Select Your Language

Notifications

webdunia
webdunia
webdunia
webdunia

ಡೆರೆನ್ ಬ್ರೇವೊ ಶತಕ, ಗೇಬ್ರಿಯಲ್ ಮಾರಕ ಬೌಲಿಂಗ್, ವಿಂಡೀಸ್ ಫೈನಲ್‌ಗೆ ಲಗ್ಗೆ

ಡೆರೆನ್  ಬ್ರೇವೊ ಶತಕ, ಗೇಬ್ರಿಯಲ್ ಮಾರಕ ಬೌಲಿಂಗ್, ವಿಂಡೀಸ್ ಫೈನಲ್‌ಗೆ ಲಗ್ಗೆ
ಬಾರ್ಬಡೋಸ್: , ಶನಿವಾರ, 25 ಜೂನ್ 2016 (17:22 IST)
ಡೆರೆನ್ ಬ್ರೇವೊ ಅವರ ಮೂರನೇ ಶತಕ ಮತ್ತು ಶಾನನ್ ಗೇಬ್ರಿಯನ್ ಅವರ ಚೇತೋಹಾರಿ ವೇಗದ ಬೌಲಿಂಗ್ ನೆರವಿನಿಂದ ವೆಸ್ಟ್ ಇಂಡೀಸ್ ತ್ರಿಕೋನ ಸರಣಿಯಲ್ಲಿ ದಕ್ಷಿಣ ಆಫ್ರಿಕಾವನ್ನು 100 ರನ್‌ಗಳಿಂದ ಸೋಲಿಸುವ ಮೂಲಕ ಫೈನಲ್‌‍ಗೆ ಲಗ್ಗೆ ಹಾಕಿದೆ. 
 
 ಬ್ರೇವೊ ಅವರ ಅಬ್ಬರದ 102 ರನ್ ಅವರಿಗೆ ಪಂದ್ಯ ಶ್ರೇಷ್ಟ ಪ್ರಶಸ್ತಿ ತಂದುಕೊಟ್ಟಿದೆ.ಒಂದು ಹಂತದಲ್ಲಿ 21ಕ್ಕೆ 4 ವಿಕೆಟ್ ಕಳೆದುಕೊಂಡಿದ್ದ ವೆಸ್ಟ್ಇಂಡೀಸ್ ತಂಡವು ಚೇತರಿಸಿಕೊಂಡು 285 ರನ್ ಮುಟ್ಟಲು ಮುನ್ನಡೆಸಿದ್ದರು. 
 
ಗೇಬ್ರಿಯಲ್ ತಮ್ಮ ಎರಡನೇ ಏಕದಿನದಲ್ಲಿ ದಕ್ಷಿಣ ಆಫ್ರಿಕಾದ ಮೇಲಿನ ಕ್ರಮಾಂಕವನ್ನು ಉರುಳಿಸಿ ಕ್ವಿಂಟನ್ ಡಿ ಕಾಕ್, ಪ್ಲೆಸಿಸ್, ಡಿ ವಿಲಿಯರ್ಸ್ ಮಂತಾದವರ ವಿಕೆಟ್‌ಗಳನ್ನು ಉರುಳಿಸಿದರು. 
 
ಈ ಹಿನ್ನಡೆಯಿಂದ ಚೇತರಿಸಿಕೊಳ್ಳದ ದಕ್ಷಿಣ ಆಫ್ರಿಕಾ 46 ಓವರುಗಳಲ್ಲಿ  186 ರನ್‌ಗೆ ಎಲ್ಲಾ ವಿಕೆಟ್ ಕಳೆದುಕೊಂಡು ಸೋಲಪ್ಪಿದೆ.  ಮಾರ್ಕೆಲ್ ಮತ್ತು ತಾಹಿರ್ ನಡುವೆ 51 ರನ್ ಕೊನೆಯ ವಿಕೆಟ್ ಜತೆಯಾಟದ ನಡುವೆಯೂ ಸೋಲನ್ನು ತಪ್ಪಿಸಿಕೊಳ್ಳಲಾಗಲಿಲ್ಲ.
ಪ್ರೊಟೀಸ್ ವಿರುದ್ಧ ಮೂರು ಪಂದ್ಯಗಳಲ್ಲಿ ಎರಡು ವಿಜಯಗಳಿಂದ ಆತಿಥೇಯ ರಾಷ್ಟ್ರವು ಫೈನಲ್‌‍ಗೆ ಲಗ್ಗೆ ಹಾಕಿದ್ದು, ವಿಶ್ವ ಕಪ್ ವಿಜೇತ ಆಸ್ಟ್ರೇಲಿಯಾವನ್ನು ಎದುರಿಸಿದೆ. ದಕ್ಷಿಣ ಆಫ್ರಿಕಾ 10 ವರ್ಷಗಳಲ್ಲೇ ಫೈನಲ್ ತಲುಪಲು ವಿಫಲವಾಗಿದ್ದು ಇದೇ ಮೊದಲ ಬಾರಿ. 

ತಾಜಾ ಸುದ್ದಿಗಳಿಗಾಗಿ ವೆಬ್ ದುನಿಯಾ ಮೊಬೈಲ್ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ
 

Share this Story:

Follow Webdunia kannada

ಮುಂದಿನ ಸುದ್ದಿ

ಸಚಿನ್‌ಗೆ ಸಿಕ್ಕಿದ ಬಳಿಕ ವಿರಾಟ್ ಕೊಹ್ಲಿಗೆ ಭಾರತ್ ರತ್ನ ನೀಡಲು ಮನವಿ