇಷ!

http://kannada.fantasycricket.webdunia.com
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ
ಎಲ್ಲವನ್ನೂ ನೋಡು

ಓದಲೇಬೇಕು

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಎಲ್ಲವನ್ನೂ ನೋಡು

ಸುದ್ದಿ ಜಗತ್ತು

IND VS ZIM: ಜಿಂಬಾಬ್ವೆ ವಿರುದ್ಧ ಗೆದ್ದು ಬೀಗಿ ಟಿ20 ಸೋಲಿನ ಸರಣಿಗೆ ಅಂತ್ಯ ಹಾಡಿದ ಭಾರತ

IND vs ZIM: ಭಾರತದ ಯುವ ಬೌಲರ್‌ಗಳಿಗೆ ತತ್ತರಿಸಿದ ಜಿಂಬಾಬ್ವೆ, ಗಳಿಸಿದ ರನ್ ಎಷ್ಟು ಗೊತ್ತಾ

IND vs ZIM: ಟೀಂ ಇಂಡಿಯಾಗೆ ಇಂದಿನಿಂದ ಜಿಂಬಾಬ್ವೆ ಟಿ20 ಸರಣಿ: ಲೈವ್ ಎಲ್ಲಿ ವೀಕ್ಷಿಸಬೇಕು ಇಲ್ಲಿದೆ ವಿವರ

Video: ಕೆಸರನ್ನು ಲೆಕ್ಕಿಸದೆ ಬರಿಗಾಲದಲ್ಲಿ ವೃಂದಾವನಕ್ಕೆ ಭೇಟಿ ನೀಡಿದ ವಿರಾಟ್‌- ಅನುಷ್ಕಾ ದಂಪತಿ

ಟೀಂ ಇಂಡಿಯಾ ಮುಂದಿನ ಸರಣಿಯ ವೇಳಾಪಟ್ಟಿ ಇಲ್ಲಿದೆ

ಮುಂದಿನ ಸುದ್ದಿ
Show comments